ಚೆನ್ನೈ: ಉಗ್ರ ತರಬೇತಿ ಹಾಗೂ ನೇಮಕಾತಿ ಮಾಡಿಕೊಳ್ಳುತ್ತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಸುಮಾರು 30 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾ ನಡೆಸಿದೆ.
ಅಧಿಕಾರಿಗಳ ತಂಡ ತಮಿಳುನಾಡಿನ ಕೊಯಮತ್ತೂರು ಮತ್ತು ಚೆನ್ನೈನಲ್ಲೂ ದಾಳಿ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದ್ದು. ದಕ್ಷಿಣ ಭಾರತದಲ್ಲಿ ಉಗ್ರ ತರಬೇತಿ ಕೇಂದ್ರಗಳನ್ನು ನಿರ್ನಾಮ ಮಾಡುವ ಉದ್ದೇಶದಿಂದ ತಪಾಸಣೆ ನಡೆಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಕೊಯಮತ್ತೂರಿನ 21 ಸ್ಥಳಗಳು, ಚೆನ್ನೈನ ಮೂರು ಸ್ಥಳಗಳು, ಹೈದರಾಬಾದ್‌ನ ಐದು ಸ್ಥಳಗಳು ಮತ್ತು ತೆಂಕಶಿಯ ಒಂದು ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದೆ ಎನ್ನಲಾಗಿದೆ.
ಕೊಯಮತ್ತೂರಿನಲ್ಲಿ, ಕೋವೈ ಅರೇಬಿಕ್ ಕಾಲೇಜಿಗೆ ಸಂಬಂಧಿಸಿದ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿಯ ಮೇಲೆ ಅರೇಬಿಕ್ ಕಾಲೇಜಿನ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟು ಮಾತ್ರವಲ್ಲದೆ ಕೊಯಮತ್ತೂರು ಕಾರ್ಪೊರೇಷನ್ ನ 82ನೇ ವಾರ್ಡ್ ಕೌನ್ಸಿಲರ್ ಡಿ.ಎಂ.ಕೆ. ಸದಸ್ಯರ ಮನೆಯಲ್ಲೂ ತಪಾಸಣೆ ನಡೆಸಲಾಯಿತು. ಕೊಯಮತ್ತೂರಿನ ಪೆರುಮಾಳ್ ಕೋವಿಲ್ ಸ್ಟ್ರೀಟ್ ನ ಎಂ. ಮುಬಾಶಿರಾ ಅವರ ಮನೆ ಮೇಲೆ ದಾಳಿ ನಡೆಸಿ ಅವರ ಪತಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Lucknow: ಮನೆ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸೇರಿ ಐವರು ಸಾವು