Advertisement

ಇಸ್ರೇಲ್‌ ಎಂಬೆಸಿ ಸ್ಫೋಟ ಪ್ರಕರಣ : ಎನ್‌ಐಎ ನೇತೃತ್ವದಲ್ಲಿ ತನಿಖೆ

10:28 PM Jan 31, 2021 | Team Udayavani |

ನವದೆಹಲಿ: ಇಸ್ರೇಲ್‌ ರಾಯಭಾರ ಕಚೇರಿ ಆವರಣದಲ್ಲಿ ಸಂಭವಿಸಿದ ಸ್ಫೋಟದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ಖಚಿತಪಡಿಸಿವೆ.

Advertisement

ಇದರ ಜತೆಗೆ ಇಸ್ರೇಲ್‌ ಗುಪ್ತಚರ ಸಂಸ್ಥೆ “ಮೊಸ್ಸಾದ್‌’ ಕೂಡ ದೇಶದ ತನಿಖಾ ಸಂಸ್ಥೆಗಳ ಜತೆಗೆ ಸಹಕಾರ ನೀಡುತ್ತಿದೆ. ಮತ್ತೂಂದು ಬೆಳವಣಿಗೆಯಲ್ಲಿ ಸ್ಫೋಟ ಸಂಭವಿಸಿದ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಲು ಬೇಕಾಗಿರುವ ಅಂಶಗಳನ್ನು ದೆಹಲಿ ಪೊಲೀಸರು ತೆರವುಗೊಳಿಸಿದ್ದಾರೆ.

ಹೀಗಾಗಿ, ತನಿಖೆಯ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಇಸ್ರೇಲಿ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಸಂಜೆ 5 ಗಂಟೆಗೆ ಕರ್ತವ್ಯ ಮುಗಿಸಿ ತೆರಳಿದ್ದಾರೆ. ನಂತರ ಪೊಲೀಸರು ಸಾಕ್ಷ್ಯ ಸಂಗ್ರಹಿಸಲು ಬೇಕಾಗಿದ್ದ ಅಂಶಗಳನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ:ಮತ್ತೆ ರಾಹುಲ್ ಗಾಂಧಿಗೆ ಒಲಿಯಲಿದೆ ಕಾಂಗ್ರೇಸ್‌ ಅಧ್ಯಕ್ಷ ಪಟ್ಟ : ದಿಲ್ಲಿ ಕಾಂಗ್ರೇಸ್ ನಿರ್ಣಯ

Advertisement

Udayavani is now on Telegram. Click here to join our channel and stay updated with the latest news.

Next