Advertisement

NIA: ಉಗ್ರ ಮಸೂದ್‌ ಆಪ್ತನ ವಿರುದ್ಧ ಎನ್‌ಐಎ ಆರೋಪಪಟ್ಟಿ

11:00 PM Nov 15, 2023 | Team Udayavani |

ನವದೆಹಲಿ: ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರಲು ಯೋಜನೆ ರೂಪಿಸಿದ ಆರೋಪದಲ್ಲಿ ಜೈಶ್‌-ಎ ಮೊಹಮ್ಮದ್‌(ಜೆಇಎಂ) ಮುಖ್ಯಸ್ಥ ಮಸೂದ್‌ ಅಜರ್‌ನ ಬಲಗೈ ಬಂಟ ಸೇರಿದಂತೆ ಇಬ್ಬರ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿದೆ. ಉಗ್ರ ಮಸೂದ್‌ನ ಆಪ್ತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಬ್ಟಾಸ್‌ಪುರದ ನಿವಾಸಿ ಮೊಹಮ್ಮದ್‌ ದಿಲಾವರ್‌ ಇಕ್ಬಾಲ್‌ ಹಾಗೂ ಆತನ ಸಹಚರ ಮಾಜ್‌ ಖಾನ್‌ ಕಾಶ್ಮೀರಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಸಿದೆ. ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ದಿಲಾವರ್‌ ಯುವಕರಿಗೆ ಪ್ರೇರೇಪಿಸುತ್ತಿದ್ದ.

Advertisement

ಅಲ್ಲದೇ ಕುಪ್ವಾರಾ ನಿವಾಸಿ ಮೊಹಮ್ಮದ್‌ ಉಬೈದ್‌ ಮಲಿಕ್‌ನನ್ನು ಉಗ್ರ ಸಂಘಟನೆ ಜೆಇಎಂ ಸೇರುವಂತೆ ಪ್ರೇರೇಪಿಸಿದ್ದ ಎಂದು ಎನ್‌ಐಎ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next