Advertisement
ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಕುರಿತ ಅರ್ಜಿ ವಿಚಾರಣೆ ನಡೆಯುತ್ತಿತ್ತು ಎನ್ನಲಾಗಿದೆ ಈ ವೇಳೆ ನ್ಯಾಯಾಧೀಶರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದಿದ್ದು ಇದು ವಿಕೋಪಕ್ಕೆ ತಿರುಗಿ ಘರ್ಷಣೆಗೆ ಕಾರಣವಾಗಿದೆ ಕೊನೆಗೆ ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿ ವಕೀಲರನ್ನು ನ್ಯಾಯಾಲಯದಿಂದ ಹೊರ ಕಲಿಸುವ ಪ್ರಯತ್ನ ನಡೆದಿದೆ ಈ ವೇಳೆ ಪೊಲೀಸರು ಹಾಗೂ ವಕೀಲರ ನಡುವೆ ಘರ್ಷಣೆಗಳು ನಡೆದು ಬಳಿಕ ಪೊಲೀಸರು ನ್ಯಾಯಾಲಯದ ಒಳಗಿದ್ದ ಖುರ್ಚಿಗಳನ್ನು ಎತ್ತಿ ವಕೀಲರನ್ನು ನ್ಯಾಯಾಲಯದಿಂದ ಹೊರ ಹಾಕಿದ್ದಾರೆ, ಈ ಘರ್ಷಣೆಯಲ್ಲಿ ಕೆಲ ವಕೀಲರಿಗೆ ಕೈ, ಕಾಲಿಗೆ ಸಣ್ಣ ಮಟ್ಟದ ಗಾಯಗಳಾಗಿದ್ದು, ಪೊಲೀಸರ ವರ್ತನೆ ವಿರುದ್ಧ ವಕೀಲರು ನ್ಯಾಯಾಲಯದ ಹೊರಗೆ ಪ್ರತಿಭಟನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ಕೊಠಡಿಯಲ್ಲಿ ಗದ್ದಲ ಎಬ್ಬಿಸುತ್ತಿದ್ದ ವಕೀಲರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಅಷ್ಟುಮಾತ್ರವಲ್ಲದೆ ನ್ಯಾಯಾಲಯದ ಕೊಠಡಿಯಲ್ಲಿದ್ದ ಕುರ್ಚಿಗಳನ್ನು ಎತ್ತಿ ನ್ಯಾಯಾಲಯದ ಕೊಠಡಿಯಿಂದ ವಕೀಲರನ್ನು ಹೊರ ಓಡಿಸಿದ್ದಾರೆ. ಇದಾದ ನಂತರ ವಿವಾದ ಮತ್ತಷ್ಟು ಹೆಚ್ಚಾಗಿ. ಘಟನೆಯನ್ನು ಖಂಡಿಸಿ ನ್ಯಾಯಾಲಯದ ಹೊರಗೆ ವಕೀಲರು ಧರಣಿ ನಡೆಸಿ ನ್ಯಾಯಾಧೀಶರು ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
Related Articles
ಮಾಹಿತಿ ಪ್ರಕಾರ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು ಎನ್ನಲಾಗಿದ್ದು ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಮುಂದಿನ ದಿನಕ್ಕೆ ಮುಂದೂಡಿದ್ದಾರೆ ಆದರೆ ವಕೀಲರು ವಿಚಾರಣೆ ಇಂದೇ ನಡೆಸಬೇಕೆಂದು ಪಟ್ಟುಹಿಡಿದಿದ್ದರು, ಒಂದು ವೇಳೆ ವಿಚಾರಣೆ ನಡೆಸಲು ಸಾಧ್ಯವಾಗದಿದ್ದರೆ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿ ಎಂದು ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದ್ದರು ಆದರೆ ನ್ಯಾಯಾಧೀಶರು ತಮ್ಮ ಹೇಳಿಕೆಗೆ ಅಚಲವಾಗಿದ್ದು, ಇಂದು ಪ್ರಕರಣವನ್ನು ವರ್ಗಾವಣೆ ಮಾಡುವುದಿಲ್ಲ ಅಥವಾ ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿ ವಿಚಾರಣೆಯ ಮುಂದಿನ ದಿನಾಂಕವನ್ನು ಹೇಳಿದ್ದರು ಇದರಿಂದ ಕುಪಿತಗೊಂಡ ವಕೀಲರು ನ್ಯಾಯಾಧೀಶರ ಜೊತೆ ಮಾತಿನ ಚಕಮಕಿ ನಡೆಸಿ ಬಳಿಕ ವಿಕೋಪಕ್ಕೆ ತಿರುಗಿ ಘರ್ಷಣೆ ಏರ್ಪಟ್ಟಿದೆ.
Advertisement