Advertisement
ಸಂಜೆ ಆಗಮಿಸಿದ ಶಿವರಾಜ್‌ಕುಮಾರ್ ಹಾಗೂ ತಂಡವನ್ನು ಕಲ್ಪತರು ವೃತ್ತದಿಂದ ಅಭಿಮಾನಿಗಳು ಬೈಕ್ ರ‍್ಯಾಲಿ ಮೂಲಕ ಘೋಷಣೆ ಕೂಗುತ್ತಾ, ಜಯಕಾರ ಹಾಕುತ್ತಾ ಲೀಲಾ ಚಿತ್ರಮಂದಿರಕ್ಕೆ ಕರೆತಂದರು. ಚಿತ್ರ ಮಂದಿರದ ಆವರಣದಲ್ಲಿ3 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ತಮ್ಮ ನಾಯಕನನ್ನು ನೇಡಲು ನೆರೆದಿದ್ದರು, ಶಿವರಾಜ್ ಕುಮಾರ್ ಅವರನ್ನು ಕಂಡೊಡನೆ ಹೋ ಎಂದು ಕೂಗುತ್ತಾ ಚಪ್ಪಾಳೆ ತಟ್ಟಿ ಹೂಮಳೆ ಗರೆದು ಅಭಿಮಾನ ಮೆರೆದರು.
ರಸ್ತೆಯಿಂದ ಹಿಡಿದು ಲೀಲಾ ಚಿತ್ರ ಮಂದಿರದ ಆವರಣಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಅವರ ಕಾರಿಗೆ ಮುತ್ತಿಕೊಂಡರು. ಪ್ರಯಾಸ ಪಟ್ಟು ಕಾರಿನಿಂದ ಹೊರಬಂದು ಕಾರಿನ ಮೇಲೇರಿ ಅಭಿಮಾನಿಗಳತ್ತ ಕೈಬೀಸಿದರು. ನಂತರ ಬಿಗಿ ರಕ್ಷಣೆಯಲ್ಲಿ ನೂಕು ನುಗ್ಗಲಿನ ನಡುವೆ ಚಿತ್ರಮಂದಿರ ಪ್ರವೇಶಿಸಿ ತಂಡದೊಂದಿಗೆ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ವಂದಿಸಿ, ಹೆಣ್ಣುಮಕ್ಕಳಿಗೋಸ್ಕರವೇ ವೇದ ಚಿತ್ರ ತಯಾರಿಸಿದ್ದು, ಎಲ್ಲರೂ ನೋಡುವಂತೆ ಹುರಿ ದುಂಬಿಸಿ, ಮುಂದಿನ ಚಿತ್ರದ ಟ್ರೈಲರ ನ್ನು ಹುಣಸೂರಿನಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿ, ಚಿತ್ರದ ಹಾಗೂ ಬೊಂಬೆ ಹಾಡುತೈತೆ ಹಾಡು ಹಾಡಿ, ಕುಣಿದು ಕುಪ್ಪಳಿಸಿ ರಂಜಿಸಿದರು. ಇದೇ ರೀತಿ ತಂಡದ ನಾಯಕಿ ಗಾನವಿ ಲಕ್ಷ್ಮಣ್ ಸಹ ಹಾಡು ಹಾಡಿ, ಸಿನಿಮಾದ ಡೈಲಾಗ್ ಹೇಳಿ ಚಪ್ಪಾಳೆ ಗಿಟ್ಟಿಸಿದರು.