Advertisement

ಐಪಿಎಲ್ ನಲ್ಲಿ ಆಡಲು ತನ್ನ ಆಟಗಾರರಿಗೆ ಅನುಮತಿ ನೀಡಲಿದೆ ಕಿವೀಸ್

06:22 PM Jul 23, 2020 | keerthan |

ವೆಲ್ಲಿಂಗ್ಟನ್: ಕೋವಿಡ್-19 ಸೋಂಕು ಭೀತಿಯ ನಡುವೆ ಈ ಬಾರಿಯ ಐಪಿಎಲ್ ನಡೆಯುವುದು ಬಹುತೇಕ ಖಚಿತವಾಗಿದೆ. ಸಪ್ಟೆಂಬರ್ ಅಂತ್ಯದಲ್ಲಿ ಯುಎಇ ನಲ್ಲಿ ಐಪಿಎಲ್ ನಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ನಡುವೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಐಪಿಎಲ್ ನಲ್ಲಿ ಆಡಲು ಅನುಮತಿ ನೀಡಲಿದೆ ಎಂದು ವರದಿಯಾಗಿದೆ.

Advertisement

ಐಪಿಎಲ್ ನಲ್ಲಿ ಆಡಲು ನಮ್ಮ ಆಟಗಾರರಿಗೆ ನಾವು ಅನುಮತಿ ನೀಡುತ್ತೇವೆ. ಆದರೆ ಭಾಗವಹಿಸುವ ಅಂತಿಮ ನಿರ್ಧಾರ ಆಟಗಾರರಿಗೆ ಬಿಟ್ಟಿದ್ದು ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ವಕ್ತಾರ ರಿಚರ್ಡ್ ಬೂಕ್ ಹೇಳಿದ್ದಾರೆ.

ಐಪಿಎಲ್ ನಲ್ಲಿ ಕಿವೀಸ್ ನ ಆರು ಆಟಗಾರರು ಭಾಗವಹಿಸುತ್ತಾರೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ಜಿಮ್ಮಿ ನೀಶಮ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಲ್ಯೂಕಿ ಫರ್ಗುಸನ್, ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಿಚೆಲ್ ಮೆಕ್ ಲಾಗೆನ್ ಮತ್ತು ಟ್ರೆಂಟ್ ಬೋಲ್ಟ್, ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕೇನ್ ವಿಲಿಯಮ್ಸನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಿಚೆಲ್ ಸ್ಯಾಂಟ್ನರ್ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next