Advertisement

ಆಸ್ಕರ್‌ಗೆ ನ್ಯೂಟನ್‌ ಆಯ್ಕೆ; ಪ್ರಿಯಾಂಕಾಗೆ ತೀವ್ರ ಅಸಮಧಾನ 

03:55 PM Sep 26, 2017 | Team Udayavani |

ಮುಂಬಯಿ: ಪ್ರತಿಷ್ಠಿತ ಆಸ್ಕರ್‌ಗೆ ಬಾಲಿವುಡ್‌ನ‌ ನ್ಯೂಟನ್‌ ಚಿತ್ರ ಆಯ್ಕೆ ಮಾಡಿರುವುದಕ್ಕೆ ಬಾಲಿವುಡ್‌ನ‌ ಹಲವರು ಸಂತಸ ವ್ಯಕ್ತ ಪಡಿಸಿ ಫಿಲ್ಮ್ ಫೆಡರೇಷನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಚಿತ್ರವನ್ನು ಆಸ್ಕರ್‌ಗೆ ಆಯ್ಕೆ ಮಾಡಿದ ಕುರಿತು ಬಾಲಿವುಡ್‌ ಮತ್ತು ಹಾಲಿವುಡ್‌ನ‌ ಜನಪ್ರಿಯ ನಟಿ ಪ್ರಿಯಾಂಕಾ ಚೋಪ್ರಾಗೆ ತೀವ್ರ ಅಸಮಧಾನ ವಿದೆ ಎಂದು ತಿಳಿದು ಬಂದಿದೆ. 

Advertisement

ಚಿತ್ರ ಆಯ್ಕೆಯಾಗಿರುವ ಕುರಿತು ಪ್ರಿಯಾಂಕಾ ಮತ್ತು ತಾಯಿ ಮಧು ಚೋಪ್ರಾ ಅಸಮಧಾನ ಹೊಂದಿದ್ದು, ತಮ್ಮ ನಿರ್ಮಾಣ ಸಂಸ್ಥೆಯ ಮರಾಠಿ ಚಿತ್ರ ವೆಂಟಿಲೇಟರ್‌ ಆಯ್ಕೆಯಾಗಬೇಕಿತ್ತು ಎನ್ನುವುದು ಇಬ್ಬರ ಅಭಿಪ್ರಾಯವಾಗಿದೆ ಎಂದು ವರದಿಯಾಗಿದೆ.ವೆಂಟಿಲೇಟರ್‌ ಜನ ಮೆಚ್ಚುಗೆಗೆ ಪಾತ್ರವಾಗಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. 

ಎಲ್ಲರ ಹುಬ್ಬೇರಿಸುವಂತೆ ಬ್ಲಾಕ್‌ ಬಸ್ಟರ್‌ ಹಿಟ್‌ ಬಾಹುಬಲಿ ಚಿತ್ರ ಸೇರಿದಂತೆ ಭಾರತದ ವಿವಿಧ ಭಾಷೆಗಳ 26 ಚಿತ್ರಗಳನ್ನು ಹಿಂದಿಕ್ಕಿ ಬಾಲಿವುಡ್‌ನ‌ ‘ನ್ಯೂಟನ್‌’ ಚಿತ್ರ 90 ನೇ ಆಸ್ಕರ್‌ ಪಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. 

ಸೆಪ್ಟಂಬರ್‌ 22 ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಅಮಿತ್‌ ಮಸುರ್ಕರ್‌ ನಿರ್ದೇಶನದ ಪ್ರತಿಭಾನ್ವಿತ ನಟ ರಾಜ್‌ಕುಮಾರ್‌ ರಾವ್‌ ಅಭಿನಯದ ಈ ಚಿತ್ರ ನಕ್ಸಲ್‌ ಪೀಡಿತ ಛತ್ತೀಸ್‌ಘಡದ ದಟ್ಟಾರಣ್ಯದಲ್ಲಿ ನಡೆಯುವ ಚುನಾವಣೆಯ ಕಥಾ ಹಂದರವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next