ನವದೆಹಲಿ: ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ(UAPA)ಯಡಿ ದೆಹಲಿ ಪೊಲೀಸರು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ (ಮೇ 15) ನ್ಯೂಸ್ ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶ ನೀಡಿದೆ.
ಇದನ್ನೂ ಓದಿ:Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್ ಪತ್ತೆ!
ಜಸ್ಟೀಸ್ ಬಿಆರ್ ಗವಾಯಿ ಮತ್ತು ಜಸ್ಟೀಸ್ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಮೇಲ್ಮನವಿಯ ವಿಚಾರಣೆ ನಡೆಸಿ, ಬಂಧನದ ರಿಮಾಂಡ್ ಪ್ರತಿಯನ್ನು ಹಾಜರುಪಡಿಸಿಲ್ಲ, ಈ ನಿಟ್ಟಿನಲ್ಲಿ ಬಂಧನವನ್ನು ದುರ್ಬಲಗೊಳಿಸಿದ್ದು, ಬಂಧನ ಕಾನೂನು ಬಾಹಿರ ಎಂದು ಪರಿಗಣಿಸುವುದಾಗಿ ತಿಳಿಸಿದೆ.
ಜಾಮೀನು ಬಾಂಡ್ ನೀಡಿರುವ ವಿಚಾರಣಾ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಬಿಡುಗಡೆಯ ಆದೇಶ ಹೊರಡಿಸಿರುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಪುರ್ಕಾಯಸ್ಥ ಬಂಧನ ಮತ್ತು ರಿಮಾಂಡ್ ಕಾನೂನು ಬಾಹಿರವಾಗಿದೆ ಎಂದು ಸುಪ್ರೀಂ ತಿಳಿಸಿದೆ. ಕಳೆದ ವರ್ಷ ದೆಹಲಿ ಪೊಲೀಸರು ಪುರ್ಕಾಯಸ್ಥ ಅವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿದ್ದರು.