Advertisement

ರೈತರಿಗಾಗಿ ಅನುಗ್ರಹ ಯೋಜನೆ ಜಾರಿ

06:14 PM Nov 29, 2021 | Team Udayavani |

ಚಿಕ್ಕನಾಯಕನಹಳ್ಳಿ: ಕುರಿ, ಮೇಕೆ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಸರ್ಕಾರ 2.5 ಸಾವಿರದಿಂದ 5 ಸಾವಿರ ರೂ.ವರೆಗೆ ಪರಿಹಾರವನ್ನು ನೀಡುತ್ತಿದ್ದು. ವಿಮೆ ರಹಿತ ಕುರಿ, ಮೇಕೆಗಳ ಮಾಲೀಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹು ದಾಗಿದೆ. ಅನುಗ್ರಹ ಯೋಜನೆ ಕುರಿಗಾಹಿಗಳಿಗೆ ಉಪಯುಕ್ತವಾಗಿದೆ.

Advertisement

ರಾಜ್ಯ ಸರ್ಕಾರ ಅನುಗ್ರಹ ಯೋಜನೆಯಲ್ಲಿ ದೊಡ್ಡ ಕುರಿ ಹಾಗೂ ಮೇಕೆ ಸಾವನ್ನಪ್ಪಿದರೆ 5 ಸಾವಿರ, ಕುರಿ ಹಾಗೂ ಮೇಕೆ ಮರಿ ಸಾವನ್ನಪ್ಪಿದರೆ 2.5 ಸಾವಿರ ಪರಿಹಾರವನ್ನು ನೀಡುತ್ತದೆ. ಸಾವನ್ನಪ್ಪಿದ ಕುರಿಯನ್ನು ಪಶು ಇಲಾಖೆ ವೈದ್ಯರ ಬಳಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು. ಪಶು ವೈದ್ಯರು ಸಾವನ್ನಪ್ಪಿದ ವರದಿಯನ್ನು ಸಮಿತಿ ಮುಂದೆ ನೀಡಿ, ಪರಿಹಾರ ಹಣವನ್ನು ಸಂಬಂಧಪಟ್ಟ ರೈತರಿಗೆ ನೀಡುತ್ತಾರೆ.

ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಅನುಗ್ರಹ ಯೋಜನೆಯು ಕುರಿ ಹಾಗೂ ಮೇಕೆ ಸಾಕಣೆದಾರರ ಕ್ಷೇಮಾಭಿವೃದ್ಧಿಗೆ ರೂಪಗೊಂಡಿದ್ದು, ವಿವಿಧ ಕಾರಣದಿಂದ ಸಾವನ್ನಪ್ಪಿದ ಕುರಿ, ಮೇಕೆಗಳನ್ನು ಹತ್ತಿರದ ಪಶು ವೈದ್ಯಾಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

“ಅನುಗ್ರಹ ಯೋಜನೆ ಮಾಹಿತಿಯನ್ನು ರೈತರಿಗೆ ಮುಟ್ಟಿಸುವ ಕೆಲಸ ಮಾಡಲಾಗು ತ್ತಿದೆ. ಕುರಿ, ಮೇಕೆ ಸಾವನ್ನಪ್ಪಿದರೆ ಸರ್ಕಾರ ಪರಿಹಾರ ನೀಡುತ್ತದೆ. ರಜೆ ದಿನಗಳಲ್ಲಿ ಕುರಿ, ಮೇಕೆ ಸಾವನ್ನಪ್ಪಿದರು ಪರವಾಗಿಲ್ಲ, ಒಂದು ದಿನ ತಡವಾಗಿ ಯಾದರು ಪಶು ಆಸ್ಪತ್ರೆಗೆ ತೆಗೆದುಕೊಂಡು ಬನ್ನಿ, ಸರ್ಕಾರದ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಿ.” ಡಾ.ನಾಗಭೂಷಣ್‌, ಸಹಾಯಕ ನಿರ್ದೇಶಕರು, ಪಶು ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next