Advertisement
ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಟಾಸ್ಕ್ ಪೋರ್ಸ್‌ಸಮಿತಿಗಳ ಕಾರ್ಯ ವೈಖರಿ ಪರಿಶೀಲಿಸಿ ಮಾತನಾಡಿದ ಅವರು, ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.ನಾಗರಿಕರು ಸಹ ಅದಕ್ಕೆ ಪೂರಕವಾಗಿ ಸಹಕಾರ ನೀಡಬೇಕು, ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದುಹೇಳಿದರು.
Related Articles
Advertisement
ಮಹತ್ವದ ದಿನಗಳು: ಜ್ವರ, ಕೆಮ್ಮು, ಶೀತ ಹೀಗೆ ಏನೇಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣವೇ ಕೋವಿಡ್‌ಪರೀಕ್ಷೆ ಮಾಡಿಕೊಳ್ಳುವುದರಿಂದ ಮುಂದಾಗುವಅನಾಹುತಗಳನ್ನು ತಪ್ಪಿಸಬಹುದೆಂದ ಜಿಲ್ಲಾಧಿಕಾರಿಗಳು,ನಾವು ವಯಸ್ಸಿನಲ್ಲಿ ಚಿಕ್ಕವರಿದ್ದೇವೆ, ಕೋವಿಡ್ ಏನೂಮಾಡಲ್ಲ ತಡೆದುಕೊಳ್ಳುತ್ತೇವೆಂದು ಕೋವಿಡ್ ಗಂಟಲುದ್ರವ ಪರೀಕ್ಷೆ ಮಾಡಿಸಿಕೊಳ್ಳದೇ ನಿರ್ಲಕ್ಷ್ಯವಹಿಸುವುದರಿಂದ ಸಾವು ಸಂಭವಿಸುತ್ತವೆ. ಪ್ರಸ್ತುತ ಈಸಂಕಷ್ಟದ ಅವ ಧಿಯಲ್ಲಿ ಪ್ರತಿ ದಿನವೂ ಮಹತ್ವವಾಗಿದೆಎಂದು ಹೇಳಿದರು.
ಹತ್ತಿರದ ಕೋವಿಡ್ ಆಸ್ಪತ್ರೆಗೆ ಸೇರಿಸಿ: ಯಾವುದೇರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಗಂಟಲುದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೊಂಕು ದೃಢ ಪಟ್ಟುಯಾವುದೇ ರೋಗ ಲಕ್ಷಣಗಳಿದ್ದಲ್ಲಿ ನಮ್ಮ ಆರೋಗ್ಯಅ ಧಿಕಾರಿಗಳು ಅಥವಾ ಟಾಸ್ಕ್ ಪೋರ್ಸ್ ಸಮಿತಿಗಳ ಸದಸ್ಯರನ್ನು ಸಂಪರ್ಕಿಸಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಕ್ವಾರಂಟೈನ್ ಇರಬಹುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿಹತ್ತಿರದ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಬಹುದುಎಂದು ವಿವರಿಸಿದರು.
ವಿಡಿಯೋ ಸಂವಾದ: ಮಂಚನಬಲೆ ಗ್ರಾಪಂಉಪಾಧ್ಯಕ್ಷ ಶ್ರೀಧರ್ ಮಾತನಾಡಿ, ಜಿಲ್ಲಾ ಧಿಕಾರಿಗಳುಸರಣಿಯೋಪಾ ದಿಯಲ್ಲಿ ಪ್ರತಿ ಹಳ್ಳಿ ಹಾಗೂ ನಗರಪ್ರದೇಶಗಳ ಪ್ರತಿ ವಾರ್ಡ್‌ಗಳಿಗೆ ಖುದ್ದು ಭೇಟಿ ನೀಡಿಕೋವಿಡ್ ಸೊಂಕಿತರನ್ನು ಹಾಗೂ ಗುಣಮುಖರಾಗಿಹೋಂಐಸೋಲೇಷನ್‌ನಲ್ಲಿ ಇರುವವರನ್ನು ಭೇಟಿಮಾಡಿ, ವಿಡಿಯೋ ಸಂವಾದದ ಮೂಲಕ ಅವರಯೋಗ ಕ್ಷೇಮ ವಿಚಾರಿಸುತ್ತಿದ್ದಾರೆ ಎಂದು ಹೇಳಿದರು.
ಅದರಂತೆ 28 ಸಕ್ರಿಯ ಪ್ರಕರಣಗಳಿರುವ ನಮ್ಮಗ್ರಾಪಂಗೆ ಭೇಟಿ ನೀಡಿ, ಅಧ್ಯಕ್ಷರು, ಸದಸ್ಯರಿಗೆ ಹಾಗೂಸಾರ್ವಜನಿಕರಿಗೆ ಕೋವಿಡ್ ಜಾಗೃತಿ ಮೂಡಿಸಿರುವುದುನಮ್ಮ ಟಾಸ್ಕ್ ಪೋರ್ಸ್ ಸಮಿತಿಗೆ ಧೈರ್ಯಬಂದಿದೆ.ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿ ನಮ್ಮಗ್ರಾಪಂನಿಂದ ಕೋವಿಡ್ ನಿರ್ಮೂಲನೆ ಮಾಡುವುದಾಗಿ ತಿಳಿಸಿ, ಜಿಲ್ಲಾಧಿ ಕಾರಿಗಳ ಭೇಟಿಗೆ ಅಭಿನಂದನೆ ತಿಳಿಸಿದರು. ಜಿಪಂ ಸಿಇಒ ಪಿ.ಶಿವಶಂಕರ್, ತಾಲೂಕು ನೋಡಲ್‌ಅ ಧಿಕಾರಿ ಭಾಸ್ಕರ್, ಗ್ರಾಪಂ ಅಧ್ಯಕ್ಷೆ ಗಾಯತ್ರಮ್ಮ ಮತ್ತುಸದಸ್ಯರು, ಆಶಾ, ಅಂಗನವಾಡಿ ಸಿಬ್ಬಂದಿ, ಟಾಸ್ಕ್ಪೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.