Advertisement

ನವಮಂಗಳೂರು ಬಂದರು ಸೇರಿದಂತೆ ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಅಧಿಕಾರ

01:19 AM Feb 11, 2021 | sudhir |

ಹೊಸದಿಲ್ಲಿ/ ಪಣಂಬೂರು: ಮಂಗಳೂರಿನ ಪಣಂಬೂರಿ ನಲ್ಲಿರುವ ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಸೇರಿದಂತೆ ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡುವ ಕೇಂದ್ರ ಸರಕಾರದ ಕನಸು ನನಸಾಗಿದೆ.

Advertisement

ಇದಕ್ಕೆ ಸಂಬಂಧಿಸಿದ “ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆಗೆ 2020’ಕ್ಕೆ ಬುಧವಾರ ಸಂಸತ್‌ನಲ್ಲಿ ಅನುಮೋದನೆ ಸಿಕ್ಕಿದೆ. 2020ರ ಸೆ. 23ರಂದು ಲೋಕಸಭೆಯಲ್ಲಿ ಇದೇ ಮಸೂದೆಗೆ ಅನುಮೋದನೆ ಲಭಿಸಿತ್ತು.

ಬಂದರು, ನೌಕಾಯಾನ ಮತ್ತು ಜಲಸಾರಿಗೆ ಸಚಿವ ಮನ್ಸುಖ್‌ ಮಾಂಡವೀಯ ಮಾತನಾಡಿ, “ಖಾಸಗೀಕರಣ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿಲ್ಲ. ಪ್ರಮುಖ ಬಂದರು ಮಂಡಳಿಗಳಿಗೆ ಆಡಳಿತದಲ್ಲಿ ತಮ್ಮದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡುತ್ತಿದ್ದೇವೆ. ಖಾಸಗಿ ಬಂದರುಗಳಿಗೆ ಸ್ಪರ್ಧೆ ನೀಡುವುದೇ ಉದ್ದೇಶ’ ಎಂದಿದ್ದಾರೆ.

ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಆರ್‌ಜೆಡಿ, ಡಿಎಂಕೆ, ಸಿಪಿಎಂ, ಸಿಪಿಐ ಸೇರಿದಂತೆ ಹಲವು ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.

ಏನು ಬದಲಾವಣೆ ?
ಆಡಳಿತ ಮಂಡಳಿಯಲ್ಲಿ ಆಗುತ್ತಿದ್ದ ಬಂದರು ಅಭಿವೃದ್ಧಿ ಕುರಿತ ನಿರ್ಣಯಗಳನ್ನು ಕೇಂದ್ರದ ಒಪ್ಪಿಗೆಗೆ ಕಳಿಸಬೇಕಿತ್ತು. ಆದರೆ ಈ ಮಸೂದೆ ಪ್ರಕಾರ ಬಂದರಿನ ಚೇರ್‌ಮನ್‌ ಅವರ ನೇತೃತ್ವದಲ್ಲಿ ನಿರ್ಣಯಗಳಿಗೆ, ಪ್ರಮುಖ ಅಭಿವೃದ್ಧಿ, ಹಣಕಾಸಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಒಪ್ಪಿಗೆ ನೀಡಬಹುದಾಗಿದೆ. ಬಂದರಿನಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡುವ ಜತೆಗೆ ಸ್ಥಳೀಯವಾಗಿ ಮೂಲಸೌಕರ್ಯವನ್ನು ಕ್ಷಿಪ್ರವಾಗಿ ಒದಗಿಸಲು ಸಾಧ್ಯವಾಗಲಿದೆ. ಈಗಿರುವ ಸರ್ವಿಸ್‌ ಪೋರ್ಟ್‌ಗೆ ಬದಲಾಗಿ ಲ್ಯಾಂಡ್‌ ಲಾರ್ಡ್‌ ಮಾದರಿಯಾಗಿ ಬಂದರು ಪರಿವರ್ತನೆಗೊಳ್ಳಲಿದೆ.

Advertisement

1. 1963ರ ಮೇಜರ್‌ ಪೋರ್ಟ್‌ ಟ್ರಸ್ಟ್‌ ಕಾಯಿದೆಯಲ್ಲಿನ ಬೇಡವಾದ ಅಂಶಗಳನ್ನು ತೆಗೆದು ಹಾಕಲಾಗಿದ್ದು ಆ್ಯಕ್ಟ್ಗಳ ಸಂಖ್ಯೆಯನ್ನು 134ರಿಂದ 76ಕ್ಕೆ ಇಳಿಸಲಾಗಿದೆ.
2. ಬಂದರು ಮಂಡಳಿಯಲ್ಲಿ ರೈಲ್ವೇ, ರಕ್ಷಣೆ, ಕಸ್ಟಮ್ಸ್‌, ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚುವರಿಯಾಗಿ ಸದಸ್ಯರಾಗಲಿದ್ದಾರೆ.
3. ಬಂದರು, ಚಟುವಟಿಕೆ, ನಿರ್ವಹಣೆ, ಹಡಗುಗಳ ಮೇಲುಸ್ತುವಾರಿ ಸಹಿತ ಪ್ರಮುಖ ಭಾಗಗಳನ್ನು ಸರಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಖಾಸಗಿ ವಲಯಕ್ಕೆ ನೀಡಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next