ರಾಯ್ಪುರ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಮದುವೆಯ ಆರತಕ್ಷತೆಗೆ ಮುನ್ನ ದಿನವೇ ನವವಿವಾಹಿತ ದಂಪತಿಗಳು ತಮ್ಮ ಮನೆಯ ಕೊಠಡಿಯೊಳಗೆ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಸ್ಲಾಂ (24) ಮತ್ತು ಕಹ್ಕಶಾ ಬಾನೊ (22) ಮೃತ ದುರ್ದೈವಿಗಳು.
ಘಟನೆ ಕುರಿತು ತಿಕ್ರಪಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರ: ಅಸ್ಲಾಂ ಮತ್ತು ಕಹ್ಕಶಾ ಬಾನೊ ಇಬ್ಬರ ವಿವಾಹ ಕಳೆದ ಭಾನುವಾರವಷ್ಟೇ ನೆರವೇರಿದ್ದು ಮಂಗಳವಾರ ರಾತ್ರಿ ಅವರ ಮದುವೆಯ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು ಇದಕ್ಕಾಗಿ ಮನೆ ಮಂದಿಯೆಲ್ಲಾ ಅರತಕ್ಷತೆಯ ತಯಾರಿಯಲ್ಲಿ ನಿರತರಾಗಿದ್ದರೆ ಇತ್ತ ನವ ದಂಪತಿಗಳ ಕೊಠಡಿಯಲ್ಲಿ ವಧುವಿನ ಕಿರುಚಾಟ ಕೇಳಿಬಂದಿದೆ ಕೂಡಲೇ ವಧುವಿನ ತಾಯಿ ಕೊಠಡಿ ಬಳಿ ಬಂದಾಗ ಕೊಠಡಿಯ ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಕೂಡಲೇ ತಾಯಿ ಮನೆಯ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದು ಬಳಿಕ ಮನೆ ಮಂದಿ ಕಿಟಕಿ ಮೂಲಕ ಕೊಠಡಿಯೊಳಗೆ ನೋಡಿದಾಗ ನವ ದಂಪತಿಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ, ಬಳಿಕ ಬಾಗಿಲು ಒಡೆದು ಒಳ ಪ್ರವೇಶಿಸಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ನವ ದಂಪತಿಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ತಿಕ್ರಪಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ನೀಡಿರುವ ಮಾಹಿತಿಯಂತೆ ಇಬ್ಬರ ನಡುವೆ ಯಾವುದೋ ವಿಚಾರವಾಗಿ ಜಗಳವಾಗಿರಬೇಕು ಈ ವೇಳೆ ಪತಿ ಪತ್ನಿಗೆ ಚಾಕುವಿನಿಂದ ಇರಿದು ಬಳಿಕ ತನ್ನನ್ನು ಇರಿದುಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತದೆ ಅದೇನಿದ್ದರೂ ತನಿಖೆ ಬಳಿಕವೇ ನಿಜಾಂಶ ಹೊರಗೆ ಬರಲಿದೆ ಎಂದಿದ್ದಾರೆ.
ಇದನ್ನೂ ಓದಿ: ದಾಬೋಲಿಮ್ ನಲ್ಲಿ ಇಳಿಯಬೇಕಿದ್ದ ಎಂಟು ವಿಮಾನಗಳು ವಿಳಂಬ