Advertisement

ಉಡಾದಲ್ಲಿ ಶೀಘ್ರ ಆನ್‌ಲೈನ್‌ ಸೇವೆ; ಅಧ್ಯಕ್ಷ ಮನೋಹರ ಕಲ್ಮಾಡಿ ಜತೆ ಚುಟುಕು ಸಂದರ್ಶನ

02:53 AM Mar 15, 2022 | Team Udayavani |

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿರುವ ಬಿಜಿಪಿ ಮುಂದಾಳು ಮನೋಹರ್‌ ಕಲ್ಮಾಡಿ  ಜನಸ್ನೇಹಿ ಆಡಳಿತದ ಜತೆ ನಗರದ ಅಭಿವೃದ್ಧಿ, ಇವುಗಳಿಗೆ ತೊಡಕಾಗಿರುವ ಸವಾಲು- ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಉದಯವಾಣಿ ಜತೆಗೆ ಮಾತನಾಡಿದ್ದಾರೆ.

Advertisement

ನಿಮ್ಮ ಅವಧಿಯಲ್ಲಿ ಪ್ರಾಧಿಕಾರವು ಜನರಿಗೆ ಹೇಗೆ ಸ್ಪಂದಿಸಲಿದೆ ?
ಜನರಿಗೆ ಕಚೇರಿ ಅಲೆದಾಟ ಸಮಸ್ಯೆ ಹೋಗಲಾಡಿಸುವ ದೃಷ್ಟಿಯಲ್ಲಿ ಈಗಾಗಲೇ ಹಿಂದಿನ ಅಧ್ಯಕ್ಷ ರಾಘವೇಂದ್ರ ಕಿಣಿ ಅವರು  ಆನ್‌ಲೈನ್‌ ಆ್ಯಪ್‌ ಯೋಜನೆ ಜಾರಿಗೆ ತಂದಿದ್ದು ಇದೀಗ ಕೊನೆಯ ಹಂತದಲ್ಲಿ ಕೆಲಸಗಳು ನಡೆಯುತ್ತಿದೆ. ಆನ್‌ಲೈನ್‌ ವ್ಯವಸ್ಥೆ ಮೂಲಕ ಜನರಿಗೆ ಪ್ರಾಧಿಕಾರದ ಕೆಲಸಗಳನ್ನು ಸುಲಭವಾಗಿಸುತ್ತೇವೆ. ಕೆಲವು ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಆಫ್ಲೈನ್‌ ಮೂಲಕವು ಅರ್ಜಿ ಸ್ವೀಕರಿಸಿ ಸರಿಪಡಿಸುವ ಕೆಲಸವಾಗಲಿದೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಸೇವೆಗೆ ನಮ್ಮ ಪ್ರಯತ್ನ ನಿರಂತರ ಸಾಗಲಿದೆ.

ಸಿಬಂದಿ ಕೊರತೆ ಹೇಗೆ ನಿಭಾಯಿಸುತ್ತೀರಿ ?
ತಾಂತ್ರಿಕ ಸಿಬಂದಿ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಕೆಲಸ ನಡೆಯಲು ಕಷ್ಟ ಸಾಧ್ಯ, ಈಗ 900 ಕಡತಗಳು ಬಾಕಿ ಇವೆೆ. 4 ಜನ ಮಾಡುವ ಕೆಲಸ ಒಬ್ಬರೇ ಮಾಡಬೇಕಿದೆ. ಡಿಸಿ ಕಚೇರಿಯಿಂದ ಹೆಚ್ಚುವರಿ ಸಿಬಂದಿ ನಿಯೋಜಿಸಲು ಜಿಲ್ಲಾಧಿಕಾರಿ ಬಳಿ ಚರ್ಚೆ ನಡೆಸಿದ್ದೇವೆ. ಜನರನ್ನು ಕಾಯಿಸುವ ವ್ಯವಸ್ಥೆ ಇರುವುದಿಲ್ಲ. ವಾರಕ್ಕೆ ಎರಡು ದಿನ ಸ್ಥಳ ಪರಿಶೀಲನೆ ಮತ್ತು ಉಳಿದ ದಿನಗಳಲ್ಲಿ ಕಚೇರಿ ಕೆಲಸ ಮಾಡುತ್ತೇವೆ.

ತುಂಡು ಭೂಮಿ ಸಮಸ್ಯೆಗೆ ಶೀಘ್ರ ಪರಿಹಾರ
ಶಾಸಕ ರಘುಪತಿ ಭಟ್‌ ಅವರ ಅವಿರತ ಶ್ರಮದಿಂದಾಗಿ ಈ ಸಮಸ್ಯೆ ಬಗೆಹರಿಯುವ ಹಂತಕ್ಕೆ ತಲುಪಿದೆ. ಬಡವರ್ಗಕ್ಕೆ ಕೃಷಿ ವಲಯದಲ್ಲಿ ಮನೆ ನಿರ್ಮಿಸಲು ಇರುವ ಸಮಸ್ಯೆಯನ್ನು ಸರಕಾರ ದೂರ ಮಾಡಲಿದೆ. ಈ ನಿಯಮ ಸರಳೀಕರಣ ಬಳಿಕ ಸಾಕಷ್ಟು ಮಂದಿಗೆ ಅನುಕೂಲವಾಗಲಿದೆ.

ಕೆರೆ ಅಭಿವೃದ್ಧಿ , ಮೂಲಸೌಕರ್ಯಕ್ಕೆ ಒತ್ತು
ಕೆರೆ ಸಂರಕ್ಷಣೆ, ಮೂಲ ಸೌಕರ್ಯಕ್ಕೆ ವಿಶೇಷ ಒತ್ತು ನೀಡಲಾಗುವುದು. 4 ಕೆರೆಗಳ ಸಂರಕ್ಷಣೆಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ.  ಜನರು, ಜನಪ್ರತಿನಿಧಿಗಳ ಸಹಕಾರ, ಸಲಹೆ ಪಡೆದು ಅಭಿವೃದ್ಧಿ ಯೋಜನೆ ರೂಪಿಸಲಾಗುವುದು.

Advertisement

ಜನ ಸಂಪರ್ಕ
ಪ್ರಾಧಿಕಾರದ ಕಚೇರಿ ಸಂಪೂರ್ಣ ಜನಸ್ನೇಹಿ ಆಗಿ ರೂಪುಗೊಳ್ಳಲಿದೆ. ಕಚೇರಿ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಚೇರಿಯಲ್ಲಿ ಜನರಿಗೆ ಲಭ್ಯವಿದ್ದು, ಅಹವಾಲು ಸ್ವೀಕರಿಸುತ್ತೇನೆ. ಅಧಿಕಾರಿ, ಸಿಬಂದಿ ಈ ಸಮಯದಲ್ಲಿ ಕಚೇರಿಯಲ್ಲಿ ಜನರಿಗೆ ಸಿಗುತ್ತಾರೆ. 9845166287 ನಂಬರ್‌ಗೆ ಸಂಪರ್ಕಿಸಬಹುದು.

ಮಣಿಪಾಲ ಮಣ್ಣಪಳ್ಳದ ಅಭಿವೃದ್ಧಿಗೆ ಕಾಯಕಲ್ಪ ಸಿಗಬಹುದೇ ?
ಸ್ಥಳೀಯರ ಸಹಕಾರದೊಂದಿಗೆ ಮಣ್ಣಪಳ್ಳ ಪ್ರದೇಶವನ್ನು ಮಾದರಿಯಾಗಿ ರೂಪಿಸುವ ಬಗ್ಗೆ ಯೋಜನೆ ಹಮ್ಮಿಕೊಳ್ಳಲಾಗುವುದು. ಕೆರೆ ಹೂಳೆತ್ತುವುದು, ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಉತ್ತಮ ಪರಿಸರವನ್ನು ನಿರ್ಮಿಸಬೇಕು. ಬೋಟಿಂಗ್‌ ವ್ಯವಸ್ಥೆ ಪುನಃ ಆರಂಭದ ಬಗ್ಗೆ ಪರಿಶೀಲಿಸುತ್ತೇನೆ. ಫ್ಲೋಟಿಂಗ್‌ ರೆಸ್ಟೋರೆಂಟ್‌ (ತೇಲುವ ಹೊಟೇಲ್‌)ನಂಥ ಯೋಜನೆಗಳು ಜಾರಿಗೆ ಬಂದಲ್ಲಿ ಆಕರ್ಷಕ ತಾಣವಾಗಿ ರೂಪುಗೊಳ್ಳಬಹುದು. ಪ್ರವಾಸೋದ್ಯಮ ಇಲಾಖೆ ಜತೆಗೆ ಚರ್ಚಿಸಿ ಮಣ್ಣಪಳ್ಳ ಪ್ರದೇಶ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ಉಡುಪಿ ನಗರ  ಬಿಜೆಪಿ ಅಭಿನಂದನೆ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ (ಉಡಾ)ದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮನೋಹರ್‌ ಎಸ್‌. ಕಲ್ಮಾಡಿ ಮತ್ತು  ಸದಸ್ಯರಾದ ಕಿಶೋರ್‌ ಕರಂಬಳ್ಳಿ, ಸುಮಾ ನಾಯ್ಕ, ಮಾಲತಿ ನಾಯಕ್‌, ಯೋಗೀಶ್‌ ಚಂದ್ರಾಧರ, ಪ್ರವೀಣ್‌ ಕುಮಾರ್‌ ಕಪ್ಪೆಟ್ಟು, ಪ್ರಭಾಕರ ಪೂಜಾರಿ ಅವರಿಗೆ ನಗರ ಬಿಜೆಪಿ ಕಚೇರಿಯಲ್ಲಿ ಸೋಮವಾರ ಉಡುಪಿ ನಗರ ಬಿಜೆಪಿಯಿಂದ ನಗರ ಅಧ್ಯಕ್ಷ ಮಹೇಶ್‌ ಠಾಕೂರ್‌  ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಶಾಸಕ ಕೆ. ರಘುಪತಿ ಭಟ್‌ ಶುಭಹಾರೈಸಿದರು. ಪಕ್ಷದ ವಿವಿಧ ಸ್ತರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಮನೋಹರರನ್ನು ಪಕ್ಷವೇ ಗುರುತಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಎ. ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡಾ ಮಾಜಿ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ,  ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ, ಜಿÇÉಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಅಮೀನ್‌, ಜಿ.ಪಂ. ಮಾಜಿ ಅಧ್ಯಕ್ಷ ದಿನಕರ ಬಾಬುಮತ್ತಿತರರು ಉಪಸ್ಥಿತರಿದ್ದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಮಣಿಪಾಲ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next