Advertisement
ಎಪಿಎಂಸಿ ವರ್ತಕರು, ದಲ್ಲಾಲರು, ಖರೀದಿದಾರರು, ಗ್ರಾಹಕರು, ಔಷಧ ಅಂಗಡಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಜಿಎಸ್‌ಟಿ ವ್ಯಾಪ್ತಿಗೊಳಪಡುವ ಎಲ್ಲರಿಗೂ ಹೊಸ ತೆರಿಗೆ ಪದ್ಧತಿ ಗೊಂದಲಮಯವಾಗಿ ಕಾಡತೊಡಗಿದೆ. ಈ ಬಗ್ಗೆ ಯಾರಲ್ಲೂ ನಿಖರತೆ ಇಲ್ಲ. ಹಾಗಾಗಿ ಜಿಎಸ್‌ಟಿ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನುಅಧಿಕಾರಿಗಳು ಮಾಡಬೇಕಿತ್ತು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.
ನಿಗದಿಪಡಿಸಲಾಗಿದೆ. ವಿವಿಧ ವಲಯಗಳಿಗೆ ಈ ಶೇಕಡವಾರು ಅನ್ವಯವಾಗಲಿದ್ದು, ಸದ್ಯ ಸಗಟು ವ್ಯಾಪಾರಿಗಳು ಹಳೆಯ ದರದಲ್ಲೇ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾಲ್‌ಗಳು, ದೊಡ್ಡ ಹೋಟೆಲ್‌ಗಳೂ ಯಥಾಸ್ಥಿತಿ ಕಾಯ್ದುಕೊಂಡಿವೆ. ಕೇಂದ್ರ ಸರ್ಕಾರ ನಿಗದಿಪಡಿಸುವ ಕೇಂದ್ರೀಯ ತೆರಿಗೆ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ಎಸ್‌ಜಿಎಸ್‌ಟಿ ಬೇರೆ ಬೇರೆಯೋ ಅಥವಾ ಒಂದೇ ಆಗಿರುತ್ತದೆಯೇ ಎನ್ನುವ ಅನುಮಾನ
ವರ್ತಕರನ್ನು ಕಾಡುತ್ತಿದೆ. ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಎಸ್‌ಟಿ) ಜಾರಿಯಿಂದ ಹೊಸ ಆರ್ಥಿಕ ಶಕೆ ಆರಂಭವಾಗಲಿದೆ, ದೇಶದ ಅರ್ಥ ವ್ಯವಸ್ಥೆ ಬದಲಾಗಲಿದೆ, ತೆರಿಗೆ ವಂಚಿಸಿ ಕಾನೂನು ಉಲ್ಲಂಘಿಸುವ ಹಾಗೂ ನಕಲಿ ಕಂಪನಿಗಳ ವಿರುದ್ಧ ಜೈಲುಶಿಕ್ಷೆಯಂತಹ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಜಿಎಸ್‌ಟಿಯನ್ನು
ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಲೆಕ್ಕಪರಿಶೋಧಕ ಸಿ. ಚಂದ್ರಪ್ಪ. ರಾಜ್ಯದ ಜನತೆ ಈಗಾಗಲೇ ವ್ಯಾಟ್‌ಗೆ ಹೊಂದಿಕೊಂಡಿದ್ದರು. ಅಲ್ಲದೆ ಆನ್‌ಲೈನ್‌ನಲ್ಲೂ ಹೆಚ್ಚಿನ ವಹಿವಾಟು ಮಾಡುತ್ತಿದ್ದರು. ಹೀಗಾಗಿ ಜಿಎಸ್‌ಟಿಗೆ ಹೊಂದಿಕೊಳ್ಳುವುದು ಅಷ್ಟೊಂದು ಕಷ್ಟವಾಗದು. ಜಿಎಸ್‌ಟಿ ಜಾರಿಯಿಂದಾಗಿ ಅಬಕಾರಿ ಸುಂಕ, ಮೌಲ್ಯವ ರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮಿ ತೆರಿಗೆ, ಆಕ್ಟಾಯ್ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳೂ ರದ್ದಾಗಿವೆ. ಕಚ್ಚಾ ಆಹಾರ ಪದಾರ್ಥ ಸೇರಿದಂತೆ ಕೆಲವು ಅಗತ್ಯ ವಸ್ತುಗಳಿಗೆ ಜಿಎಸ್‌ಟಿಯಿಂದ ಅನುಕೂಲವೇ ಹೆಚ್ಚು ಎಂಬುದು ಅವರ ಅಭಿಪ್ರಾಯ.
ಒಟ್ಟಿನಲ್ಲಿ ಜಿಎಸ್‌ಟಿಗೆ ಜಿಲ್ಲೆಯ ಜನ ಇನ್ನಷ್ಟೇ ಒಗ್ಗಿಕೊಳ್ಳಬೇಕಿದೆ. ಸದ್ಯಕ್ಕಂತೂ ಹಿಂದಿನ ಪದ್ಧತಿಯೇ ಮುಂದುವರಿದಿದ್ದು, ಜಿಎಸ್ ಟಿಯಿಂದ ಬೆಲೆ ಹೆಚ್ಚಳ ಅಥವಾ ಕಡಿಮೆಯಾದ ಬಗ್ಗೆ ತಿಳಿದುಬಂದಿಲ್ಲ. ಪರೋಕ್ಷ, ಪ್ರತ್ಯಕ್ಷ ಇತರೆ ಎಲ್ಲ ತೆರಿಗೆ ಸೇರಿ ಶೇ. 5.50ರಷ್ಟು ತೆರಿಗೆಯನ್ನು ಪಾವತಿ ಮಾಡುತ್ತಿದ್ದೆವು. ಆದರೆ ಜಿಎಸ್‌ಟಿ ಜಾರಿ ನಂತರ ಔಷ ಧಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಲಾಗಿದೆ. ಆದರೆ ತೆರಿಗೆ ಹೆಚ್ಚಿದೆ ಎಂದು ಔಷಧ ದರಗಳನ್ನು ಹೆಚ್ಚಳ ಮಾಡುವಂತಿಲ್ಲ. ಔಷ ಧ ಕಂಪನಿಗಳೇ ದರ ಇಳಿಕೆ ಮಾಡಿವೆ. ಹೀಗಾಗಿ ಗ್ರಾಹಕರಿಗೆ ಹಳೆಯ ದರದಲ್ಲೇ ಔಷ ಧ ನೀಡುತ್ತಿದ್ದೇವೆ. ಜಿಎಸ್‌ಟಿ ಜಾರಿಯಾಗಿದ್ದರಿಂದ ನಮಗೆ ಅದರ ನಿರ್ವಹಣೆ ಮಾಡುವುದು ಹೇಗೆಂದು ಸರಿಯಾಗಿ ಗೊತ್ತಿಲ್ಲ. ಹಾಗಾಗಿ ಲೆಕ್ಕಪತ್ರ ನಿರ್ವಹಣೆಗೆ ಬಿಕಾಂ ಓದಿರುವವರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ.
ಮಂಜುನಾಥ್, ಔಷಧ ವ್ಯಾಪಾರಿ, ಚಿತ್ರದುರ್ಗ.
Related Articles
ಸಿ. ಚಂದ್ರಪ್ಪ, ಲೆಕ್ಕ ಪರಿಶೋಧಕರು, ಚಿತ್ರದುರ್ಗ.
Advertisement
ಬರ ಎದುರಾಗಿದ್ದರಿಂದ ಕಳೆದ ಡಿಸೆಂಬರ್‌ನಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆದಿಲ್ಲ. ಹೀಗಾಗಿ ಜಿಎಸ್‌ಟಿ ಪರಿಣಾಮ ಇನ್ನೂ ಗೊತ್ತಾಗುತ್ತಿಲ್ಲ. ಈ ಹಿಂದೆ ಖರೀದಿದಾರರಿಂದ ಶೇ. 4ರಂತೆ ವ್ಯಾಟ್ ಸಂಗ್ರಹ ಮಾಡುತ್ತಿದ್ದೆವು. ಈಗ ಜಿಎಸ್‌ಟಿ ಶೇ. 5 ಎಂದು ಹೇಳಲಾಗುತ್ತಿದೆ. ಸುಗ್ಗಿ ಕಾಲ ಬಂದಾಗ ಜಿಎಸ್‌ಟಿಯ ಮರ್ಮ ಏನೆಂಬುದು ಗೊತ್ತಾಗಲಿದೆ.ಆರ್. ನಾಗರಾಜ್, ವರ್ತಕ, ಎಪಿಎಂಸಿ ಮಾರುಕಟ್ಟೆ, ಚಿತ್ರದುರ್ಗ. ಹರಿಯಬ್ಬೆ ಹೆಂಜಾರಪ