ಡಬ್ಲಿನ್: ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 17 ವರ್ಷದ ನ್ಯೂಜಿಲೆಂಡ್ ಆಟಗಾರ್ತಿ ಅಮೆಲಿಯಾ ಕೆರ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಡಬ್ಲಿನ್‌ನಲ್ಲಿ ಐರೆಲಂಡ್ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಅಮೆಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮಾತ್ರವಲ್ಲ 21 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ. 1997ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದಟಛಿ ಆಸ್ಟ್ರೇಲಿಯಾ ತಂಡದ ನಾಯಕಿ ಬೆಲಿಂಡಾ ಅಜೇಯ 229 ರನ್ ಸಿಡಿಸಿದ್ದರು.
ವಿಶೇಷವೆನೆಂದರೆ ಆಗ ಅಮೆಲಿಯಾ ಇನ್ನೂ ಹುಟ್ಟಿರಲಿಲ್ಲ. ಅಮೆಲಿಯಾ ಪಂದ್ಯದುದ್ದಕ್ಕೂ ಐರೆಲಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 145 ಎಸೆತದಿಂದ ಅಜೇಯ 232 ರನ್ ಸಿಡಿಸಿದರು. ಇವರ ಇನಿಂಗ್ಸ್‌ನಲ್ಲಿ 31 ಬೌಂಡರಿ ಮತ್ತು 2 ಮೋಹಕ ಸಿಕ್ಸರ್ ಒಳಗೊಂಡಿತ್ತು. ಇವರ ಸಾಹಸದ ನೆರವಿನಿಂದ ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗೆ 440 ರನ್‌ಗಳಿಸಿತ್ತು.
145 ಎಸೆತದಿಂದ ಅಜೇಯ 232 ರನ್, 21 ವರ್ಷದ ಹಿಂದಿನ ದಾಖಲೆ ಪತನ
ಐರೆಲಂಡ್ ತಂಡದ ವಿರುದಟಛಿ 17 ವರ್ಷದ ಕಿವೀಸ್ ಆಟಗಾರ್ತಿ ವಿಶ್ವದಾಖಲೆ