Advertisement

ಪಾಕಿಸ್ಥಾನ ವಿರುದ್ಧದ ಅಂತಿಮ ಏಕದಿನ ಗೆದ್ದ ನ್ಯೂಜಿಲ್ಯಾಂಡ್‌

12:11 AM May 09, 2023 | Team Udayavani |

ಕರಾಚಿ: ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ ಅಂತಿಮ ಏಕದಿನ ಪಂದ್ಯವನ್ನು 47 ರನ್ನುಗಳಿಂದ ಕಳೆದು ಕೊಂಡ ಪಾಕಿಸ್ಥಾನ ನಂ.1 ರ್‍ಯಾಂಕಿಂಗ್‌ ಪಟ್ಟದಿಂದ ಕೆಳಗಿಳಿದಿದೆ.

Advertisement

ಸರಣಿಯ ಮೊದಲ 4 ಪಂದ್ಯಗಳನ್ನು ಗೆದ್ದ ಪಾಕಿಸ್ಥಾನ ಏಕದಿನ ರ್‍ಯಾಂಕಿಂಗ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಅಗ್ರ ಸ್ಥಾನ ಅಲಂಕರಿಸಿತ್ತು. ಆದರೆ 5ನೇ ಪಂದ್ಯ ವನ್ನು ಗೆದ್ದರಷ್ಟೇ ಅದು ಈ ಸ್ಥಾನ ಉಳಿಸಿಕೊಳ್ಳುತ್ತಿತ್ತು. ಇದಕ್ಕೆ ನ್ಯೂಜಿಲ್ಯಾಂಡ್‌ ಅವಕಾಶ ನೀಡಲಿಲ್ಲ. ಪಾಕ್‌ ಮತ್ತೆ 3ನೇ ಸ್ಥಾನಕ್ಕೆ ಜಾರಿದೆ (112 ಅಂಕ). ಆಸ್ಟ್ರೇಲಿಯ ಮತ್ತು ಭಾರತ ಮೊದಲೆರಡು ಸ್ಥಾನದಲ್ಲಿವೆ (ತಲಾ 113 ಅಂಕ).

ಕರಾಚಿಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 49.3 ಓವರ್‌ಗಳಲ್ಲಿ 299ಕ್ಕೆ ಆಲೌಟ್‌ ಆಯಿತು. ಪಾಕಿಸ್ಥಾನ 46.1 ಓವರ್‌ಗಳಲ್ಲಿ 252ಕ್ಕೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-49.3 ಓವರ್‌ಗಳಲ್ಲಿ 299 (ವಿಲ್‌ ಯಂಗ್‌ 87, ಟಾಮ್‌ ಲ್ಯಾಥಂ 59, ಶಾಹೀನ್‌ ಅಫ್ರಿದಿ 46ಕ್ಕೆ 3, ಉಸ್ಮಾನ್‌ ಮಿರ್‌ 53ಕ್ಕೆ 2, ಶಾದಾಬ್‌ ಖಾನ್‌ 67ಕ್ಕೆ 2). ಪಾಕಿಸ್ಥಾನ-46.1 ಓವರ್‌ಗಳಲ್ಲಿ 252 (ಇಫ್ತಿಕಾರ್‌ ಅಹ್ಮದ್‌ 94, ಆಘಾ ಸಲ್ಮಾನ್‌ 57, ಫ‌ಖರ್‌ ಜಮಾನ್‌ 33, ಹೆನ್ರಿ ಶಿಪ್ಲಿ 34ಕ್ಕೆ 3, ರಚಿನ್‌ ರವೀಂದ್ರ 65ಕ್ಕೆ 3). ಪಂದ್ಯಶ್ರೇಷ್ಠ: ಹೆನ್ರಿ ಶಿಪ್ಲಿ. ಸರಣಿಶ್ರೇಷ್ಠ: ಫ‌ಖರ್‌ ಜಮಾನ್‌.

Advertisement

Udayavani is now on Telegram. Click here to join our channel and stay updated with the latest news.

Next