ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವನಿತಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ – ಬ್ಯಾಟರ್ ಬರ್ನಾಡಿನ್ ಬೆಝುಯಿಡೆನ್‌ಹೌಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
30 ವರ್ಷದ ಆಕೆ ಸ್ಥಾಪಿಸಿದ ದಿ ಎಪಿಕ್ ಸ್ಪೋರ್ಟ್ಸ್ ಪ್ರಾಜೆಕ್ಟ್ ಚಾರಿಟಬಲ್ ಟ್ರಸ್ಟ್ ನತ್ತ ಗಮನ ಹರಿಸಲುಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಬೆಝುಡೆನ್‌ಹೌಟ್ ಅವರು ನ್ಯೂಜಿಲ್ಯಾಂಡ್ ಗೆ ತೆರಳುವ ಮೊದಲು 2014 ರಲ್ಲಿ ಅವರು ಹುಟ್ಟಿದ ದೇಶವನ್ನು ಪ್ರತಿನಿಧಿಸಿದರು 2018 ರಲ್ಲಿ ಕಿವೀಸ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು 20 ಏಕದಿನ (ದಕ್ಷಿಣ ಆಫ್ರಿಕಾಕ್ಕೆ ನಾಲ್ಕು) ಮತ್ತು 29 ಟಿ20 ಗಳಲ್ಲಿ ( ದ.ಆಫ್ರಿಕಾ ಪರವಾಗಿ 7) ಕಾಣಿಸಿಕೊಂಡಿದ್ದಾರೆ.
ಬೆಝುಡೆನ್‌ಹೌಟ್ ಅವರು ನಾರ್ತರ್ನ್ ಡಿಸ್ಟ್ರಿಕ್ ಗಾಗಿ ಆಡಲು ಲಭ್ಯವಿರುತ್ತಾರೆ ಏಕೆಂದರೆ ಮುಂದಿನ ಋತುವಿನಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಉದ್ದೇಶವಿದೆ ಎಂದು ಅವರು ಹೇಳಿದರು.
“ಈ ಪ್ರಯಾಣವು ನನಗೆ ತುಂಬಾ ಕಲಿಸಿದೆ, ನನ್ನೊಂದಿಗೆ ಈ ಹಾದಿಯಲ್ಲಿದ್ದ ಎಲ್ಲರಿಗೂ ನಾನು ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ” ಎಂದು ಅವರು ಹೇಳಿದರು.
“ನಾನು ಕೆಲ ಸಮಯದಿಂದ ನನ್ನ ಕೆಲಸ ಮತ್ತು ಆಟದ ವೃತ್ತಿಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳಲು ಹೆಣಗಾಡಿದ್ದೇನೆ. ಬಹಳಷ್ಟು ಆಲೋಚನೆಗಳ ನಂತರ ನಾನು ನಿವೃತ್ತಿ ಹೊಂದರಲು ಮತ್ತು ಎಪಿಕ್ ಸ್ಪೋರ್ಟ್ಸ್ ಪ್ರಾಜೆಕ್ಟ್ ಮೇಲೆ ನನ್ನ ಸಂಪೂರ್ಣ ಗಮನವನ್ನು ಇರಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.