Advertisement

ನ್ಯೂಜಿಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾಗೆ ಏಕದಿನ ಸರಣಿ

03:45 AM Mar 05, 2017 | Team Udayavani |

ಅಕ್ಲೆಂಡ್‌: ಸಂಘಟಿತ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ 5ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ ಜಯಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 3-2 ರಿಂದ ಸರಣಿ ಜಯ ಸಾಧಿಸಿತು. ಇದಕ್ಕೂ ಮುನ್ನ ಸರಣಿ 2-2 ರಿಂದ ಸಮಬಲದಲ್ಲಿತ್ತು. ಹೀಗಾಗಿ ಅಂತಿಮ ಪಂದ್ಯ ನಿರ್ಣಾಯಕವಾಗಿತ್ತು. 

Advertisement

ಶನಿವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ 149 ರನ್‌ಗೆ ಆಲೌಟ್‌ ಆಯಿತು. ನ್ಯೂಜಿಲೆಂಡ್‌ ಪರ ಕಾಲಿನ್‌ ಡೀ ಗ್ರಾÂನ್‌ಹೋಮ್‌ (32) ಅತೀ ಹೆಚ್ಚು ರನ್‌ ಬಾರಿಸಿದರು. ಉಳಿದಂತೆ ಬ್ಯಾಟ್ಸ್‌ಮನ್‌ಗಳು ದಕ್ಷಣ ಆಫ್ರಿಕಾದ ಬಿಗು ಬೌಲಿಂಗ್‌ ದಾಳಿಗೆ ಉದುರಿದರು. ಕ್ಯಾಗಿಸೋ ರಬಾಡ 3 ವಿಕೆಟ್‌ ಪಡೆದರು. ನಂತರ ಸುಲಭ ಗುರಿ ಬೆನ್ನುಹತ್ತಿದ ದಕ್ಷಿಣ ಆಫ್ರಿಕಾ 32.2 ಓವರ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 150 ರನ್‌ ಬಾರಿಸಿ ಜಯಸಾಧಿಸಿತು. ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್‌ (ಅಜೇಯ 51) ಮತ್ತು ಡೇವಿಡ್‌ ಮಿಲ್ಲರ್‌ (ಅಜೇಯ 45) ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ 41.1 ಓವರ್‌ಗೆ 149/10 (ಕಾಲಿನ್‌ ಡಿ ಗ್ರ್ಯಾನ್‌ಹೋಮ್‌ 32, ಕ್ಯಾಗಿಸೋ ರಬಾಡ 25ಕ್ಕೆ 3, ಇಮ್ರಾನ್‌ ತಾಹೀರ್‌ 14ಕ್ಕೆ 2), ದಕ್ಷಿಣ ಆಫ್ರಿಕಾ 32.2 ಓವರ್‌ಗೆ 150/4 (ಫಾ ಡು ಪ್ಲೆಸಿಸ್‌ 51, ಡೇವಿಡ್‌ ಮಿಲ್ಲರ್‌ 45, ಜೀತನ್‌ ಪಟೇಲ್‌ 26ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next