ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್-ಶ್ರೀಲಂಕಾ ನಡುವೆ ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ಆರಂಭಗೊಂಡ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಮೊದಲ ದಿನ ಕೇವಲ 48 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದ್ದು, ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 2 ವಿಕೆಟಿಗೆ 155 ರನ್ ಮಾಡಿದೆ.
ಡೇವನ್ ಕಾನ್ವೇ ಮತ್ತು ಟಾಮ್ ಲ್ಯಾಥಂ 87 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಬಿರುಸಿನ ಆಟವಾಡಿದ ಕಾನ್ವೇ 78 ರನ್ (108 ಎಸೆತ, 13 ಬೌಂಡರಿ), ಲ್ಯಾಥಂ 21 ರನ್ ಮಾಡಿದರು. ಮೊದಲ ಟೆಸ್ಟ್ ಪಂದ್ಯದ ಹೀರೋ, ಮಾಜಿ ನಾಯಕ ಕೇನ್ ವಿಲಿಯಮ್ಸನ್ 26 ಮತ್ತು ಹೆನ್ರಿ ನಿಕೋಲ್ಸ್ 18 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕಿವೀಸ್ ವಿಕೆಟ್‌ಗಳೆರಡು ಕಸುನ್ ರಜಿತ ಮತ್ತು ಧನಂಜಯ ಡಿ ಸಿಲ್ವ ಪಾಲಾದವು.
ಮೊದಲ ಟೆಸ್ಟ್ ಪಂದ್ಯವನ್ನು ಅಂತಿಮ ಎಸೆತದಲ್ಲಿ ರೋಚಕವಾಗಿ ಜಯಿಸಿರುವ ನ್ಯೂಜಿಲ್ಯಾಂಡ್ 1-0 ಮುನ್ನಡೆಯಲ್ಲಿದೆ.