Advertisement

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

01:17 AM Jan 06, 2025 | Shreeram Nayak |

ಹೊಸದಿಲ್ಲಿ: ಕಾರ್ಮಿಕರ ಕೊರತೆ ಎದು­ರಿ­ಸು­ತ್ತಿರುವ ನ್ಯೂಜಿಲೆಂಡ್‌ ಇದೀಗ ವೀಸಾ ನಿಯಮ ಸಡಿಲ ಗೊಳಿಸಿ ವಲಸಿ­ಗರಿಗೆ ದಾರಿ ಸುಗಮಗೊಳಿಸುತ್ತಿದೆ. ನ್ಯೂಜಿಲ್ಯಾಂಡ್‌ನ‌ಲ್ಲಿ ಉದ್ಯೋಗ ಪಡೆ­ಯು­ವವರಿಗೂ ಹಾಗೂ ಉದ್ಯೋಗ ನೀಡುತ್ತಿರುವ ವರಿಗೆ ಪ್ರಕ್ರಿಯೆಗಳು ಸುಲ­­­ಭವಾಗ ಬೇಕು ಎಂಬ ಗುರಿಯೊಂದಿಗೆ ಈ ಬದಲಾವಣೆಗಳನ್ನು ಮಾಡಲಾಗಿದೆ.

Advertisement

ಕೆಲಸದ ಅನುಭವ, ವೇತನ ಹಾಗೂ ವೀಸಾ ಅವಧಿಗಳಲ್ಲಿ ಕೆಲವು ಮಾರ್ಪಾ­ಡು­ಗಳನ್ನು ಮಾಡಲಾ ಗಿದೆ. ಉದ್ಯೋಗ ಅರಸಿ ವಲಸೆ ಬರುವ ವರಿಗೆ ಕನಿಷ್ಠ 3 ವರ್ಷದ ಅನುಭವ ಇರಬೇಕೆಂಬ ನಿಯಮ ಈ ಹಿಂದೆ ಇತ್ತು. ಇದೀಗ ಅದನ್ನು 2 ವರ್ಷಕ್ಕೆ ಇಳಿಸಲಾಗಿದೆ. ಜತೆಗೆ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವ ಅನುಭವವುಳ್ಳ ಉದ್ಯೋ­ಗಿಗಳಿಗೆ 3 ವರ್ಷಗಳವರೆಗಿನ “ಮಲ್ಟಿ ಎಂಟ್ರಿ ವೀಸಾ’ ಹಾಗೂ ಕಡಿಮೆ ಕೌಶಲವುಳ್ಳ ಉದ್ಯೋಗಿಗಳಿಗೆ 7 ತಿಂಗಳ “ಸಿಂಗಲ್‌ ಎಂಟ್ರಿ ವೀಸಾ’ ನೀಡಲಾಗುವುದು.

“ಅಕ್ರೆಡೇಟೆಡ್‌ ಎಂಪ್ಲಾಯರ್‌ ವರ್ಕ್‌ ವೀಸಾ(ಎಇಡಬ್ಲ್ಯುವಿ)’, “ಸ್ಪೆಸಿಫಿಕ್‌ ಪರ್ಪಸ್‌ ವರ್ಕ್‌ ವೀಸಾ(ಎಸ್‌ಪಿಡ­ಬ್ಲ್ಯುವಿ)’ಗೆ ಇರುವ ಸರಾಸರಿ ವೇತನ ಮಾನದಂಡವನ್ನು ತೆಗೆದುಹಾಕಿದೆ. ಇದು ಭಾರತೀಯ ವಲಸಿಗರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next