ಟ್ರೆಂಟ್ಬ್ರಿಜ್: ನಾಯಕ ಕೇನ್ ವಿಲಿಯಮ್ಸನ್ ಗೈರಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಆಡಲಿಳಿದ ನ್ಯೂಜಿಲ್ಯಾಂಡ್, ಬ್ಯಾಟಿಂಗ್ ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ.
4 ವಿಕೆಟಿಗೆ 295 ರನ್ ಗಳಿಸಿ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ.
ಕೇನ್ ವಿಲಿಯಮ್ಸನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದುದರಿಂದ ಕೊನೇ ಗಳಿಗೆಯಲ್ಲಿ ಹೊರಗುಳಿದರು. ಇವರ ಬದಲು ಟಾಮ್ ಲ್ಯಾಥಂ ತಂಡವನ್ನು ಮುನ್ನಡೆಸಿದರು.
ಅಗ್ರ ಕ್ರಮಾಂಕದ ಬ್ಯಾಟರ್ಗಳು ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ನಿಭಾಯಿಸಿ ಉತ್ತಮ ಪ್ರದರ್ಶನವಿತ್ತರು.
ವಿಲ್ ಯಂಗ್ 47, ಟಾಮ್ ಲ್ಯಾಥಂ 26, ಡೇವನ್ ಕಾನ್ವೆ 46, ಹೆನ್ರಿ ನಿಕೋಲ್ಸ್ 30 ರನ್ ಹೊಡೆದರು. ಡ್ಯಾರಿಲ್ ಮಿಚೆಲ್ (65), ಟಾಮ್ ಬ್ಲಿಂಡೆಲ್ (61) ಕ್ರೀಸ್ನಲ್ಲಿದ್ದಾರೆ.