Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿ ಲ್ಯಾಂಡ್ 268 ರನ್ನಿಗೆ ಆಲೌಟಾಗಿದ್ದು, ದಕ್ಷಿಣ ಆಫ್ರಿಕಾ 24 ರನ್ ಮಾಡುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ. 47ಕ್ಕೆ 4 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಜೆಪಿ ಡ್ಯುಮಿನಿ, ಪ್ರವಾಸಿಗರ ಬೌಲಿಂಗ್ ದಾಳಿಯನ್ನು ಮೆಟ್ಟಿನಿಂತು 118 ರನ್ ಬಾರಿಸಿದ ನಿಕೋಲ್ಸ್ ದಿನದ ಹೀರೋಗಳಾಗಿ ಮೂಡಿಬಂದರು.
ಲ್ಯಾಥಂ (8), ವಿಲಿಯಮ್ಸನ್ (2) ಮತ್ತು ಬ್ರೂಮ್ (0) ಅವರನ್ನು 21 ರನ್ ಆಗುವಷ್ಟರಲ್ಲಿ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿದ ನ್ಯೂಜಿಲ್ಯಾಂಡ್ ಪಾಲಿಗೆ ಆಪದ್ಭಾಂಧವರಾದವರು ಹೆನ್ರಿನಿಕೋಲ್ಸ್. ಅವರಿಗೆ ಕೀಪರ್ ಬ್ರಾಡ್ಲಿ ವಾಟಿÉಂಗ್ (34) ಉತ್ತಮ ಬೆಂಬಲ ವಿತ್ತರು. 101ಕ್ಕೆ 5 ವಿಕೆಟ್ ಬಿದ್ದ ವೇಳೆ ಜತೆಗೂಡಿದ ಇವರು 6ನೇ ವಿಕೆಟಿಗೆ 116 ರನ್ ಪೇರಿಸಿ ತಂಡವನ್ನು ಮೇಲೆತ್ತಿದರು. ಇದು ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್ 6ನೇ ವಿಕೆಟಿಗೆ ದಾಖ ಲಿಸಿದ ಅತ್ಯುತ್ತಮ ಜತೆಯಾಟ ವಾಗಿದೆ. ಇದರೊಂದಿಗೆ ಟೆಡ್ ಬ್ಯಾಡ್‌ಕಾಕ್-ಜಿಫ್ ವಿವಿಯನ್ 1932ರಷ್ಟು ಹಿಂದೆ ಪೇರಿಸಿದ 100 ರನ್ ದಾಖಲೆ ಮುರಿಯಲ್ಪಟ್ಟಿತು. ನಿಕೋಲ್ಸ್ ಅವರ 118 ರನ್ 161 ಎಸೆತಗಳಲ್ಲಿ ದಾಖಲಾಯಿತು. ಇದರಲ್ಲಿ 15 ಬೌಂಡರಿ ಒಳಗೊಂಡಿತ್ತು. ಕೊನೆಯ ಹಂತದಲ್ಲಿ ಸೌಥಿ (27) ಮತ್ತು ಪಟೇಲ್ (ಔಟಾಗದೆ 17) ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ದಕ್ಷಿಣ ಆಫ್ರಿಕಾಕ್ಕೂ ಬೌಲಿಂಗ್ ಬಿಸಿ ತಟ್ಟಿದ್ದು, ಆರಂಭಿಕರಾದ ಸ್ಟೀಫನ್ ಕುಕ್ (3) ಮತ್ತು ಡೀನ್ ಎಲ್ಗರ್ (9) 12 ರನ್ ಆಗಿದ್ದಾಗ ಒಟ್ಟೊಟ್ಟಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ.
Related Articles
Advertisement