Advertisement

ಐರ್ಲೆಂಡ್ ಗೆ ಮತ್ತೆ ಕೈಕೊಟ್ಟ ಲಕ್: ರೋಚಕ ಪಂದ್ಯದಲ್ಲಿ 1 ರನ್ ನಿಂದ ಗೆದ್ದ ನ್ಯೂಜಿಲ್ಯಾಂಡ್

09:15 AM Jul 16, 2022 | Team Udayavani |

ಡಬ್ಲಿನ್: ಐರ್ಲೆಂಡ್ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್ ತಂಡವು ಅಂತಿಮ ಏಕದಿನ ಪಂದ್ಯದಲ್ಲಿ ಒಂದು ರನ್ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ 3-0 ಅಂತರದಿಂದ ಸರಣಿ ಜಯ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ 50 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದರೆ, ಅಮೋಘವಾಗಿ ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 359 ರನ್ ಗಳಿಸಿತು. ಇದರೊಂದಿಗೆ ಒಂದು ರನ್ ಅಂತರದ ಸೋಲನುಭವಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲ್ಯಾಂಡ್ ಗೆ ಮಾರ್ಟಿನ್ ಗಪ್ಟಿಲ್ ಶತಕದ ನೆರವು ನೀಡಿದರು. ಗಪ್ಟಿಲ್ 115 ರನ್ ಗಳಿಸಿದರೆ, ಹೆನ್ರಿ ನಿಕೋಲ್ಸ್ 79 ರನ್, ಗ್ಲೆನ್ ಫಿಲಿಪ್ 47 ರನ್ ಗಳಿಸಿದರು.

ಇದನ್ನೂ ಓದಿ:ಹುಂಡೈ ಟಕ್ಸನ್‌ ಅನಾವರಣ: ಜು.18ರಿಂದ ಮುಂಗಡ ಬುಕಿಂಗ್‌

ಭಾರೀ ಮೊತ್ತದ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ಅನುಭವಿ ಆಟಗಾರ ಪೌಲ್ ಸ್ಟರ್ಲಿಂಗ್ ಮತ್ತು ಯುವ ಆಟಗಾರ ಹ್ಯಾರಿ ಟಕ್ಟರ್ ಶತಕ ಬಾರಿಸಿ ನೆರವು ನೀಡಿದರು. ಸ್ಟರ್ಲಿಂಗ್ 120 ರನ್ ಬಾರಿಸಿದರೆ, ಟಕ್ಟರ್ 108 ರನ್ ಗಳಿಸಿದರು. ಆದರೆ ಕೊನೆಯ ಓವರ್ ನಲ್ಲಿ ಗೆಲುವಿಗೆ 10 ರನ್ ಬೇಕಿದ್ದರೆ, ಐರ್ಲೆಂಡ್ ತಂಡ 8 ರನ್ ಗಳಿಸಲಷ್ಟೇ ಶಕ್ತವಾಯಿತು.

Advertisement

ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಅಂತರದಿಂದ ಸೋಲನುಭವಿಸಿದ್ದ ಐರ್ಲೆಂಡ್ ತಂಡಕ್ಕೆ ಅಂತಿಮ ಏಕದಿನ ಪಂದ್ಯದಲ್ಲೂ ಲಕ್ ಕೈಕೊಟ್ಟಿತು. ಇನ್ನು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next