ಸೋಮವಾರ ಯಾವುದೇ ಪ್ರಕರಣ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದ್ದು, ಮಾರ್ಚ್‌ನಿಂದ ಈ ಕೋವಿಡ್ ಆರ್ಭಟ ಜೋರಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಅಲ್ಲಿ ಪ್ರಕರಣ ಕಾಣಿಸಿಕೊಂಡಿಲ್ಲ. ಇದು ನಿಜಕ್ಕೂ ಸಂಭ್ರಮ ಪಡುವ ಸಂಗತಿ ಎಂದು ಅಲ್ಲಿನ ಆರೋಗ್ಯ ಸಚಿವ ಆಶ್ಲೇ ಬ್ಲೂಮ್‌ಫೀಲ್ಡ್ ತಿಳಿಸಿದ್ದಾರೆ.
Advertisement
ದೇಶದಲ್ಲಿ ಕೋವಿಡ್-19 ಕಾಣಿಸಿಕೊಳ್ಳುತ್ತಿದ್ದಂತೆ ಗಡಿಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದ ನ್ಯೂಜಿಲ್ಯಾಂಡ್, ಕಠಿನ ಲಾಕ್‌ಡೌನ್ ನಿಯಮಗಳನ್ನು ಹೇರಿತ್ತು. ಕಳೆದ ವಾರ ಕೆಲ ನಿಯಮಗಳೊಂದಿಗೆ ಕಫ್ìಯೂ ಸಡಿಲಿಸಿತ್ತು. ಆದರೂ ಇಲ್ಲಿಯವರೆಗೆ ಶಾಲಾ,ಕಾಲೇಜುಗಳು ಆರಂಭವಾಗಿಲ್ಲ. ಇಲ್ಲಿಯ ವರೆಗೆ 1,500 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 20 ಜನರು ಸಾವನ್ನಪ್ಪಿದ್ದಾರೆ.