ವೆಲ್ಲಿಂಗ್ಟನ್: ಕಡ್ಡಾಯವಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನ್ಯೂಜಿಲೆಂಡ್ ಸರ್ಕಾರದ ನಿಯಮ ಆ ದೇಶದಲ್ಲಿ ಜನರನ್ನು ರೊಚ್ಚಿಗೇಳುವಂತೆ ಮಾಡಿದೆ. ಪೊಲೀಸರ ಜತೆಗೆ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದಾರೆ ಮತ್ತು ಟೆಂಟ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ,
23 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಏಕಾಏಕಿ ಬಿರುಸುಗೊಂಡಿದೆ.
ಇದನ್ನೂ ಓದಿ:ಪಂಚ ರಾಜ್ಯಗಳ ಚುನಾವಣೆ ಬಳಿಕ ತೈಲ ದರ ಶಾಕ್? ಪ್ರತಿ ಲೀಟರ್‌ಗೆ 9 ರೂ. ಹೆಚ್ಚಳ
ಪೊಲೀಸರು ಪ್ರತಿಭಟನಾಕಾರರ ಟೆಂಟ್‌ಗಳನ್ನು ತೆರವುಗೊಳಿಸುವ ಪ್ರಯತ್ನದಿಂದ ಜನರು ರೊಚ್ಚಿಗೆದ್ದರು. ಅವರು ಟೆಂಟ್‌ಗಳಿಗೆ ಬೆಂಕಿ ಹಚ್ಚಿದ್ದಾರಲ್ಲದೆ, ಘರ್ಷಣೆಗೂ ಇಳಿದಿದ್ದಾರೆ. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ರಬ್ಬರ್ ಬುಲೆಟ್‌ಗಳನ್ನು ಪ್ರಯೋಗಿಸಿದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ 5 ಲಕ್ಷ ಡಾಲರ್ (2.56 ಕೋಟಿ ರೂ.) ಮೊತ್ತದಲ್ಲಿ ನಿರ್ಮಿಸಲಾಗಿರುವ ಸಂಸತ್ ಭವನದ ಒಂದು ಭಾಗ ಕೂಡ ಪ್ರತಿಭಟನಾಕಾರರ ಆಕ್ರೋಶಕ್ಕೆ ಆಹುತಿಯಾಗಿದೆ. ಅದರ ಫೋಟೋ ಮತ್ತು ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಅಲ್ಲಿ ಪ್ರತಿಭಟನಾಕಾರರು ದಾಂಧಲೆ ನಡೆಸಿ, ಬೆಂಕಿ ಹಚ್ಚಿದ್ದಾರೆ. ವೆಲ್ಲಿಂಗ್ಟನ್‌ನಿಂದ ದೇಶದಿಂದ ಇತರ ಭಾಗಗಳಿಗೆ ತೆರಳುವ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕಾನೂನು ಮೀರಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ 60ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.