Advertisement

ಟಿ20 ತ್ರಿಕೋನ ಸರಣಿ: ಬಾಂಗ್ಲಾ ವಿರುದ್ಧ ಕಿವೀಸ್ ಪಡೆಗೆ ಭರ್ಜರಿ ಗೆಲುವು

08:55 PM Oct 09, 2022 | Team Udayavani |

ಕ್ರೈಸ್ಟ್‌ಚರ್ಚ್‌: ಆತಿಥೇಯ ನ್ಯೂಜಿಲೆಂಡ್‌ ತಂಡವು ಟಿ20 ತ್ರಿಕೋನ ಸರಣಿಯ ಭಾನುವಾರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶವು 8 ವಿಕೆಟಿಗೆ 137 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್‌ ತಂಡವು 17.5 ಓವರ್‌ಗಳಲ್ಲಿ ಕೇವಲ 2 ವಿಕೆಟಿಗೆ 142 ರನ್‌ ಪೇರಿಸಿ ಜಯಭೇರಿ ಬಾರಿಸಿತು. ಇದು ಈ ಸರಣಿಯಲ್ಲಿ ನ್ಯೂಜಿಲೆಂಡಿನ ಮೊದಲ ಗೆಲುವು ಆಗಿದೆ. ಸರಣಿಯ ಇನ್ನೊಂದು ತಂಡವಾದ ಪಾಕಿಸ್ತಾನ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಅಗ್ರಸ್ಥಾನದಲ್ಲಿದೆ.

ಸರಣಿಯ ಇನ್ನೊಂದು ಸುತ್ತಿನ ಪಂದ್ಯದಲ್ಲಿ ಮಂಗಳವಾರ ಪಾಕಿಸ್ತಾನವು ಮತ್ತೆ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ಅ. 12ರಂದು ನ್ಯೂಜಿಲೆಂಡ್‌-ಬಾಂಗ್ಲಾದೇಶ ಮತ್ತು ಅ. 13ರಂದು ಪಾಕಿಸ್ತಾನ -ಬಾಂಗ್ಲಾದೇಶ ನಡುವೆ ಪಂದ್ಯ ನಡೆಯಲಿದೆ. ಅ. 14ರಂದು ಫೈನಲ್‌ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 8 ವಿಕೆಟಿಗೆ 137 (ನಜ್ಮುಲ್‌ ಹೊಸೈನ್‌ ಶಾಂಟೊ 33, ನೂರಲ್‌ ಹಸನ್‌ 25 ಔಟಾಗದೆ, ಬೌಲ್ಟ್ 25ಕ್ಕೆ 2, ಸೌಥಿ 34ಕ್ಕೆ 2, ಬ್ರೇಸ್‌ವೆಲ್‌ 14ಕ್ಕೆ 2, ಐಸ್‌ ಸೋಧಿ 31ಕ್ಕೆ 2); ನ್ಯೂಜಿಲೆಂಡ್‌ 17.5 ಓವರ್‌ಗಳಲ್ಲಿ 2 ವಿಕೆಟಿಗೆ 142 ( ಡೆವೋನ್‌ ಕಾನ್ವೆ 70 ಔಟಾಗದೆ, ಕೇನ್‌ ವಿಲಿಯಮ್ಸನ್‌ 30).

Advertisement

Udayavani is now on Telegram. Click here to join our channel and stay updated with the latest news.

Next