Advertisement

ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಯೋಗಿ ಟೀಕೆಗೆ ಆಕ್ರೋಶ

03:00 AM Jul 15, 2017 | Team Udayavani |

ಆಗ್ರಾ: ‘ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರೇ ಪ್ರಧಾನಿ ಮೋದಿಯ ಕಾರ್ಯವೈಖರಿಯನ್ನು ಶ್ಲಾಘಿಸುತ್ತಿರುವ ವೇಳೆ ಅಲ್ಲಿಯ ಮಾಧ್ಯಮಗಳು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ತೆಗಳುವುದರಲ್ಲಿ ನಿರತವಾಗಿವೆ.’ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದು ‘ಹಿಂದುಸ್ಥಾನಿ ಬಿರಾದರಿ’ ಎಂಬ ಸಂಘಟನೆ. ಈ ಆಕ್ರೋಶಕ್ಕೆ ಕಾರಣ ಅಮೆರಿಕದ ಪ್ರಮುಖ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಯೋಗಿ ಸರಕಾರದ ವಿರುದ್ಧ ಪ್ರಕಟವಾಗಿರುವ ಲೇಖನ. ಆದಿತ್ಯನಾಥ್‌ರ ಪ್ರಸಿದ್ಧಿ ಹೆಚ್ಚಾಗುತ್ತಿರುವುದನ್ನು ಸಹಿಸಲಾರದೇ ಪತ್ರಿಕೆ ಈ ರೀತಿ ಲೇಖನ ಬರೆದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಪತ್ರಿಕೆಯ ಪ್ರತಿಗಳನ್ನು ಸುಟ್ಟುಹಾಕಿದ್ದಾರೆ. ಪತ್ರಿಕೆಯಲ್ಲಿ ಆದಿತ್ಯನಾಥ್‌ ಪ್ರಧಾನಿ ಅಭ್ಯರ್ಥಿಯಾಗುವತ್ತ ಹೊರಟಿದ್ದಾರೆ ಎಂದೂ ಬರೆಯಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next