ವಾಷಿಂಗ್ಟನ್: ವಿಶ್ವದ ನಾನಾ ರಾಷ್ಟ್ರಗಳಿಗೆ ಹೋಗಬೇಕು, ಅಲ್ಲಿಯ ಜೀವನ ಶೈಲಿಯನ್ನು ಅನುಭವಿಸಿ ಬದುಕು ಕಟ್ಟಿಕೊಳ್ಳಬೇಕೆಂಬುದು ಹಲವರ ಆಸೆ. ಆದರೆ ನ್ಯೂಯಾರ್ಕ್ ಸೇರಿದಂತೆ ವಿಶ್ವದ 20 ನಗರಗಳು ವಲಸಿಗರ ಪಾಲಿಗೆ ಬಲು ದುಬಾರಿ. ಅಂತಾರಾಷ್ಟ್ರೀಯ ಜೀವನವೆಚ್ಚ ಸೂಚ್ಯಂಕ ವರದಿ 2023ರ ಪ್ರಕಾರ ಹೆಚ್ಚುತ್ತಿರುವ ವಸತಿ ವೆಚ್ಚ, ಜೀವನ ನಿರ್ವಹಣೆ ಮಟ್ಟವನ್ನ ಅಧರಿಸಿ, ದುಬಾರಿ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಈ ಪೈಕಿ ಮೊದಲ ಸ್ನಾನದಲ್ಲಿ ನ್ಯೂಯಾರ್ಕ್ ಇದ್ದರೆ, ಚೀನಾದ ಹಾಂಗ್‌ಕಾಂಗ್ ನಗರವನ್ನು 2ನೇ ಅತ್ಯಂತ ದುಬಾರಿ ನಗರವೆಂದು ಪಟ್ಟಿ ಮಾಡಲಾಗಿದೆ. ಇನ್ನು 2 ಮತ್ತು 3ನೇ ಅತ್ಯಂತ ದುಬಾರಿ ನಗರಗಳ ಸಾಲಿನಲ್ಲಿ ಜಿನೇವಾ ಹಾಗೂ ಲಂಡನ್ ಸ್ಥಾನ ಪಡೆದುಕೊಂಡಿದ್ದು, ಕಳೆದ ವರ್ಷ 13ನೇ ಸ್ಥಾನದಲ್ಲಿದ್ದ ಸಿಂಗಾಪುರ ಈ ಬಾರಿ ಅಗ್ರ 5ರ ಪಟ್ಟಿಗೆ ಸೇರ್ಪಡೆಗೊಂಡಿದೆ. ವಸತಿ ವೆಚ್ಚಗಳಲ್ಲಿನ ಹೆಚ್ಚಳವೇ ಈ ಶ್ರೇಯಾಂಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಐದು ನಗರಗಳು ಮಾತ್ರವಲ್ಲದೇ, ಇಸ್ತಾಂಬುಲ್, ದುಬೈ, ಸ್ವೀಡಿಷ್ ಸೇರಿದಂತೆ ಹಲವು ನಗರಗಳಲ್ಲಿ ಗಣನೀಯವಾಗಿ ವಸತಿ ವೆಚ್ಚಗಳಲ್ಲಿ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.