Advertisement
ಫೈಝರ್ ಬಳಿಕ ಸಾರ್ವಜನಿಕ ಬಳಕೆ ಮಾನ್ಯತೆ ಪಡೆದ 2ನೇ ಲಸಿಕೆ ಇದಾಗಿದೆ. ಆಕ್ಸ್‌ಫರ್ಡ್ ವಿವಿ ತನ್ನ ಲಸಿಕೆ ಕುರಿತಾದ ಎಲ್ಲ ದತ್ತಾಂಶ ವಿವರಗಳನ್ನು ಇತ್ತೀಚೆಗಷ್ಟೇ ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ ಇಲಾಖೆಗೆ ಸಲ್ಲಿಸಿತ್ತು. “ಆಕ್ಸ್‌ಫರ್ಡ್ ಲಸಿಕೆಯನ್ನು ತುರ್ತು ಬಳಕೆಗೆ ಬಳಸಲು ಬ್ರಿಟನ್ ಮುಂದಾಗುತ್ತಿರು ವುದು ಸಂತಸದ ವಿಚಾರ. ಎಷ್ಟು ಸಾಧ್ಯವೋ ಅಷ್ಟು ಬೇಗ ವ್ಯಾಕ್ಸಿನೇಶನ್ ಆರಂಭಿಸಲಾಗುತ್ತದೆ’ ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ. ಇದರೊಂದಿಗೆ ಜ.4ರಿಂದ ಲಸಿಕೆ ಆರಂಭಿಸಲು ಮುಹೂರ್ತ ಕೂಡ ನಿಗದಿಯಾಗಿದೆ. ಇಂಗ್ಲೆಂಡಿಗಾಗಿ ಆಕ್ಸ್‌ಫರ್ಡ್- ಅಸ್ಟ್ರಾಜೆನೆಕಾ, 10 ಕೋಟಿ ಡೋಸ್ ಲಸಿಕೆ ಉತ್ಪಾದಿಸಿದೆ.
ಎಸ್‌ಇಸಿ ನಿರ್ಧರಿಸಿದೆ. ಜನವರಿ ಮೊದಲ ವಾರದಲ್ಲಿ ಭಾರತಕ್ಕೆ ಲಸಿಕೆ ತುರ್ತು ಬಳಕೆ ಕುರಿತ ಸಿಹಿಸುದ್ದಿ ಲಭ್ಯವಾಗುವ ನಿರೀಕ್ಷೆಯಿದೆ.
Related Articles
Advertisement
ಧಾರಾವಿಯಲ್ಲಿ ಮತ್ತೆ ಸೋಂಕು!: ಸೋಂಕಿನಿಂದ ಮುಕ್ತವಾಗಿದ್ದ ಏಷ್ಯಾದ ಅತೀದೊಡ್ಡ ಕೊಳೆಗೇರಿ, ಮುಂಬಯಿನ ಧಾರಾವಿಯಲ್ಲಿ ಮತ್ತೆ ಕೊರೊನಾ ಪ್ರತ್ಯಕ್ಷವಾಗಿದೆ. ಬುಧವಾರ ಹೊಸದಾಗಿ 7 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು 17 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಜ.31ರ ವರೆಗೆ ಅಂ.ರಾ. ವಿಮಾನಗಳಿಗೆ ನಿರ್ಬಂಧ: ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ಸೇವೆ ನಿರ್ಬಂಧವನ್ನು ಕೇಂದ್ರ ಸರಕಾರ ಜ.31ರ ವರೆಗೆ ವಿಸ್ತರಿಸಿದೆ. “ಆಯ್ದ ಮಾರ್ಗಗಳಲ್ಲಿ ಮಾತ್ರವೇ ತುರ್ತು ಸಂದರ್ಭದಲ್ಲಿ ವಿಮಾನ ಸೇವೆ ಲಭ್ಯವಿರಲಿದೆ’ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. “ಏರ್ ಬಬಲ್’ ಒಪ್ಪಂದದಡಿ ಯಲ್ಲಿ ಆಯ್ದ 24 ರಾಷ್ಟ್ರಗಳಿಗೆ ಮಾತ್ರವೇ ವಿಮಾನಗಳು ಹಾರಾಡಲಿವೆ. ಇನ್ನೊಂದೆಡೆ, ಭಾರತ- ಇಂಗ್ಲೆಂಡ್ ನಡುವಿನ ಪ್ರಯಾಣಿಕ ವಿಮಾನ ಸಂಚಾರವನ್ನು ಜ.7ರವರೆಗೆ ನಿರ್ಬಂಧಿಸಲಾಗಿದೆ ಎಂದು ಸಚಿವ ಹರ್‌ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಜನವರಿಯಿಂದ ಎಲ್ಲೆಲ್ಲಿ ಶಾಲೆ ಓಪನ್?ಕರ್ನಾಟಕ: ಪೋಷಕರ ಒಪ್ಪಿಗೆ ಪಡೆದು. ಜ.1ರಿಂದ 6-12ನೇ ತರಗತಿವರೆಗೆ ಶಾಲೆ ತೆರೆಯಲಾಗುತ್ತಿದೆ.
ಅಸ್ಸಾಂ: ಜ.1ರಿಂದ ಎಲ್ಲ ತರಗತಿಗಳನ್ನೂ ತೆರೆಯಲು ಸರಕಾರ ನಿರ್ಧರಿಸಿದೆ.
ಬಿಹಾರ: ಜ.4ರಿಂದ 9ರಿಂದ 12ನೇ ತರಗತಿ ವರೆಗೆ ಶಾಲೆಗಳು ಆರಂಭಗೊಳ್ಳಲಿವೆ.
ಪುದುಚೇರಿ: ಜ.4ರಿಂದ ಅರ್ಧ ದಿನ ಶಾಲೆ, ಜ.18ರಿಂದ ಇಡೀ ದಿನ.
ಪುಣೆ: ಮಹಾರಾಷ್ಟ್ರದಲ್ಲಿ ಪುಣೆ ಪಾಲಿಕೆ 9-12ರ ವರೆಗೆ ತರಗತಿ ಶುರುವಿಗೆ ನಿರ್ಧಾರ.
ರಾಜಸ್ಥಾನ: ಜನವರಿ ಮೊದಲ ವಾರದಲ್ಲಿ 15 ದಿನ ಮಟ್ಟಿಗೆ ಪ್ರಾಯೋಗಿಕ ಶಾಲಾರಂಭ. ರೂಪಾಂತರಿ ಪ್ರಕರಣ 20ಕ್ಕೆ ಏರಿಕೆ
ಭಾರತದಲ್ಲಿ ಹೊಸ ತಳಿಯ ಕೊರೊನಾ ನಿಧಾನಕ್ಕೆ ಇನ್ನಿಂಗ್ಸ್ ಮುಂದುವರಿಸಿದ್ದು, ಬುಧವಾರದ 2ನೇ ದಿನ ಒಟ್ಟು 6 ಮಂದಿಗೆ “ರೂಪಾಂತರಿ ಹೆಮ್ಮಾರಿ’ ತಗಲಿದೆ. ಈ ಮೂಲಕ ದೇಶದ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿದೆ. ಕರ್ನಾಟಕದ 4, ಉತ್ತರ ಪ್ರದೇಶದ ಇಬ್ಬರಿಗೆ ಹೊಸ ರೂಪದ ಕೊರೊನಾ ತಗಲಿದೆ. ಉ.ಪ್ರ.ದ ಸೋಂಕಿತರು ಮೀರತ್ ಮತ್ತು ಗೌತಮ್ ಬುದ್ಧನಗರದವರಾಗಿದ್ದಾರೆ.
33 ಸಾವಿರ ಮಂದಿ ಮೇಲೆ ಕಣ್ಣು!: ಈ ನಡುವೆ ನ.25- ಡಿ.23ರವರೆಗೆ ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿದ 33 ಸಾವಿರ ಪ್ರಯಾಣಿಕರ ಪತ್ತೆಹಚ್ಚುವಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದ್ದು, ಅವರೆಲ್ಲರ ಮೇಲೂ ನಿಗಾ ಹೆಚ್ಚಿಸಿದೆ. ಫೈಝರ್ ಪಡೆದ ಒಂದೇ ವಾರದಲ್ಲಿ ಕೊರೊನಾ!
ಅಮೆರಿಕ, ಇಂಗ್ಲೆಂಡ್, ಯುರೋಪ್ ದೇಶಗಳಲ್ಲಿ ನೀಡಲಾಗುತ್ತಿರುವ “ಫೈಝರ್’ ಲಸಿಕೆಗೆ ಆರಂಭದ ಲ್ಲಿಯೇ ವಿಘ್ನ ಎದುರಾಗಿದೆ. ಫೈಝರ್ ಲಸಿಕೆ ಪಡೆದ ಒಂದೇ ವಾರದಲ್ಲಿ ಕ್ಯಾಲಿಫೊರ್ನಿಯಾ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಲಸಿಕೆ ಪಡೆದ ಬಳಿಕ ಈಕೆಗೆ ಸ್ನಾಯು ನೋವು, ವಿಪರೀತ ದಣಿವು ಕಾಣಿಸಿಕೊಂಡಿತ್ತು. “ಲಸಿಕೆ ಪಡೆದ 10-14 ದಿನಗಳ ಬಳಿಕ ಅದು ದೇಹದಲ್ಲಿ ಕೆಲಸ ಮಾಡಲಿದೆ’ ಎಂದು ತಜ್ಞರು ಫೈಝರ್ ಪರ ವಕಾಲತ್ತು ಆರಂಭಿಸಿದ್ದಾರೆ.