Advertisement

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

12:14 AM Jan 02, 2025 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮಾ ಚರಣೆ ಬಂತೆಂದರೆ ಮದ್ಯ ಪ್ರಿಯರು ಹಾಗೂ ಮದ್ಯ ಮಾರಾಟಗಾರರಿಗೆ ಹಬ್ಬ. ಕಳೆದ 9 ದಿನಗಳಲ್ಲಿ ರಾಜ್ಯಾದ್ಯಂತ 774.53 ಕೋಟಿ ರೂ. ಮದ್ಯ ಮಾರಾಟವಾಗಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ನಿರೀಕ್ಷೆಗೆ ತಕ್ಕಂತೆ ಮದ್ಯ ಮಾರಾಟವಾಗಿಲ್ಲ ಎಂದು ರಾಜ್ಯ ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.

Advertisement

2024ರ ಡಿಸೆಂಬರ್‌ ಕೊನೇ ವಾರದಿಂದ 2025ರ ಹೊಸ ವರ್ಷ ಆರಂಭದವರೆಗೆ 1,000 ಕೋಟಿ ರೂ.ಗೂ ಅಧಿಕ ವಹಿವಾಟು ಮೀರುವ ನಿರೀಕ್ಷೆ ಇತ್ತು. ಆದರೆ, ಒಟ್ಟು 774.53 ಕೋಟಿ ರೂ. ಮದ್ಯದ ವಹಿವಾಟು ನಡೆದಿದೆ.

ಕರ್ನಾಟಕದಾದ್ಯಂತ ಮಂಗಳವಾರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪಬ್‌, ಕ್ಲಬ್‌, ವಿಲ್ಲಾ, ರೆಸಾರ್ಟ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ತಡರಾತ್ರಿವರೆಗೂ ನಾ ಮುಂದು-ತಾ ಮುಂದೆ ಎಂಬಂತೆ ಕಿಕ್ಕಿರಿದ ಪ್ರಮಾಣದಲ್ಲಿ ಗ್ರಾಹಕರು ಮದ್ಯಕ್ಕಾಗಿ ಮುಗಿಬೀಳುವ ದೃಶ್ಯ ಕಾಣ ಸಿಗುತ್ತಿತ್ತು. ಆದರೆ, ಕೋವಿಡ್‌ ಬಿಸಿ ಬಳಿಕ 2022, 2023ಕ್ಕೆ ಹೋಲಿಸಿದರೆ ಈ ಬಾರಿ ನಿರೀಕ್ಷೆಗೆ ತಕ್ಕುದಾಗಿ ಮದ್ಯದ ವಹಿವಾಟು ನಡೆದಿಲ್ಲ..

ತಲೆಕೆಳಗಾದ ಲೆಕ್ಕಾಚಾರ
ರಾಜ್ಯದಲ್ಲಿ ಡಿ.23ರಿಂದ ಡಿ.31ರವರೆಗೆ ಒಟ್ಟು 774.53 ಕೋಟಿ ರೂ. ಮದ್ಯದ ವಹಿವಾಟು ನಡೆದಿದೆ. ಈ ಅವಧಿಯಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಶೇ.10.18ರಷ್ಟು ಬೆಳವಣಿಗೆ ಕಂಡಿದೆ. ಆದರೆ 2024ರ ಒಟ್ಟು ವರ್ಷದ ಅವಧಿಯಲ್ಲಿ ಹಾಗೂ ಡಿಸೆಂಬರ್‌ ಮಾಸದಲ್ಲಿ 2023ರ ಅಂತ್ಯದಲ್ಲಿ ನಡೆದಿದ್ದ ಬ್ಯುಸಿನೆಸ್‌ ಈ ವರ್ಷದ ಆರಂಭಕ್ಕೆ ಆಗಿಲ್ಲ. ನಿರೀಕ್ಷೆಗಿಂತ ಸುಮಾರು 250 ರಿಂದ 300 ಕೋ ರೂ. ವಹಿವಾಟು ಕಡಿಮೆಯಾಗಿದೆ.

ಉಡುಪಿ: ಮದ್ಯ ಮಾರಾಟ ಜೋರು
ಉಡುಪಿ: ಜಿಲ್ಲೆಯ ವಿವಿಧೆಡೆ ಮಂಗಳವಾರ ತಡರಾತ್ರಿ ಹೊಸವರ್ಷ ಆಚರಣೆ ನಡೆದಿದೆ. ಮದ್ಯ ಮಾರಾಟವೂ ಹೆಚ್ಚಾಗಿದೆ.
ಕೆಲವು ಹೊಟೇಲ್‌, ರೆಸಾರ್ಟ್‌, ಹೋಂ ಸ್ಟೇಗಳಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ, ಸಂಭ್ರಮಾಚರಣೆ ಹಾಗೂ ಕೆಕ್‌ ಕಟ್ಟಿಂಗ್‌ ಕೂಡ ನಡೆದಿದೆ.

Advertisement

ಹೊಸವರ್ಷಕ್ಕೆ 18,016 ಪೆಟ್ಟಿಗೆ ಮದ್ಯ ಹಾಗೂ 10,376 ಪೆಟ್ಟಿಗೆ ಬಿಯರ್‌ ಮಾರಾಟವಾಗಿದೆ ಎಂದು ಅಬಕಾರಿ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next