Advertisement
ಹಂಪಿ ಮಾತ್ರವಲ್ಲದೇ, ಪಕ್ಕದ ಆನೆಗುಂದಿಯ ಆಂಜನಾದ್ರಿ ಬೆಟ್ಟ, ಹೊಸಪೇಟೆಯ ತುಂಗಭದ್ರಾ ಡ್ಯಾಂ, ಕಮಲಾಪುರದಲ್ಲಿರುವ ಕರಡಿಧಾಮ ಹಾಗೂ ಅಟಲ್‌ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಮುಂತಾದ ಸ್ಥಳಗಳನ್ನು ವೀಕ್ಷಣೆ ಮಾಡುವ ಉದ್ದೇಶದಿಂದ ವರ್ಷಾಂತ್ಯದಲ್ಲಿ ಪ್ರವಾಸಿಗರು ಹಂಪಿಗೆ ಬಂದು ಇಳಿಯುತ್ತಿದ್ದಾರೆ. ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಹಂಪಿ-ಕಮಲಾಪುರ ಹಾಗೂ ಹೊಸಪೇಟೆ ಸುತ್ತಮುತ್ತಲಿನ ರೆಸ್ಟಾರ್ಟ್, ಹೋಟೆಲ್ ಹಾಗೂ ಲಾಡ್ jಗಳು ಪುಲ್ ಆಗಿದ್ದು, ಜ. 2ರ ವರೆಗೂ ಕೊಠಡಿಗಳು ಬುಕ್ ಆಗಿವೆ. ರೂಮ್ ಸಿಗದೇ ಪ್ರವಾಸಿಗರು ಪರದಾಡುವಂತಾಗಿದೆ.
Related Articles
Advertisement
ಹೇಮಕೂಟ, ಸಾಸವಿಕಾಳು, ಕಡಲೆಕಾಳು ಗಣಪತಿ, ಕೃಷ್ಣ ದೇವಾಲಯ, ಬಡವಿಲಿಂಗ, ಲಕ್ಷಿ ¾à ನರಸಿಂಹ, ಭೂಮಿಮಟ್ಟದ ಶಿವಾಲಯ, ಹಜಾರರಾಮ ದೇವಾಲಯ, ಮಹಾನವಮಿ ದಿಬ್ಬ, ಪುಷ್ಕರಣಿ, ರಾಣಿ ಸ್ನಾನ ಗೃಹ, ಕಮಲ ಮಹಲ್, ಗಜಶಾಲೆ, ವಿಜಯ ವಿಠಲ ದೇವಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು. ಕಾಲ್ನಡಿಗೆ: ಬ್ಯಾಟರಿ ಚಾಲಿತ ವಾಹನಗಳ ಕೊರತೆಯಿಂದ ಅನಿವಾರ್ಯವಾಗಿ ಪ್ರವಾಸಿಗರು ಕಾಲ್ನಡಿಗೆ ಮೂಲಕ ವಿಜಯ ವಿಠಲ ದೇವಾಲಯಕ್ಕೆ ತೆರಳಿದರು.
ಪಾರ್ಕಿಂಗ್ ಪ್ರದೇಶದಲ್ಲಿರುವ ಗೂಡಂಗಡಿಗಳು, ಸಣ್ಣಪುಟ್ಟ ಹೋಟೆಲ್ ಗಳಲ್ಲಿ ಪ್ರವಾಸಿಗರು ಕಂಡು ಬಂದರು. ಬಸ್, ಕಾರು ಹಾಗೂ ಆಟೋ, ಬೈಕ್ ಮೂಲಕ ಹಂಪಿಗೆ ಆಗಮಿಸಿದ್ದರು. ಟ್ರಾμಕ್ ಕಿರಿಕಿರಿ: ಪ್ರವಾಸಿಗರ ಸಂಖ್ಯೆ ದ್ವಿಗುಣವಾಗುತ್ತಿದಂತೆ ವಿರೂಪಾಕ್ಷ ರಥ ಬೀದಿ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ಕಿಕ್ಕಿರಿದ ವಾಹನ ಒಡಾಟದಿಂದ ಟ್ರಾμಕ್ ಕಿರಿಕಿರಿ ಉಂಟಾಗಿತ್ತು. ಪ್ರವಾಸಿಗರ ಹೆಚ್ಚಳದ ಹಿನ್ನೆಲೆಯಲ್ಲಿ ಹಂಪಿ ಗೈಡ್‌ಗಳು, ಸಣ್ಣಪುಟ್ಟ ಹೋಟೆಲ್ ಹಾಗೂ ಗೂಡಂಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆದಿದೆ. ಆಟೋ, ಟ್ಯಾಕ್ಷಿ ಮೊಗದಲ್ಲಿ ಮಂದಹಾಸ ಮೂಡಿತ್ತು. ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಪ್ರವಾಸಿಗರು ಹಂಪಿಗೆ ಆಗಮಿಸಿದ್ದರು.