ಕಟೀಲು: ಪುರಾಣ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರೀ ದೇಗುಲದಲ್ಲಿ ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವ ಸೇವೆಗಳನ್ನು ಜಗತ್ತಿನಾದ್ಯಂತ ಭಕ್ತರು ವೆಬ್‌ಸೈಟ್ ಮೂಲಕವೇ ಸೇವೆಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಕಟೀಲು ದೇಗುಲಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳ ವಿಡಿಯೋ ಹಾಗೂ ಚಿತ್ರಗಳು ಮಾಹಿತಿಯನ್ನು ಇಲ್ಲಿ ನೋಡಬಹುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಡಿ.26 ರಂದು ಕಟೀಲು ದುರ್ಗಾಪರಮೇಶ್ವರೀ ದೇಗುಲದ ನವೀಕರಿಸಿದ ವೆಬ್‌ಸೈಟ್
(www.kateeldevi.in) ಗುರುವಾರ ಅನಾವರಣಗೊಳಿಸಿ ಮಾತನಾಡಿ, ವೆಬ್‌ಸೈಟ್‌ನಿಂದ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲಿದೆ. ಹೆಚ್ಚಿನ ಸೌಲಭ್ಯಗಳು ಹಾಗೂ ಸಮರ್ಪಕ ಸೇವೆ ಸಿಗಲಿದೆ ಎಂದರು.
ವೆಬ್ ಸೈಟ್ ಡಿಸೈನರ್ ವಿನಾಯಕ ಶೆಣೈ ಮಾತನಾಡಿ, ಆಧುನಿಕ ತಂತ್ರಜ್ಞಾನದ ವೆಬ್‌ಸೈಟ್ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜನಪರ ಸುಲಭ ಸಾಧ್ಯ ಕ್ಲೌಡ್ ತಾಂತ್ರಿಕ ವ್ಯವಸ್ಥೆಯ ಕ್ಷಿಪ್ರ ಕ್ಲಪ್ತ ಸೇವೆ ಪಡೆಯಬಹುದು ಎಂದರು.
ಈ ಸಂದರ್ಭ ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಮಲಪ್ರಸಾದ್ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಎಕ್ಕಾರು ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಕಟೀಲು ಪಂಚಾಯತ್ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಗಿರಿಧರ್ ಶೆಟ್ಟಿ, ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ, ತಿಮ್ಮಪ್ಪ ಕೋಟ್ಯಾನ್, ಆದರ್ಶ್ ಶೆಟ್ಟಿ ಎಕ್ಕಾರು, ಪ್ರಕಾಶ್ ಕುಕ್ಯಾನ್, ಸತೀಶ್ ಶೆಟ್ಟಿ ಎಕ್ಕಾರು, ಉದಯಶೆಟ್ಟಿ ಆಧಿಧನ್, ಉದ್ಯಮಿ ದೇವಿಪ್ರಸಾದ್ ಹೆಗ್ಡೆ, ಅನ್ವಿತ್ ಕಟೀಲು ಮೊದಲಾದವರು ಉಪಸ್ಥಿತರಿದ್ದರು.