Advertisement

New Voter ID: ರಾಷ್ಟ್ರಪತಿಗೆ ಹೊಸ ಮತದಾರ ಗುರುತಿನ ಚೀಟಿ

09:43 PM Nov 28, 2023 | Team Udayavani |

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಂಗಳವಾರ ದೆಹಲಿಯ ಮುಖ್ಯ ಚುನಾವಣೆ ಅಧಿಕಾರಿ ಪಿ. ಕೃಷ್ಣಮೂರ್ತಿ ನೂತನ ಮತದಾರ ಗುರುತಿನ ಚೀಟಿ ಹಸ್ತಾಂತರಿಸಿದ್ದಾರೆ.ಈ ಬಗ್ಗೆ ರಾಷ್ಟ್ರಪತಿ ಭವನದ ಟ್ವಿಟರ್‌ ಖಾತೆಯಲ್ಲಿ ಫೋಟೋ ಮತ್ತು ವಿವರ ಅಪ್‌ಡೇಟ್‌ ಮಾಡಲಾಗಿದೆ.

Advertisement

ರಾಷ್ಟ್ರಪತಿಗಳ ಈ ಮುಂಚಿನ ಮತದಾರರ ಗುರುತಿನ ಚೀಟಿಯು ಒಡಿಶಾದ ವಿಳಾಸವನ್ನು ಹೊಂದಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಗೆ ವಿಳಾಸ ಬದಲಿಸಿಕೊಡುವುದಾಗಿ ಕೃಷ್ಣಮೂರ್ತಿ ನ.10ರಂದು ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾಗ ತಿಳಿಸಿದ್ದರು. ಅದರಂತೆ ಹೊಸ ಗುರುತಿನ ಚೀಟಿ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next