ವಾಷಿಂಗ್ಟನ್: ಭಾರತಕ್ಕೆ ಪ್ರಯಾಣಿಸುವ ಅಮೆರಿಕದ ಪ್ರಜೆಗಳು ಜಮ್ಮು ಮತ್ತು ಕಾಶ್ಮೀರಕ್ಕೆ, ಭಾರತ ಮತ್ತು ಪಾಕಿಸ್ತಾನದಿಂದ ಹತ್ತು ಕಿಮೀ ದೂರದ ವ್ಯಾಪ್ತಿಯಲ್ಲಿ ತೆರಳುವುದೇ ಬೇಡ ಎಂದು ಎಚ್ಚರಿಕೆಯ ಸುತ್ತೋಲೆ ಹೊರಡಿಸಿದೆ.
ಅಪರಾಧ ಮತ್ತು ಭಯೋತ್ಪಾದನೆಯ ಕಾರಣದಿಂದಾಗಿ ಈ ಎಚ್ಚರಿಕೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತಕ್ಕೆ ಪ್ರವಾಸ ಮಾಡುವ ಅಪಾಯದ ಮಟ್ಟವನ್ನು ಹಂತ 3ರಿಂದ ಹಂತ2ಕ್ಕೆ ಮೇಲ್ದರ್ಜೆಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ:ಜನರಿಗೆ ಇವಿಎಂ ಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ : ಸಿದ್ದರಾಮಯ್ಯ
ಕೊರೊನಾ ಬಗ್ಗೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ವಿಭಾಗ ನೀಡಿದ್ದ ಸುತ್ತೋಲೆಯಲ್ಲಿ ಭಾರತದಲ್ಲಿ ಸೋಂಕಿನ ಪ್ರಮಾಣ ತಗ್ಗಿದೆ. ಹೀಗಾಗಿ, ಅಲ್ಲಿಗೆ ಪ್ರಯಾಣ ಮಾಡಬಹುದೆಂದು ಸೂಚಿಸಿತ್ತು.