Advertisement

10 ಲಕ್ಷ ಉದ್ಯೋಗ, ಭೂಬ್ಯಾಂಕ್‌: ರಾಜ್ಯ ಸರಕಾರದಿಂದ ಹೊಸ ಪ್ರವಾಸೋದ್ಯಮ ನೀತಿ ಪ್ರಕಟ

02:21 AM Sep 28, 2020 | Hari Prasad |

ಬೆಂಗಳೂರು: ಹತ್ತು ಲಕ್ಷ ಉದ್ಯೋಗ ಸೃಷ್ಟಿಗೆ ಆದ್ಯತೆ, ಕ್ಷೇತ್ರದ ಅಗತ್ಯಕ್ಕಾಗಿ ಭೂ ಬ್ಯಾಂಕ್‌ ರಚನೆ…

Advertisement

ಇವು ರಾಜ್ಯ ಸರಕಾರವು ರವಿವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ನೂತನ ಪ್ರವಾಸೋದ್ಯಮ ನೀತಿಯ ಪ್ರಧಾನ ಅಂಶಗಳು.

ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ‘ಪ್ರವಾಸೋದ್ಯಮ ನೀತಿ 2020-25’ ಅನ್ನು ಸಿಎಂ ಬಿ.ಎಸ್‌. ಯಡಿಯೂರಪ್ಪ ಬಿಡುಗಡೆ ಮಾಡಿದರು.

ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಈ ನೀತಿ ಪೂರಕವಾಗಲಿದೆ.
ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ದಿಕ್ಸೂಚಿಯಾಗಲಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒದಗಿಸಲು ಇದು ಸಹಕರಿಸಲಿದೆ ಎಂದು ಸಿಎಂ ಹೇಳಿದರು. ಕೋವಿಡ್ 19 ನಿಂದ ತತ್ತರಿಸಿರುವ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಹೊಸ ನೀತಿ ನೆರವಾಗಲಿದೆ.

ಪ್ರವಾಸೋದ್ಯಮದಲ್ಲಿ ಸ್ಥಳೀಯರ ಭಾಗವಹಿಸುವಿಕೆಯನ್ನು ಹೆಚ್ಚಿಸಿ, ಸ್ಥಳೀಯರಿಗೆ ಕೌಶಲ ತರಬೇತಿ ನೀಡುವ ಕೌಶಲ ಕೋಶವನ್ನು ಇಲಾಖೆ ಸ್ಥಾಪಿಸಿದೆ. ದೇಶದಲ್ಲೇ ರಾಜ್ಯವನ್ನು ಪ್ರವಾಸೋದ್ಯಮದ ಆಕರ್ಷಣೀಯ ತಾಣವನ್ನಾಗಿಸಲು 78 ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಹತ್ತು ಲಕ್ಷ ಹೊಸ ಉದ್ಯೋಗ ಸೃಷ್ಟಿ
ನೂತನ ನೀತಿ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಸ‌ಲಿದೆ. 8 ಜಿಲ್ಲೆಗಳನ್ನು ಆದ್ಯತಾ ಪ್ರವಾಸಿ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಸ್ಥಳೀಯರಿಗೆ ಆದ್ಯತೆ, ಸುರಕ್ಷೆ, ವಿಶ್ವಾಸಾರ್ಹತೆ, ನೈರ್ಮಲ್ಯ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next