Advertisement
ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶವೊಂದು ಬಂದಿದ್ದು, ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದೀರ್ಘಕಾಲದ ದ್ವೇಷವನ್ನು ಕೊನೆಗೊಳಿಸಲು ನಟ ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂ.ಗೆ ಬೇಡಿಕೆಯಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಲಾರೆನ್ಸ್ ಬಿಷ್ಣೋಯ್ ಹಾಗೂ ಸಲ್ಮಾನ್ ಖಾನ್ ನಡುವಿನ ವೈಷ್ಯಮ್ಯವನ್ನು ಶಮನ ಮಾಡಲು ನಾನು ಮುಂದಾಗಿದ್ದು ಅದಕ್ಕಾಗಿ ಐದು ಕೋಟಿ ನೀಡುವಂತೆ ಹೇಳಿದ್ದಾನೆ ಒಂದು ವೇಳೆ ಹಣ ನೀಡದೇ ಇದ್ದಲ್ಲಿ ಇತ್ತೀಚಿಗೆ ನಡೆದ ಬಾಬಾ ಸಿದ್ದಿಕಿ ಹತ್ಯೆಗಿಂತಲೂ ಸಲ್ಮಾನ್ ಖಾನ್ ಕೆಟ್ಟದಾಗಿ ಸಾವನ್ನಪ್ಪುತ್ತಾನೆ ನೆನಪಿರಲಿ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾನೆ ಎನ್ನಲಾಗಿದೆ.
ಟ್ರಾಫಿಕ್ ಪೊಲೀಸರ ವಾಟ್ಸ್ಆ್ಯಪ್ ನಂಬರ್ ಗೆ ಬಂದ ಬೆದರಿಕೆ ಸಂದೇಶದಲ್ಲಿ ನನ್ನ ಸಂದೇಶವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಬರೆದುಕೊಂಡಿದ್ದಾನೆ. ಈ ಸಂದೇಶ ಬಂದ ಬಳಿಕ ಅಲರ್ಟ್ ಅದ ಪೊಲೀಸರು ಸಲ್ಮಾನ್ ಖಾನ್ ಮನೆಗೆ ಹೆಚ್ಚಿನ ಭದ್ರತೆ ಒದಗಿಸಿದ್ದು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದಾರೆ.
Related Articles
ದಸರಾ ಸಮಯದಲ್ಲಿ ಸಲ್ಮಾನ್ ಅವರ ಆಪ್ತ ಸ್ನೇಹಿತ ಮತ್ತು ಹಿರಿಯ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹೊಳ್ಳಲಾಗಿದ್ದು ಇದಾದ ಬಳಿಕ ಸಲ್ಮಾನ್ ಖಾನ್ ಅವರಿಗೆ ನಿರಂತರ ಬೆದರಿಕೆಗಳು ಬರುತ್ತಿವೆ ಎನ್ನಲಾಗಿದೆ. ಈ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಇದೀಗ ಸಲ್ಮಾನ್ ಖಾನ್ ಗೆ ಈ ಬೆದರಿಕೆಯ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ.
Advertisement
ಸಲ್ಮಾನ್ ಖಾನ್ ಗೆ Y+ ಭದ್ರತೆ:ಬೆದರಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಲ್ಮಾನ್ ಖಾನ್ ಅವರಿಗೆ ಈಗ Y+ ಭದ್ರತೆ ನೀಡಲಾಗಿದೆ. ಇದಾದ ಬಳಿಕ ಅವರ ಭದ್ರತೆಗಾಗಿ ಸುಮಾರು 25 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಇವುಗಳಲ್ಲಿ ಸುಮಾರು 2 ರಿಂದ 4 ಎನ್ಎಸ್ಜಿ ಕಮಾಂಡೋಗಳು ಮತ್ತು ಪೊಲೀಸ್ ಭದ್ರತಾ ಸಿಬ್ಬಂದಿ ಇರಲಿದ್ದಾರೆ ಇದಲ್ಲದೇ ಎರಡರಿಂದ ಮೂರು ವಾಹನಗಳು ಅವರ ಬೆಂಗಾವಲಾಗಿ ಇರಲಿದ್ದು, ಇದರಲ್ಲಿ ಬುಲೆಟ್ ಪ್ರೂಫ್ ವಾಹನವೂ ಇರುತ್ತದೆ. ಇದನ್ನೂ ಓದಿ: Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ