Advertisement

2018ರ ಪ್ರವಾಸೋದ್ಯಮಕ್ಕೆ ಹೊಸ ಥೀಮ್‌

12:19 PM Jan 02, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಇಲಾಖೆಯ 2018 ರ ಸಾಲಿಗಾಗಿ ರೂಪಿಸಿರುವ” ನಿಮ್ಮ ಸಾಹಸ ಗಾಥೆಯನ್ನು ನೀವೆ ರಚಿಸಿ’ ಎನ್ನುವ ವಿನೂತನ ನಿರೂಪಣ ವಸ್ತುವನ್ನು ಸೋಮವಾರ ಲೋಕಾರ್ಪಣೆ ಮಾಡಿದರು. ತಮ್ಮ ನಿವಾಸ ಕಾವೇರಿ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರೂಪಣ ವಸ್ತುವನ್ನು ಬಿಡುಗಡೆ ಮಾಡಿ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದರು.

Advertisement

ಹೊಸ ನಿರೂಪಣ ವಸ್ತುವನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ 2018ರಲ್ಲಿ ಹೊಸದಾದ ವಿಶಿಷ್ಟ ಥೀಮ್‌ ಪರಿಚಯಿಸಿದೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಕರ್ನಾಕಟದಲ್ಲಿ ಪರಂಪರೆ, ಸಂಸ್ಕೃತಿ, ನಿಸರ್ಗ, ಬೀಚ್‌ಗಳು ಹಾಗೂ ವನ್ಯಸಂಪತ್ತು ಇದ್ದು, ಇವು ಪ್ರವಾಸಿಗರಿಗೆ ಅತ್ಯಂತ ಆಕರ್ಷಣೀಯವಾಗಿವೆ ಎಂದರು.

ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಪ್ರವಾಸೋದ್ಯಮ ಇಲಾಖೆ ರೂಪಿಸಿರುವ ಈ ನಿರೂಪಣ ವಸ್ತುವಿನ ಆಶಯ ಕುರಿತು ಮುಖ್ಯಮಂತ್ರಿಗಳಿಗೆ ವಿವರ ನೀಡಿದರು.

ಪ್ರವಾಸದಲ್ಲಿ ನಾವು ಏನು ವೀಕ್ಷಿಸುತ್ತೇವೆ ಎಂಬುದಕ್ಕಿಂತ ಏನನ್ನು ಮಾಡುತ್ತೇವೆ ಮತ್ತು ಹೇಗೆ ಮಾಡುತ್ತೇವೆ ಎಂಬುದು ಮುಖ್ಯವಾಗಿದೆ. ಪ್ರವಾಸಿಗರು ಸಾಮಾನ್ಯಕ್ಕಿಂತ ವಿಶಿಷ್ಟವಾದದ್ದನ್ನು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಮೊದಲನೆಯ ದಿನದಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ತನ್ನ ಹೊಸ ವಿನೂತನ ಥೀಮ್‌ ಅನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ “ಒಂದು ರಾಜ್ಯ ಮತ್ತು ಹಲವು ವಿಶ್ವ’ ಎಂಬ ಘೋಷವಾಕ್ಯಕ್ಕೆ  ಪೂರಕವಾಗಿ ರಾಜ್ಯದಲ್ಲಿ ವೈವಿಧ್ಯಮಯ ಪ್ರವಾಸೋದ್ಯಮ ಅವಕಾಶಗಳಿವೆ. ಕರ್ನಾಟಕದಲ್ಲಿ ಪಾರಂಪರಿಕ ತಾಣಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡ ರಾಷ್ಟ್ರೀಯ ಪಾರ್ಕ್‌ಗಳು ಜನಪ್ರಿಯವಾಗಿವೆ. ಇವುಗಳ ಜತೆಗೆ ಗುಡ್ಡ ಪ್ರದೇಶಗಳು, ಮನಮೋಹಕ ಜಲಪಾತಗಳು,

Advertisement

ಧಾರ್ಮಿಕ ಸ್ಥಳಗಳು ಮತ್ತು ಸುದೀರ್ಘ‌ ಬೀಚ್‌ಗಳು ಜನಪ್ರಿಯವಾಗಿವೆ. ಹಿಮದ ಹೊರತಾಗಿ ಕರ್ನಾಟಕದಲ್ಲಿ ಎಲ್ಲ ರೀತಿಯ ಪ್ರವಾಸ ತಾಣಗಳೂ ಇವೆ ಎಂದರು. ಈ ವೇಳೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುರ್ಮಾ, ಕರ್ನಾಟಕ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, ಜಂಗಲ್‌ ಲಾಡ್ಜಸ್‌ ವ್ಯವಸ್ಥಾಪಕ ನಿರ್ದೇಶಕ  ವಿಜಯ್‌ ಶರ್ಮ ಇದ್ದರು.

ವಿಶಿಷ್ಟ ಅನುಭವ: 2017ನೆ ವರ್ಷ ವನ್ಯಜೀವಿಗಳ ವರ್ಷ ಎಂದು ಘೋಷಿಸಲಾಗಿದೆ. ಈ ಕಾರ್ಯಕ್ರಮದಡಿ ವನ್ಯಜೀವಿಗಳ ವೀಕ್ಷಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಪ್ರವಾಸಿಗರು ವಿಶಿಷ್ಟ ಅನುಭವವನ್ನು ಪಡೆದಿದ್ದರು.ಈ ಥೀಮ್‌ ಅಡಿ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್‌ ಫೆಸ್ಟಿವಲ…, ಹಂಪಿಯಲ್ಲಿ ಮೋರ್ಟಾ ಸೈಕಲ್‌ ಟೂರಿಸಂ, ಮೈಸೂರಿನಲ್ಲಿ ಏರೋ ನ್ಪೋರ್ಟ್ಸ್, ಸ್ಕೆ ಡೈವಿಂಗ್‌, ಕಾರವಾರ ಮತ್ತು ಮಂಗಳೂರಿನಲ್ಲಿ ವಾರ್ಟ ನ್ಪೋರ್ಟ್ಸ್ ಹಮ್ಮಿಕೊಳ್ಳಲಾಗಿತ್ತು ಎಂದು ಸಿಎಂಗೆ ಪ್ರಿಯಾಂಕ ಖರ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next