Advertisement

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

12:30 AM Jan 17, 2022 | Team Udayavani |

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ಈ ಬಾರಿ ಪದವಿ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲಿ ಮೊದಲ ಸೆಮಿಸ್ಟರ್‌ ಪರೀಕ್ಷೆ ಯನ್ನು ಯುಯುಸಿಎಂಎಸ್‌ (ಸಮಗ್ರ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ) ಮೂಲಕ ನಡೆಸಲು ಮಂಗಳೂರು ವಿ.ವಿ. ಸಿದ್ಧತೆ ಆರಂಭಿಸಿದೆ.

Advertisement

ಎನ್‌ಇಪಿಯಡಿ ಎಲ್ಲ ಪದವಿ ಕಾಲೇಜು ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಏಕರೂಪ ಕಾಯ್ದುಕೊಳ್ಳಲು ಯುಯುಸಿ ಎಂಎಸ್‌ ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ಪರೀಕ್ಷಾ ವಿಧಾನವೂ ರಾಜ್ಯಾದ್ಯಂತ ಏಕರೂಪವಾಗಲಿದೆ. ಯು ಯುಸಿಎಂಎಸ್‌ ಪರಿಣತಿಗಾಗಿ ಎರಡು ತಾಂತ್ರಿಕ ತಂಡಗಳನ್ನು ಮಂಗಳೂರು ವಿ.ವಿ. ಬೆಂಗಳೂರಿಗೆ ಕಳುಹಿಸಿದೆ.

ನೂತನ ಪರೀಕ್ಷಾ ಮಾದರಿಯನ್ನು ಉನ್ನತ ಶಿಕ್ಷಣ ಇಲಾಖೆಯು ಎಲ್ಲ ವಿ.ವಿ.ಗಳಿಗೆ ಈಗಾಗಲೇ ನೀಡಿದ್ದು, ಇದರ ಆಧಾರದಲ್ಲಿ ಕಾಲೇಜು ಮಟ್ಟದಲ್ಲಿ ಉಪನ್ಯಾಸಕರಿಗೆ ಪ್ರತ್ಯೇಕ ತರಬೇತಿ ಆಯೋಜಿಸಲು ವಿ.ವಿ. ನಿರ್ಧರಿಸಿದೆ.

ಉನ್ನತ ಶಿಕ್ಷಣ ಇಲಾಖೆ ಮೇಲುಸ್ತುವಾರಿ ಮಂಗಳೂರು ವಿ.ವಿ.ಯಲ್ಲಿ ಇದುವರೆಗೆ ಪದವಿ ಪರೀಕ್ಷೆಗೆ “ಎಂಯು ಲಿಂಕ್ಸ್‌’ ಎಂಬ ಸಾಫ್ಟ್ವೇರ್‌ ಇತ್ತು. ಇದನ್ನು ವಿ.ವಿ.ಯೇ ನಿರ್ವಹಣೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಮಾಹಿತಿ ವಿ.ವಿ.ಯಲ್ಲಿಯೇ ಇದೆ. ಆದರೆ “ಯುಯುಸಿಎಂಎಸ್‌’ ನಿಯಂತ್ರಣ ರಾಜ್ಯ ಉನ್ನತ ಶಿಕ್ಷಣ ಇಲಾಖೆಯದ್ದು. ಹೀಗಾಗಿ ರಾಜ್ಯದ ಎಲ್ಲ ವಿ.ವಿ.ಗಳಿಗೆ ಒಳಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳ ಮಾಹಿತಿ, ಅಂಕಪಟ್ಟಿ ಇತ್ಯಾದಿ ಎಲ್ಲವೂ ಮುಂದೆ ಇಲಾಖೆಯಲ್ಲಿಯೇ ಭದ್ರವಾಗಿರಲಿದೆ.

ಇದನ್ನೂ ಓದಿ:11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ

Advertisement

ಎನ್‌ಇಪಿ ವಿದ್ಯಾರ್ಥಿಗಳಿಗೆ ಮಾತ್ರ!
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿಗೆ ಸೇರ್ಪಡೆಯಾದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಯುಯುಸಿಎಂಎಸ್‌ ಸಾಫ್ಟ್ ವೇರ್‌ ಅಡಿ ಪರೀಕ್ಷೆ ನಡೆಯಲಿದೆ. ಉಳಿದ ವಿದ್ಯಾರ್ಥಿಗಳ ಪದವಿ ಪೂರ್ಣವಾಗುವವರೆಗೆ “ಎಂಯು ಲಿಂಕ್ಸ್‌’ ಮೂಲಕ ಪರೀಕ್ಷೆ ನಡೆಯಲಿದೆ.

ಏನಿದು “ಯುಯುಸಿಎಂಎಸ್‌’?
ಸಮಗ್ರ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆಯು ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರಕಾರದ ಪ್ರಮುಖ ಕಾರ್ಯ ಕ್ರಮಗಳಲ್ಲಿ ಒಂದು. ದೇಶದಲ್ಲಿ ಕರ್ನಾ ಟಕ ಈ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತರುತ್ತಿದೆ. ಯುಯುಸಿಎಂಎಸ್‌ ರಾಜ್ಯದ ಎಲ್ಲ ವಿ.ವಿ. ಮತ್ತು ಕಾಲೇಜು ಗಳನ್ನು ಕ್ರೋಡೀಕರಿಸಿ ಮತ್ತು ಏಕೀಕರಿಸಿ ಎಲ್ಲರಿಗೂ ಒಂದೇ ವ್ಯವಸ್ಥೆಯಡಿ ವಿವಿಧ ಮಾಹಿತಿ ಒದಗಿಸು ತ್ತದೆ. ಈ ವ್ಯವಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳ ಸಮಗ್ರ ಚಟುವಟಿಕೆಗಳನ್ನು ಗಣಕೀಕರಣ ಗೊಳಿಸುತ್ತದೆ.

ಅಂಕಪಟ್ಟಿ ಡಿಜಿ ಲಾಕರ್‌ನಲ್ಲಿ  
ಯುಯುಸಿಎಂಎಸ್‌ ಅನುಷ್ಠಾನವಾದ ಬಳಿಕ ಹಂತಹಂತವಾಗಿ “ಡಿಜಿ ಲಾಕರ್‌’ ಜಾರಿಗೆ ಬರಲಿದೆ. ಅಂದರೆ ಮುಂದೆ ಅಂಕಪಟ್ಟಿಯನ್ನು ವಿ.ವಿ.ಯು ಮುದ್ರಿಸಿ ನೀಡ ಬೇಕಿಲ್ಲ. ವಿದ್ಯಾರ್ಥಿಗಳಿಂದ ಕಳೆದು ಹೋಗುವ ಪ್ರಮೇಯವೂ ಇಲ್ಲ. ಅದು ಡಿಜಿ ಲಾಕರ್‌ನಲ್ಲಿ ಭದ್ರ ವಾಗಿದ್ದು, ನೋಂದಣಿ ಸಂಖ್ಯೆ ನಮೂ ದಿಸಿ ಡೌನ್‌ಲೋಡ್‌ ಮಾಡಿ ಕೊಳ್ಳಬಹುದು.

ಸಮಗ್ರ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ ಅನುಷ್ಠಾನಕ್ಕೆ ಗಮನ ಹರಿಸಿದ್ದೇವೆ. ವಿ.ವಿ.ಗಳು ಹೊಸ ತಂತ್ರಾಂಶ ಖರೀದಿ /ನವೀಕರಣ ಕೈಗೆತ್ತಿಕೊಳ್ಳಬಾರದು ಎಂಬ ಸೂಚನೆ, ಸಿಂಡಿಕೇಟ್‌ ನಿರ್ಣಯದಂತೆ ಮಾರ್ಚ್‌ನಲ್ಲಿ ಎನ್‌ಇಪಿ ಮೊದಲ ಸೆಮಿಸ್ಟರ್‌ ಪರೀಕ್ಷೆಯನ್ನು ಯುಯುಸಿ ಎಂಎಸ್‌ ಮೂಲಕ ನಡೆಸಲಾಗುವುದು.
-ಪ್ರೊ| ಪಿ.ಎಲ್‌. ಧರ್ಮ,
ಕುಲಸಚಿವರು (ಪರೀಕ್ಷಾಂಗ)
ಮಂಗಳೂರು ವಿ.ವಿ.

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next