Advertisement

ಕೋವಿಡ್‌ 19 ನಿಯಂತ್ರಣಕ್ಕೆ ಹೊಸ ಕಾರ್ಯ ತಂಡ

06:10 AM Jun 22, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ತೀವ್ರವಾಗಿ ಹಬ್ಬುತ್ತಿರುವ ಕೋವಿಡ್‌ 19 ಸೋಂಕು ನಿಯಂತ್ರಣಕ್ಕಾಗಿ ಕಣ್ಗಾವಲು ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಹೆಚ್ಚಿಸಲು ಸರ್ಕಾರ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಹೊಸ ಕಾರ್ಯಪಡೆ  ರಚಿಸಿದೆ. ಬೆಂಗಳೂರಿನಲ್ಲಿ ಕೋವಿಡ್‌ ಪಾಸಿಟಿವ್‌ ರೋಗಿಗಳನ್ನು ತಮ್ಮ ಮನೆಗಳಿಂದ ಅಥವಾ ಸಾಂಸ್ಥಿಕ  ಸಂಪರ್ಕ ತಡೆ ಸ್ಥಳಗಳಿಂದ ಕೋವಿಡ್‌ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರ ಇಲ್ಲವೇ ಆರೈಕೆ ಕೇಂದ್ರಗಳಿಗೆ ವರ್ಗಾಯಿಸಲು  “ಅನ್‌ಲಾಕ್‌-1′ ಕಾರ್ಯ ತಂಡ ರಚಿಸಲಾಗಿದೆ. ಈ ತಂಡವು ಬಿಬಿಎಂಪಿ ಆಯುಕ್ತರಿಗೆ ವರದಿ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಆದೇಶದಲ್ಲಿ ತಿಳಿಸಿದ್ದಾರೆ.

Advertisement

ಕೋವಿಡ್‌ ರೋಗಿಗಳ ವರ್ಗಾವಣೆ ತಂಡವು  ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ನೇತೃತ್ವದಲ್ಲಿ ರಚನೆಯಾಗಿದ್ದು, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್‌, ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಂ.ಎನ್‌. ಅನುಚೇತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ (108 ಸೇವೆಗಳು) ಉಪನಿರ್ದೇಶಕ ಡಾ.ಬಣಕಾರ್‌ ಸದಸ್ಯರಾಗಿದ್ದಾರೆ. ಈ ತಂಡವು ಐಸಿಎಂಆರ್‌ ಪೋರ್ಟಲ್‌ನ ವರದಿ ಆಧರಿಸಿ ಕೋವಿಡ್‌ ಸರಾಕಾತ್ಮಕ ವ್ಯಕ್ತಿಗಳನ್ನು ಅವರ ಮನೆ ಅಥವಾ ಸಾಂಸ್ಥಿಕ ಸಂಪರ್ಕ ತಡೆ ಸ್ಥಳಗಳಿಂದ ಕ್ಲಿನಿಕಲ್‌ ಅಸೆಸ್‌ಮೆಂಟ್‌ ಕೇಂದ್ರಗಳಿಗೆ 6 ಗಂಟೆಯೊಳಗೆ ವರ್ಗಾವಣೆ ಮಾಡಬೇಕು.

ನಂತರ ಆರೋಗ್ಯ ಇಲಾಖೆಯ ಮಾನದಂಡಗಳ ಪ್ರಕಾರ ಕೋವಿಡ್‌ ಆಸ್ಪತ್ರೆ/ ಆರೋಗ್ಯ ಕೇಂದ್ರ/ ಆರೈಕೆ ಕೇಂದ್ರಗಳಿಗೆ ವರ್ಗಾವಣೆಯಾಗಿರುವುದನ್ನು  ಖಾತರಿಪಸಿಕೊಳ್ಳಬೇಕು. ಐಸಿಎಂಆರ್‌ ಪೋರ್ಟಲ್‌ನಲ್ಲಿರುವ ಮೊಬೈಲ್‌ ಸಂಖ್ಯೆ ರೋಗಿಯು ಹಿಂದಿನ 14 ದಿನಗಳಲ್ಲಿ ಬಳಸುವ ಸಂಖ್ಯೆಗಿಂತ ಬೇರೆಯಾಗಿದ್ದರೆ ಎಸ್‌ 3 ಪೋರ್ಟಲ್‌ನಲ್ಲಿ ರೋಗಿಯ ಮೊಬೈಲ್‌ ಸಂಖ್ಯೆ ತಿದ್ದುಪಡಿ  ಖಚಿತಪಡಿಸಿಕೊಳ್ಳಬೇಕು. ಸಂಪರ್ಕ ಪತ್ತೆಗಾಗಿ ಸಂಪರ್ಕ ಪತ್ತೆ ತಂಡ ಮತ್ತು ಪೊಲೀಸ್‌ ನೋಡಲ್‌ ಅಧಿಕಾರಿಗಳಿಗೆ ಸರಿಪಡಿಸಿದ ಮೊಬೈಲ್‌ ಸಂಖ್ಯೆ ಒದಗಿಸಲು ಪ್ರಕ್ರಿಯೆ, ಕಾರ್ಯವಿಧಾನ ರೂಪಿಸಬೇಕು.

ಕಂಟೈನ್ಮೆಂಟ್‌ ತಂಡಕ್ಕೆ  ಸದಸ್ಯರು: ಕಂಟೈನ್‌ಮೆಂಟ್‌ ವಲಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸತ್ಯವತಿ ಅವರ ನೇತೃತ್ವದ ತಂಡದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಬಸವರಾಜ್‌, ಡಿಸಿಪಿ (ಸಿಎಆರ್‌) ವಿದ್ಯಾ ಇದ್ದಾರೆ.  ಈ ತಂಡ ಕಟ್ಟುನಿಟ್ಟಾದ ಪರಿಧಿ ನಿಯಂತ್ರಣ ಹಾಗೂ ಶಂಕಿತ ಪ್ರಕರಣ ಪತ್ತೆಗಾಗಿ ಕಂಟೈನ್ಮೆಂಟ್‌ ವಲಯ ಮತ್ತು ಸುತ್ತಮುತ್ತಲಿನ (ಸುಮಾರು 100 ಮೀಟರ್‌) ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ  ಅಂತರ ಪಾಲನೆಗೆ ಸಂಬಂಧಪಟ್ಟಂತೆ ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ನವೀನ್‌ರಾಜ್‌ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ನೇತೃತ್ವದ ತಂಡದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಅನುº  ಕುಮಾರ್‌, ಕೃಷಿ ಮಾರುಕಟ್ಟೆ ನಿರ್ದೇಶಕ ಕರೀಗೌಡ, ಚೀಫ್‌ ಮಾರ್ಷಲ್‌ ರಾಜ್‌ ಬೀರ್‌ಸಿಂಗ್‌ ಸದಸ್ಯರಾಗಿದ್ದಾರೆ. ಈ ತಂಡ ಕೆ.ಆರ್‌.ಮಾರುಕಟ್ಟೆ, ಎಪಿಎಂಸಿ, ಕಲಾಸಿಪಾಳ್ಯ ಸೇರಿದಂತೆ ಇತರೆ ಎಲ್ಲ ಮಾರುಕಟ್ಟೆಗಳತ್ತ ಗಮನಹರಿಸಬೇಕು.  ಎಲ್ಲ ಪಾಲುದಾರರನ್ನು ತೊಡಗಿಸಿಕೊಳ್ಳಬೇಕು. ಪುನರಾವರ್ತಿತ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಕಾರ್ಯ ನಡೆಸಲಿದೆ.

Advertisement

ಜನನಿಬಿಡ ಪ್ರದೇಶದಲ್ಲಿ ರ್‍ಯಾಂಡಮ್‌ ಪರೀಕ್ಷೆ: ನಗರದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಇಂದಿನಿಂದ (ಜೂ.22) ನಗರದಲ್ಲಿ ಹೆಚ್ಚು ಜನ ಸೇರುವ ಶಾಪಿಂಗ್‌ ಮಾಲ್‌, ಮಾರುಕಟ್ಟೆ, ಆಟೋ  ನಿಲ್ದಾಣ, ಹೋಟೆಲ್‌, ಬಸ್‌ ನಿಲ್ದಾಣ, ರೆಸ್ಟೋರೆಂಟ್‌, ಉದ್ಯಾನವನಗಳಲ್ಲಿ ರ್‍ಯಾಂಡಮ್‌ ಸೋಂಕು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ನಗರದಲ್ಲಿ ಜನ ಸಂಪರ್ಕ ಹೊಂದಿ ರುವವರಲ್ಲಿ ಕೋವಿಡ್‌ 19 ಸೋಂಕು ಕಾಣಿಸಿ ಕೊಳ್ಳುತ್ತಿದೆ.

ಹೀಗಾಗಿ, ಮುಂಜಾ ಗ್ರತಾ ಕ್ರಮವಾಗಿ ನಗರದ ಜನನಿಬಿಡ ಪ್ರದೇಶ ಗಳಲ್ಲಿ ರ್‍ಯಾಂಡಮ್‌ ಸೋಂಕು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ  ಎಂದರು. ನಿತ್ಯ 7,500 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಮೊಬೈಲ್‌ ವಾಹನದ ಮೂಲಕ ಗಂಟಲು ದ್ರವ ಸಂಗ್ರಹ ಮಾಡಿ ಕೊಳ್ಳಲಾಗುವುದು. ಇದಕ್ಕಾಗಿ 30 ಸ್ವಾಬ್‌ ಸಂಗ್ರಹ ವಾಹನ ಗಳನ್ನು ಸಿದಟಛಿಪಡಿಸಿಕೊಳ್ಳಲಾಗಿದೆ.  ಇದರೊಂದಿಗೆ ನಗರದಲ್ಲಿನ ಜ್ವರ ತಪಾಸಣಾ ಕೇಂದ್ರಗಳಲ್ಲಿಯೂ ಗಂಟಲ ದ್ರವದ ಮಾದರಿ ಸಂಗ್ರಹಿಸುವ ಕಾರ್ಯ ಮಾಡಲಾಗುವುದು. ಇದಕ್ಕೆ ಬೇಕಾದ ಸಿದತೆ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ ಎಂದು ಮಾಹಿತಿ  ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next