ಹಾವೇರಿ: ನೂತನವಾಗಿ ಸ್ಥಾಪಿಸಲಾಗಿರುವ ರಾಜ್ಯದ 7 ವಿಶ್ವವಿದ್ಯಾನಿಲಯಗಳಲ್ಲಿ ಸಾಂಪ್ರದಾ ಯಿಕ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬದಲಾಗಿ ಜ್ಞಾನ, ಆಧುನಿಕ ತಂತ್ರಜ್ಞಾನ, ಉದ್ಯೋಗ ಕೇಂದ್ರಿತ ಕೌಶಲಾಧಾರಿತ, ಮಾನವೀಯ ಮೌಲ್ಯಗಳ ಪಠ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದು ಹಾವೇರಿ ವಿವಿ ಕುಲಪತಿ ಸುರೇಶ ಜಂಗಮಶೆಟ್ಟಿ ತಿಳಿಸಿದರು.
ಸಮೀಪದ ಕೆರೆಮತ್ತಿಹಳ್ಳಿಯಲ್ಲಿ ರುವ ಹಾವೇರಿ ವಿವಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ, ಬಾಗಲಕೋಟೆ, ಹಾಸನ, ಕೊಡಗು, ಕೊಪ್ಪಳ, ಬೀದರ್, ಚಾಮರಾಜನಗರ ವಿವಿಗಳ ಕುಲಪತಿಗಳು ಹಾವೇರಿ ಯಲ್ಲಿ ಸಮಾವೇಶಗೊಂಡು ಭವಿಷ್ಯದ ವಿಶ್ವವಿದ್ಯಾನಿಲಯಗಳ ಬೆಳವಣಿಗೆ, ಆರ್ಥಿಕ ಸ್ವಾವಲಂಬನೆ, ನೂತನ ಪಠ್ಯಕ್ರಮ ಅಳವಡಿಕೆ ಕುರಿತು ಚರ್ಚಿಸಿದ್ದೇವೆ ಎಂದರು.
ಚಾಮರಾಜನಗರ ವಿವಿ ಕುಲಪತಿ ಡಾ| ಗಂಗಾಧರ, ಬಾಗಲ ಕೋಟೆಯ ವಿವಿ ಕುಲಪತಿ ಬಿ.ಎಸ್. ದೇಶಪಾಂಡೆ, ಹಾಸನ ವಿವಿ ಕುಲಪತಿ ಟಿ.ಸಿ.ತಾರಾನಾಥ, ಕೊಡಗು ವಿವಿ ಕುಲಪತಿ ಡಾ| ಅಶೋಕ ಅವರು ನೂತನ ವಿವಿಗಳ ಭವಿಷ್ಯದ ನಡಿಗೆ ಕುರಿತು ಮಾತನಾಡಿ, ನೂತನ ವಿವಿ ಗಳು ಈಗಾಗಲೇ ಯುಜಿಸಿ ಮಾನ್ಯತೆ ಹಾಗೂ ನೋಂದಣಿ ಪಡೆದುಕೊಂಡಿವೆ. ಸಾಂಪ್ರದಾಯಿಕ ವಿವಿಗಳ ಬೋಧನೆ, ಸಂಶೋಧನೆ, ವಿಸ್ತರಣೆ ಚಟುವಟಿಕೆಗಳ ಬದಲಾಗಿ ವೈಜ್ಞಾನಿಕ, ತಾಂತ್ರಿಕ, ಕೌಶಲಾಧಾರಿತ, ಮಾನವೀಯ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಈ ಏಳು ವಿವಿಗಳು ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಿವೆ.
ಆಧುನಿಕ ತಾಂತ್ರಿಕ ಡಿಜಿಟಲ್ ಮಾದರಿ ಶಿಕ್ಷಣ ಪರಿಚಯಿಸಲಾಗುವುದು. ಆಧುನಿಕ ಉದ್ಯೋಗದಾತ ಕಂಪೆನಿಗಳು ಅಪೇಕ್ಷಿಸುವ ಕೌಶಲಾಧಾರಿತ ತರಬೇತಿಯನ್ನು ಮಕ್ಕಳಿಗೆ ನೀಡಲಾಗುವುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಶಿಕ್ಷಣ ತಜ್ಞರನ್ನು ಆಹ್ವಾನಿಸಿ ಪಠ್ಯಕ್ರಮಗಳ ರೂಪುರೇಷೆ ತಯಾರಿಸಲಾಗುವುದು. ಕೌಶಲಾಧಾರಿತ ಮಾನವೀಯ ಮೌಲ್ಯ ಗಳುಳ್ಳ ಕೋರ್ಸ್‌ಗಳನ್ನು ಪರಿಚಯಿಸಲಾಗು ವುದು. ಉನ್ನತ ಸಂಶೋಧನೆಗೆ ಒತ್ತು ನೀಡಲಾಗುವುದು. ಭವಿಷ್ಯದಲ್ಲಿ ಸ್ವತಂತ್ರವಾಗಿ ಸ್ವ ಪೋಷಣೆ ಮಾಡಿ ಕೊಳ್ಳುವ ಹಾಗೂ ವಿವಿಗಳು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.
ನೂತನ ವಿವಿಗಳ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಆಯಾ ವಿವಿಗಳಲ್ಲೇ ಸಂಯೋಜನೆ ಹೊಂದ ಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಪೂರ್ಣಗೊಂಡಿದೆ. ವಿವಿ ಸಂಯೋಜಿತ ಸ್ವತಂತ್ರ ಕಾಲೇಜುಗಳನ್ನು ಶೀಘ್ರವೇ ಗುರುತಿಸಲಾಗುವುದು. ನೂತನ ವಿವಿಗಳಲ್ಲೇ ಪಿಎಚ್‌ಡಿ ಪ್ರವೇಶಕ್ಕೆ ಅಧಿ ಸೂಚನೆ ಹೊರಡಿಸಲಾಗಿದೆ ಎಂದರು.