Advertisement

ಗಮನ ಸೆಳೆದ ವಿನೂತನ ಶೈಲಿಯ ವಾರ್ಷಿಕೋತ್ಸವ

04:31 PM Dec 18, 2017 | |

ಕಡಬ: ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಆಡಳಿತಕ್ಕೊಳಪಟ್ಟ ರಾಮಕುಂಜ ಶ್ರೀ ರಾಮಕುಂಜೇಶ್ವರ ವೃತ್ತಿಪರ ಅಭಿವೃದ್ಧಿ ಕೇಂದ್ರದ ಅಧೀನದಲ್ಲಿರುವ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಹಿ.ಪ್ರಾ. ಶಾಲೆ, ಕಿಂಡರ್‌ ಗಾರ್ಟನ್‌ ಹಾಗೂ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವವನ್ನು ವಿದ್ಯಾರ್ಥಿಗಳ ಶೆ„ಕ್ಷಣಿಕ ಜಾತ್ರೆ-2017 ಎನ್ನುವ ಹೆಸರಿನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.

Advertisement

ಪ್ರದರ್ಶನ
ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ರೀತಿಯ ಮಾದರಿಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದರು. ಪಾಠದ ವಿಷಯಕ್ಕೆ ಪೂರಕವಾದ ಚಾರ್ಟ್‌ಗಳು, ಮಾದರಿಗಳು, ಹಳೆಯ ವಸ್ತುಗಳ ಸಂಗ್ರಹಣೆ, ಸ್ಕೌಟ್ಸ್‌, ಗೈಡ್ಸ್‌ಗೆ ಸಂಬಂಧಪಟ್ಟ ವಸ್ತುಗಳ ಸಂಗ್ರಹಣೆ ಹಾಗೂ ಇತರ ಪಠ್ಯ ಪೂರಕ ಚಟುವಟಿಕೆಗಳ ಪ್ರದರ್ಶನ ಹಾಗೂ ಆಹಾರ ಮೇಳ ನಡೆಯಿತು.

ಸುಳ್ಯ ಶಾಸಕ ಎಸ್‌.ಅಂಗಾರ, ಬೆಂಗಳೂರು ರಾಜೀವಗಾಂಧಿ ವಿ.ವಿ. ಸಿಂಡಿಕೇಟ್‌ ಸದಸ್ಯ ಡಾ| ರಘು, ದ.ಕ. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ, ತಾ.ಪಂ. ಸದಸ್ಯೆಯರಾದ ತೇಜಸ್ವಿನಿ ಶೇಖರ ಗೌಡ, ಜಯಂತಿ ಆರ್‌.ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ರಾಮಕುಂಜ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ., ಪಿಡಿಒ ರವಿಚಂದ್ರ, ಸದಸ್ಯರಾದ ರವಿ ಕೆದಿಲಾಯ, ಜಯಶ್ರೀ ಇರ್ಕಿ, ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ| ನಿರಂಜನ್‌ ರೈ, ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್‌ನ ವೈದ್ಯ ಡಾ|ರಾಜಾರಾಮ್‌ ಉಪ್ಪಿನಂಗಡಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಕೃಷ್ಣಮೂರ್ತಿ
ಇ. ಕಲ್ಲೇರಿ, ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌., ಗೂನಡ್ಕ ಮಾರುತಿ ಇಂಟರ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಅಧ್ಯಕ್ಷ ರುಕ್ಮಯ ದಾಸ್‌, ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ವಿಜಯಕುಮಾರ್‌ ರೈ ಕರ್ಮಾಯಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್‌ ಉಪ್ಪಂಗಳ, ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿಠಲ ರೈ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಮಾಧವ ಪೂಜಾರಿ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ್‌ ರಾಮಕುಂಜ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಪರಿವೀಕ್ಷಣಾಧಿಕಾರಿ ಉದಯಶಂಕರ್‌, ರಾಮಕುಂಜ ವಲಯ ಸಿಆರ್‌ಪಿ ಮಹೇಶ್‌ ಕುಮಾರ್‌, ನೆಲ್ಯಾಡಿ ಸೈಂಟ್‌ ಜಾರ್ಜ್‌ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಟಿ., ನಿವೃತ್ತ ಮುಖ್ಯಶಿಕ್ಷಕ ಗುಮ್ಮಣ್ಣ ಗೌಡ ರಾಮಕುಂಜ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ, ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನೀತ್‌ ರಾಜ್‌ ಶೆಟ್ಟಿ ಸೇರಿದಂತೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಸೃಜನಶೀಲತೆಗೆ ಅವಕಾಶ
ಮಕ್ಕಳ ಹೆತ್ತವರು ತಾವೇ ಮನೆಯಲ್ಲಿ ಸಿದ್ದಪಡಿಸಿದ ತಿಂಡಿ ತಿನಸುಗಳನ್ನು ಆಹಾರ ಮೇಳದಲ್ಲಿ ಮಾರಾಟ ಮಾಡಿದರು. ಕಿಂಡರ್‌ ಗಾರ್ಟನ್‌ ಮಕ್ಕಳಿಗೆ ವಿವಿಧ ಮನೋರಂಜನ ಆಟಗಳು ಈ ವೇಳೆ ನಡೆಯಿತು. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಸಭೆ, ಭಾಷಣ ಇತ್ಯಾದಿ ನಡೆಸುವ ಬದಲಾಗಿ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ದಿನಪೂರ್ತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೊಸ ಅನುಭವ ಪಡೆದರು.

ಎರಡುಸಾವಿರ ಹೆತ್ತವರು ಭಾಗಿ
ಸಂಸ್ಥೆ ಬೆಳೆದುಬಂದ ರೀತಿ, ಸಂಸ್ಥೆಯ ಸಾಧನೆಗಳ ವಿಡಿಯೋ ಪ್ರದರ್ಶನವೂ ವೇದಿಕೆಯಲ್ಲಿ ನಡೆಯಿತು. ಶೈಕ್ಷಣಿಕ ಹಾಗೂ ಕ್ರೀಡೆಯಲ್ಲಿ ಮಕ್ಕಳ ಸಾಧನೆಗೆ ದೊರೆತ ಪ್ರಶಸ್ತಿಗಳನ್ನೂ ಈ ಸಂದರ್ಭ ಪ್ರದರ್ಶಿಸಲಾಯಿತು. ಶೈಕ್ಷಣಿಕ ಜಾತ್ರೆಗೆ ಬಂದವರಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನದ ವ್ಯವಸ್ಥೆಯೂ ಮಾಡಲಾಗಿತ್ತು. ಒಟ್ಟಿನಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ನಡೆದ ಈ ಶೈಕ್ಷಣಿಕ ಜಾತ್ರೆಗೆ ಶಾಲಾ ಮಕ್ಕಳ ಸುಮಾರು 2 ಸಾವಿರ ಮಂದಿ ಹೆತ್ತವರು ಆಗಮಿಸಿ ಮಕ್ಕಳ ಶೈಕ್ಷಣಿಕ ಸಾಧನೆಯ ಪರಿಚಯ ಮಾಡಿಕೊಂಡರು. ಆಂಗ್ಲ ಮಾಧ್ಯಮ ಪ್ರೌಢಶಾಲಾ ಕಾರ್ಯದರ್ಶಿ ಕೆ. ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಆಡಳಿತಾಧಿಕಾರಿ ಆನಂದ, ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್‌., ಶಿಕ್ಷಕರು,ಸಿಬಂದಿಗಳು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next