Advertisement

ಅಂತರಿಕ್ಷದಲ್ಲಿ ಹೈಫೈ ಹೋಟೆಲ್‌

10:10 AM Apr 07, 2018 | Team Udayavani |

ಹೊಸದಿಲ್ಲಿ: ಕಳೆದೆರಡು ವರ್ಷಗಳ ಹಿಂದೆ, ಖಾಸಗಿ ಸಂಸ್ಥೆಯೊಂದರಿಂದ ಮಂಗಳ ಗ್ರಹಕ್ಕೆ ಜನರನ್ನು ಕಳಿಸುವ ಯೋಜನೆ ಪ್ರಸ್ತಾಪವಾಯಿತು. ಇತ್ತೀಚೆಗೆ, ಸೂರ್ಯನ ಅಧ್ಯಯನಕ್ಕೆ ಸಾಗುವ ರಾಕೆಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಲು ಜನರಿಗೆ ನಾಸಾದಿಂದ ಆಹ್ವಾನ ಬಂದಿದ್ದಾಯ್ತು. ಇದೀಗ, ಓರಿಯನ್‌ ಸ್ಪೇಸ್‌ ಕಂಪೆನಿ ಎಂಬ ಸಂಸ್ಥೆ, ಅಂತರಿಕ್ಷದಲ್ಲಿ ಐಶಾರಾಮಿ ಹೊಟೇಲೊಂದನ್ನು ನಿರ್ಮಿಸುವ ಕನಸಿಗೆ ಕೈ ಹಾಕಿದೆ. ಈ ಹೊಟೇಲ್‌ಗೆ ‘ಅರೋರಾ ಸ್ಟೇಷನ್‌’ ಎಂದು ಹೆಸರಿಟ್ಟಿದೆ. ಭೂಮಿಯಲ್ಲೇ ನಿರ್ಮಾಣಗೊಂಡು, ಅಂತರಿಕ್ಷಕ್ಕೆ 2021ರಲ್ಲಿ ನೆಗೆಯಲಿರುವ ಈ ಹೊಟೇಲ್‌, 2022ರಿಂದ ಕಾರ್ಯಾರಂಭ ಮಾಡಲಿದೆ ಎಂದು ಸಂಸ್ಥೆ ಹೇಳಿದೆ.

Advertisement

ಏನಿದರ ವಿಶೇಷ? ಕಂಪೆನಿ ಪ್ರಕಾರ, ಪ್ರತಿಷ್ಠಿತ ರಿಟ್ಜ್ -ಕಾರ್ಲ್ಟನ್‌ ಹಾಗೂ ಮ್ಯಾಂಡ್ರಿಯನ್‌ ಓರಿಯಂಟಲ್‌ ಸಂಸ್ಥೆಗಳ ಹೊಟೇಲ್‌ಗ‌ಳಿಗೂ ಮೀರಿದ ಐಶಾರಾಮ ಇರಲಿದೆ. ಪ್ರತಿ 90 ನಿಮಿಷಕ್ಕೆ ಭೂ ಮಂಡಲವನ್ನು ಒಂದು ಪ್ರದಕ್ಷಿಣೆ ಹಾಕಲಿದೆ ಈ ಹೊಟೇಲ್‌. ಹೀಗಾಗಿ, ಇದರಲ್ಲಿರುವ ಗ್ರಾಹಕರಿಗೆ ನಿತ್ಯ 16 ಸೂರ್ಯೋದಯಗಳನ್ನು ನೋಡುವ ಅಪೂರ್ವ ಅವಕಾಶ ಸಿಗಲಿದೆ. ಈ ಹೊಟೇಲ್‌ಗೆ ಹೋಗಬಯಸುವವರು, ಒಂದು ತಿಂಗಳ ಕಾಲ ಆನ್‌ ಲೈನ್‌ ಮತ್ತು 4 ವಾರಗಳ ಕಾಲ ಹೂಸ್ಟನ್‌, ಟೆಕ್ಸಾಸ್‌ನಲ್ಲಿ ತರಬೇತಿ ಪಡೆಯಬೇಕು. ಅಂದಹಾಗೆ, ಪ್ರತಿಯೊಬ್ಬ ಗ್ರಾಹಕ ಇದಕ್ಕಾಗಿ 64 ಕೋಟಿ ರೂ. ತೆರಬೇಕಿದೆ! ಪ್ರಯಾಣ ಪೂರ್ತಿಯಾದ ಮೇಲೆ ಈ ಹಣ ಸಂಪೂರ್ಣವಾಗಿ ಹಿಂದಿರುಗಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next