Advertisement
ಈ ಹಿನ್ನೆಲೆಯಲ್ಲಿ “ಸ್ವಾತಂತ್ರ್ಯದ ಭವಿಷ್ಯ’ ಎಂಬ ಪರಿಕಲ್ಪನೆಯಡಿ “ಉದಯವಾಣಿ’ಯ ಮಂಗಳೂರು ಪ್ರಾಂತೀಯ ಕಚೇರಿಯು ಆ. 12 ರಂದು ಉದಯವಾಣಿ ಆನ್‌ಲೈನ್ ಜತೆಯಲ್ಲಿ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಆ ಮೂಲಕ 71ನೇ ಸ್ವಾತಂತ್ರೋತ್ಸವವನ್ನು ಬರಮಾಡಿ ಕೊಳ್ಳಲಾಯಿತು.
ಸ್ವಾತಂತ್ರ್ಯ ದಿನಾಚರಣೆಗೆ ಪೂರಕವಾಗಿ ಯುವ ಜನಾಂಗಕ್ಕೆ ಅದರಲ್ಲಿಯೂ ಭವಿಷ್ಯದ ಪ್ರಜೆಗಳಾಗುವ ಶಾಲಾ ಮಕ್ಕಳಲ್ಲಿ ದೇಶ ಪ್ರೇಮ- ದೇಶಾಭಿಮಾನದ ಚಿಂತನೆ ಮೂಡಿಸುವುದು ಪತ್ರಿಕೆಯ ಆಶಯ. ಈ ಉದ್ದೇಶದಿಂದ “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿಯಂತೆ ಈ “ಸ್ವಾತಂತ್ರ್ಯದ ಭವಿಷ್ಯ’ ಸಂವಾದಕ್ಕೆ ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ, ಗಡಿ ಭದ್ರತಾ ದಳದ ನಿರೀಕ್ಷಕ ಸಂಜೀವ ಕುಲಾಲ್, ದೇಶದ ಪ್ರಥಮ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ, ಎಂಜಿನಿಯರಿಂಗ್ ಕ್ಷೇತ್ರದ ಪ್ರಖ್ಯಾತ ಸಾಧಕ ಪ್ರೊ| ಜಿ.ಆರ್. ರೈ ಹಾಗೂ ಗಾಂಧಿ ಪ್ರತಿಷ್ಠಾನದ ಪ್ರಭಾಕರ ಶ್ರೀಯಾನ್ ಅವರನ್ನು ಆಹ್ವಾನಿಸಲಾಗಿತ್ತು. ಇನ್ನೊಂದೆಡೆ ಹೊಸ ಚಿಗುರು ಸ್ವರೂಪದಲ್ಲಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 10ನೇ ತರಗತಿ ಓದುತ್ತಿರುವ ಅನಿಶಾ ಮಿಶೆಲ್ ಸಿಕ್ವೇರಾ (ಸೈಂಟ್ ಆ್ಯಗ್ನೆಸ್), ಪ್ರತೀಕ್ಷಾ ಬಿ. (ಅಶೋಕ ವಿದ್ಯಾ ಲಯ, ಅಶೋಕನಗರ), ಹೃತ್ವಿ (ಕೆನರಾ ಗರ್ಲ್ಸ್ ಹೈಸ್ಕೂಲ್), ರಾಹುಲ್ ಆರ್. ನಾಯಕ್ (ಸ್ವರೂಪ ಅಧ್ಯ ಯನ ಕೇಂದ್ರ), ಶ್ರವಣ್ ಎ. (ಕೆನರಾ ಹೈಸ್ಕೂಲ್ ಉರ್ವ) ಮತ್ತು ಆರಿÌನ್ ಮೊಂತೇರೋ (ಪಾದುವಾ ಹೈಸ್ಕೂಲ್) ಸೇರಿ ಒಟ್ಟು ಆರು ಮಕ್ಕಳನ್ನು ಆಯ್ಕೆ ಮಾಡ ಲಾಯಿತು. ಇವರ ಜತೆಗೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ಆಹ್ವಾನಿತ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಹಾಗೂ ಶಿಕ್ಷಕಿ ಯರು ಸ್ಫೂರ್ತಿ ಯಾಗಿ ಪಾಲ್ಗೊಂಡು ಕಾರ್ಯ ಕ್ರಮ ವನ್ನು ಮತ್ತಷ್ಟು ಅರ್ಥ ಪೂರ್ಣ ವಾಗಿಸಿದ್ದು ವಿಶೇಷ.
Related Articles
ಸ್ವಾತಂತ್ರ್ಯ, ದೇಶ ರಕ್ಷಣೆ, ಆರೋಗ್ಯ ವಂತ ಸಮಾಜದ ನಿರ್ಮಾಣ, ಶಿಕ್ಷಣಕ್ಕೆ ಆದ್ಯತೆ, ದೇಶದ ಎಲ್ಲ ಕ್ಷೇತ್ರಗಳ ಬೆಳ ವಣಿಗೆಗಳು, ಮೂಲಸೌಕರ್ಯ, ಸ್ವತ್ಛತೆ, ಪ್ರಜೆಗಳ ಕರ್ತವ್ಯ, ಸುವ್ಯವಸ್ಥಿತ ಆಡಳಿತ ವ್ಯವಸ್ಥೆ, ಸಾಮರಸ್ಯ… ಹೀಗೆ ವಸ್ತುಶಃ ಎಲ್ಲ ಸಂಗತಿಗಳ ಚಿಂತನ ಮಂಥನ ಇಲ್ಲಿ ನಡೆಯಿತು.
Advertisement
ಪ್ರೊ| ಜಿ.ಆರ್. ರೈ ಅವರು ಕೂಡ, 1947ರ ಆಗಸ್ಟ್ 15ರಂದು ನಡುರಾತ್ರಿ ಮಂಗಳೂರಿನ ಸೆಂಟ್ರಲ್ ಮೈದಾನದಲ್ಲಿ ಪ್ರಪ್ರಥಮ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ತರುಣನಾಗಿ ಪ್ರತ್ಯಕ್ಷವಾಗಿ ವೀಕ್ಷಿಸಿದವರು. ಆ ದಿನ ಮಂಗಳೂರು ಪೂರ್ತಿ ಸಂಭ್ರಮದ ವಾತಾ ವರಣವಿತ್ತು ಎಂದು 70 ವರ್ಷಗಳ ಹಿಂದಿನ ಆ ಸಂತಸದ ಕ್ಷಣ ವನ್ನು ಮೆಲುಕು ಹಾಕಿದರು. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಗಳಿಗೆ ಪರಮ ಗೌರವ ನೀಡ ಬೇಕೆಂದು ಶ್ರೀಯಾನ್ ಕೂಡ ಮಕ್ಕಳಿಗೆ ತಿಳಿಹೇಳಿದರು.
ಉದಯವಾಣಿಗೆ ಶ್ಲಾಘನೆಮುಖ್ಯ ಅತಿಥಿಗಳು ಹಾಗೂ ಆಹ್ವಾನಿತರಿಂದ ಈ ಸಂದರ್ಭದಲ್ಲಿ ಉದಯವಾಣಿಯ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು. ಸಾಮಾಜಿಕ ಸ್ಪಂದನೆ, ಜನಪರ ಕಾಳಜಿ, ಹೊಸತನದ ಚಿಂತನೆಗಳು, ಎಲ್ಲ ಕ್ಷೇತ್ರಗಳಿಗೂ ನಿರಂತರ ಪ್ರೋತ್ಸಾಹ… ಹೀಗೆ ಉದಯವಾಣಿಯು ನಿಜ ಅರ್ಥದಲ್ಲಿ ಜನಮನದ ಜೀವನಾಡಿ ಎಂಬ ಪ್ರಶಂಸೆ ಅತಿಥಿಗಳಿಂದ ಕೇಳಿಬಂತು. - ಮನೋಹರ ಪ್ರಸಾದ್ News Related Videos:
1. ಬ್ರಿಗೇಡಿಯರ್ I.N. Rai ಅವರ ಅನುಭವ…: //bit.ly/2vXJF6T
2. Special Discussion : Part 1: //bit.ly/2fItDHw
3. Special Discussion : Part 2: //bit.ly/2vAaYn7
4. Special Discussion : Part 3: //bit.ly/2vzTwz4
5. Special Discussion : Part 4: //bit.ly/2wM2zvp
6. Special Discussion : Part 5: //bit.ly/2uENePQ
7. Special Discussion : Part 6: //bit.ly/2uFmQoW