Advertisement

Horoscope: ಈ ರಾಶಿಯವರು ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ

07:34 AM Oct 29, 2024 | Team Udayavani |

ಮೇಷ: ಬಹುದಿನದ ಹಂಬಲಗಳು ಈಡೇರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಅನುಕೂಲ. ಹೊಸ ಹೂಡಿಕೆಗಳ ವಿಷಯದಲ್ಲಿ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ.

Advertisement

ವೃಷಭ: ಲಾಭದ ಮೊತ್ತ ಸಣ್ಣದಾದರೂ ನಷ್ಟದ ಪ್ರಶ್ನೆ ಇಲ್ಲ. ಉದ್ಯೋಗಸ್ಥರಿಗೆ ಸಾಮಾನ್ಯ ತೃಪ್ತಿ. ಕೃಷ್ಯುತ್ಪಾದನೆ ಮಾರಾಟದಿಂದ ತೃಪ್ತಿಕರ ಲಾಭ. ಸರಕಾರಿ ನೌಕರರು ವರ್ಗಾವಣೆಗೆ ಅಂಜಬೇಕಾಗಿಲ್ಲ. ಹಿರಿಯರು, ಗೃಹಿಣಿಯರು, ನಿರಾತಂಕ.

ಮಿಥುನ: ಸಂಕಲ್ಪ ಶಕ್ತಿಯಿಂದ ಪರಿಸ್ಥಿತಿ ಪರಿವರ್ತನೆ. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು. ಹಿತಶತ್ರುಗಳ ಕಾಟ ಶಮನ. ಉದ್ಯಮ ಅಭಿವೃದ್ಧಿಯ ಹೊಸ ಪರ್ವ ಆರಂಭ. ಇಷ್ಟದೇವರ ಸ್ಮರಣೆಯಿಂದ ಶುಭ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಹೊಸಬರ ಸೇರ್ಪಡೆ. ಸ್ಪರ್ಧಾತೀತರಾದ ಉದ್ಯಮಿಗಳ ಸ್ಥಿತಿಯಲ್ಲಿ ಬದಲಾವಣೆ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ.

ಸಿಂಹ: ಎಲ್ಲಿದ್ದರೂ ಜಯಿಸುವವರಿಗೆ ಸೋಲಿನ ಭಯವಿಲ್ಲ. ಉದ್ಯಮದಲ್ಲಿ ಲಾಭ ದಾಯಕ ಪ್ರಗತಿ. ಹಿತಶತ್ರುಗಳಿಂದ ದೂರವಿರಿ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ಗೃಹಿಣಿಯರಿಗೆ ಸಂತೃಪ್ತಿಯ ಮನೋಭಾವ.

Advertisement

ಕನ್ಯಾ: ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕುಟುಂಬದೊಳಗಿನ ವೈಷಮ್ಯ ಸಂಧಾನದಿಂದ ನಿವಾರಣೆ.

ತುಲಾ: ಸುಖ – ದುಃಖಗಳು ಒಂದು ಮಾನಸಿಕ ಸ್ಥಿತಿ ಎಂಬುದನ್ನು ಮರೆಯದಿರಿ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳ ಹಳೆಯ ಸಮಸ್ಯೆ ಪರಿಹಾರ. ಶೋಕಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ.

ವೃಶ್ಚಿಕ: ಪ್ರಾಪಂಚಿಕ ಏರುಪೇರುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಉದ್ಯೋಗದಲ್ಲಿ ಹೇಳುವಂತಹ ಉನ್ನತಿಯಾಗದಿದ್ದರೂ ಕೊರತೆ ಇರಲಾರದು. ವಸ್ತ್ರಾಭರಣ ಖರೀದಿ. ಮರದ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ.

ಧನು: ಉದ್ಯೋಗದಲ್ಲಿ ಎಂದಿನಂತೆ ನಿಶ್ಚಿಂತೆ. ಹೊಟೇಲ್‌ ಉದ್ಯಮಿಗಳಿಗೆ ಗುಣಮಟ್ಟ ನಿರ್ವಹಣೆಯ ಸವಾಲು. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆಯಿಂದ ಲಾಭ. ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ.

ಮಕರ: ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ಹೊಸ ವ್ಯವಹಾರದಲ್ಲಿ ಹೂಡಿಕೆ ಸಾಧ್ಯತೆ. ಚಿನ್ನದ ಹೂಡಿಕೆಯಲ್ಲಿ ಅಧಿಕ ಲಾಭ. ಮನೆಯಲ್ಲಿ ಶುಭಕಾರ್ಯಕ್ಕೆ ನಾಂದಿ.

ಕುಂಭ: ಶೀಘ್ರ ಕಾರ್ಯಸಾಧಿಸಿದ ತೃಪ್ತಿ. ಉದ್ಯೋಗ, ವ್ಯವಹಾರಗಳ ಆತಂಕ ದೂರ. ತರುಣ ಉದ್ಯಮಿಗಳ ಪಾಲಿಗೆ ಶುಭದಿನ. ಹಿರಿಯರ ಮನೆಯಲ್ಲಿ ಶುಭಕಾರ್ಯ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಕುಟುಂಬ ಸಹಿತ ಭೇಟಿ

ಮೀನ: ಉದ್ಯೋಗದಲ್ಲಿ ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ. ಸೋದರ ವರ್ಗದಲ್ಲಿ ಶುಭಕಾರ್ಯ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ನಿರ್ಮಾಣ ವ್ಯವಹಾರ ಪ್ರಗತಿಯಲ್ಲಿ. ಮಕ್ಕಳ ಚಟುವಟಿಕೆಯ ಬಗ್ಗೆ ಗಮನಹರಿಸಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

Advertisement

Udayavani is now on Telegram. Click here to join our channel and stay updated with the latest news.

Next