Advertisement

ಗ್ರಾಪಂ ಗ್ರಂಥಾಲಯಕ್ಕೆ ನವರೂಪ

11:41 AM Oct 19, 2021 | Team Udayavani |

ವಾಡಿ: ಜ್ಞಾನ ದೇಗುಲ ಗ್ರಂಥಾಲಯಕ್ಕೆ ನೂತನ ರೂಪ ನೀಡಿ, ಓದುಗರ ಗಮನ ಸೆಳೆಯಲು ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ಶ್ರಮಿಸುತ್ತಿದ್ದು, ಪ್ರಸಕ್ತ ವರ್ಷ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ.

Advertisement

ಗ್ರಾಮಕ್ಕೆ ಮಂಜೂರಾಗಿರುವ ಸಾರ್ವಜನಿಕ ಗ್ರಂಥಾಲಯ ಇದುವರೆಗೂ ಜಿಲ್ಲಾ ಗ್ರಂಥಾಲಯ ಇಲಾಖೆ ಅಧೀನದಲ್ಲಿ ನಡೆಯುತ್ತಿತ್ತು. ಇದೀಗ ಗ್ರಂಥಾಲಯ ನಿರ್ವಹಣೆ ಜವಾಬ್ದಾರಿಯನ್ನು ಪಂಚಾಯತಿ ಆಡಳಿತಕ್ಕೆ ಒಪ್ಪಿಸಲಾಗಿದೆ.

ದಲಿತಪರ ಹೋರಾಟಗಾರ ಸುಭಾಷ ಯಾಮೇರ ವರ್ಷದ ಹಿಂದೆ ಗ್ರಾಪಂಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಧೂಳಿನಿಂದ ಕೂಡಿದ್ದ ಗ್ರಂಥಾಲಯಕ್ಕೆ ಹೊಸ ರೂಪ ಬಂದಿದೆ.

ಗ್ರಾಮಾಭಿವೃದ್ಧಿ ಜತೆಗೆ ಗ್ರಂಥಾಲಯಕ್ಕೂ ಜೀವ ನೀಡಲು ಮುಂದಾದ ಸುಭಾಷ ಯಾಮೇರ, ಅಭಿವೃದ್ಧಿ ಅಧಿಕಾರಿ ರೇಷ್ಮಾ ಕೋತ್ವಾಲ ಸಹಕಾರ ಪಡೆದು ನೂತನ ಪೀಠೊಪಕರಣ ಖರೀದಿಗೆ ಮುಂದಾದರು. ಮೂಲೆ ಸೇರಿದ್ದ ಅಪಾರ ಮೌಲ್ಯದ ಸಾವಿರಾರು ಸಾಹಿತ್ಯ ಕೃತಿಗಳನ್ನು ಮೆತ್ತಿದ್ದ ಧೂಳು ಜಾಡಿಸಿ ಕಪಾಟಿನಲ್ಲಿ ಜೋಡಿಸಿಟ್ಟಿದ್ದಾರೆ.

ಇದನ್ನೂ ಓದಿ: ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

Advertisement

ಓದುವ ಕೋಣೆಗೆ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಕುರ್ಚಿ, ಮೇಜುಗಳಿಂದ ಕಂಗೊಳಿಸುತ್ತಿರುವ ಗ್ರಂಥಾಲಯ ಕೋಣೆ ಈಗ ಓದುಗರನ್ನು ಸೆಳೆಯುತ್ತಿದೆ. ವಿದ್ಯಾರ್ಥಿಗಳು ಗ್ರಂಥಾಲಯದ ಲಾಭ ಪಡೆಯುತ್ತಿದ್ದಾರೆ. ಅಲ್ಲದೇ ಗ್ರಾಮದ ಅಗಸಿ ಕಟ್ಟೆ ಮೇಲೆ ಹರಟೆ ಹೊಡೆಯುತ್ತಿದ್ದ ವಿದ್ಯಾವಂತರೂ ಈಗ ಗ್ರಂಥಾಲಯಕ್ಕೆ ಆಗಮಿಸಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಜ್ಞಾನದ ಹರಿವು ಹೆಚ್ಚಿಸುವ ಸಾಹಿತ್ಯ ಕೃತಿಗಳ ದರ್ಶನ ನಮ್ಮೂರಿನ ಜನರಿಗೂ ಆಗಬೇಕು ಎನ್ನುವ ಉದ್ದೇಶದಿಂದ ಗ್ರಂಥಾಲಯ ಸುಧಾರಣೆಗೆ ಕ್ರಮ ಕೈಗೊಂಡಿದ್ದೇವೆ. ಅಧಿಕಾರಿಗಳು ಮತ್ತು ವಾರ್ಡ್‌ ಸದಸ್ಯರು ಸಹಕಾರ ನೀಡಿದ್ದಾರೆ. ನಾಡಿನ ಹಿರಿಯ ಸಾಹಿತಿಗಳ ಕೃತಿಗಳನ್ನು ಇನ್ನಷ್ಟು ಖರೀದಿಸಿ ತರುವ ಆಲೋಚನೆಯಿದೆ. –ಸುಭಾಷ ಯಾಮೇರ, ಗ್ರಾಪಂ ಅಧ್ಯಕ್ಷ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next