Advertisement

ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ; ಹಡಗಲಿ ತಾಪಂನಲ್ಲಿ ಹೊಸ ಮರಳು ನೀತಿ ಸದ್ದು

02:11 PM Jun 09, 2020 | mahesh |

ಹೂವಿನಹಡಗಲಿ: ಪಟ್ಟಣದ ತಾಪಂ ರಾಜೀವ್‌ ಗಾಂಧಿ ಸಭಾ ಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಹೊಸ ಮರಳು ನೀತಿ ಕುರಿತು ಸಾಕಷ್ಟು ಚರ್ಚೆ ನಡೆಯಿತು. ತಾಪಂ ಇಒ ಯು.ಎಚ್‌ ಸೋಮಶೇಖರ್‌ ಹೊಸ ಮರಳು ನೀತಿ ಕುರಿತು ಸಭೆಗೆ ಮಾಹಿತಿ ನೀಡಿ, ಜನತೆಗೆ ಸರಳವಾಗಿ ಮರಳು ದೊರಕಿಸಲು 2 ರೀತಿಯ ವ್ಯವಸ್ಥೆ ಮಾಡಲಾಗಿದೆ. ಒಂದರಲ್ಲಿ ಕೆರೆ, ಹಳ್ಳ, ಸಣ್ಣ ಹಳ್ಳಗಳಲ್ಲಿ ದೊರಕುವ ಮರಳ ಹಾಗೂ ಇನ್ನೊಂದರಲ್ಲಿ ಈಗಾಗಲೇ ನಿಗದಿಪಡಿಸಿದಂತೆ ನದಿ, ನದಿ ಪಾತ್ರ ಹಾಗೂ ಅಣೆಕಟ್ಟುಗಳಲ್ಲಿನ ಪ್ರದೇಶದಲ್ಲಿ ದೊರೆಯುವ ಮರಳು ನೀತಿ ಜಾರಿ ಮಾಡಲಾಗಿದೆ
ಎಂದರು.

Advertisement

ಆಗ ತಾಪಂ ಸದಸ್ಯ ಈಟಿ ಲಿಂಗರಾಜು ಮಾತನಾಡಿ, ರಾಜ್ಯ ಸರ್ಕಾರ ಸಾಮಾನ್ಯ ಜನರ ಸಮಸ್ಯೆ ಅರಿತು ಮನೆ ಅಥವಾ ಸ್ವಂತ ಕೆಲಸಕ್ಕೆ ಮರಳುಗಾಗಿ ತೊಂದರೆ ಅನುಭವಿಸಬಾರದು ಎಂದು ಹೊಸ ಮರಳು ನೀತಿ ಜಾರಿ ಮಾಡಿದೆ. ಕೇವಲ 35 ರೂ.ಗಳಿಗೆ ಒಂದು ಟನ್‌ ಮರಳು ನೀಡುತ್ತದೆ. ಆದರೆ ಹಿಂದಿನ ಸರ್ಕಾರದಲ್ಲಿ ಉಳ್ಳವರಿಗೆ ಮಾತ್ರ ಮರಳು ದೊರಕುವಂತಾಗಿತ್ತು ಎಂದರು. ಇದಕ್ಕೆ ತಾಪಂ ಸದಸ್ಯ ಸೋಗಿ ಹಾಲೇಶ್‌ ಪ್ರತಿಕ್ರಿಯಿಸಿ, ಇನ್ನೂ ಯಾವುದೇ ರೀತಿಯಲ್ಲಿ ಹೊಸ ಮರಳು ನೀತಿ ಜಾರಿಯಾಗಿಲ್ಲ. ತಾಲೂಕಿನ ಹಲವು ಕಡೆಯಲ್ಲಿ ನೀತಿಯನ್ನು ಉಲ್ಲಂಘನೆ ಮಾಡಿ ಮರಳು ಹೊಡೆಯುತ್ತಿದ್ದಾರೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಸ್‌.ಬಿ. ಪಾಟೀಲ್‌ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಮುಂಗಾರು ಪ್ರಾರಂಭವಾಗಿದೆ. ರೈತರಿಗೆ ಬೇಕಾಗುವ ಬೀಜ, ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿದೆ ಎಂದರು. ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್‌ ಸಾಲಗೇರಿ ಮಾತನಾಡಿ, ತಾಲೂಕಿನ ಕೆಲ ಹಳ್ಳಿಗಳಲ್ಲಿ ಚಿಕ್ಯೂನ್‌ ಗುನ್ನಾ ಪ್ರಕರಣಗಳು ಕಂಡು ಬಂದಿವೆ. ಅಗತ್ಯ ಮುಂಜಾಗೃತೆ ವಹಿಸಿರುವುದಾಗಿ ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು, ತೋಟಗಾರಿಕೆ, ಜೆಸ್ಕಾಂ ಹೀಗೆ ಪ್ರತಿಯೊಂದು ಇಲಾಖೆಯ ಪ್ರಗತಿ ಕೆಲಸ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪುಷ್ಪಾ ದುದಗಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್‌. ಸೋಮಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next