Advertisement
ಯೋಜನೆಯ ಮೊದಲ ಹಂತದಡಿ ಬೆಂಗಳೂರು, ದಿಲ್ಲಿ, ಲಕ್ನೋ, ರಾಂಚಿ, ಪಾಟ್ನಾ, ಶ್ರೀನಗರ ಹಾಗೂ ಉದಯ್‌ಪುರ್‌ಗಳಿಗೆ ರಿಂಗ್ ರೋಡ್ ಸೌಲಭ್ಯ ಸಿಗಲಿದೆ ಎಂದು ಗಡ್ಕರಿ ವಿವರಿಸಿದರು. ದೇಶದ ಮಹಾ ನಗರಗಳನ್ನು ಬೆಸೆಯುವ “ಭಾರತ ಮಾಲಾ’ ಯೋಜನೆಯಡಿ 2022ರ ಹೊತ್ತಿಗೆ 84 ಸಾವಿರ ಕಿ.ಮೀ.ಗಳಷ್ಟು ರಿಂಗ್ ರಸ್ತೆಗಳನ್ನು ಅಂದಾಜು 6.92 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಉದ್ದೇಶಿಸಿದೆ.
ಮೊದಲ ಹಂತದ ಕಾಮಗಾರಿಗೆ ಬಜೆಟ್‌ನಲ್ಲಿ 84,260 ಕೋಟಿ ರೂ.ಗಳನ್ನು ಅನುದಾನವಾಗಿ ನೀಡುವಂತೆ ಹಣಕಾಸು ಇಲಾಖೆಗೆ ಸಾರಿಗೆ ಸಚಿವಾಲಯ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗೆ ಸ್ಪಂದಿಸಿರುವ ಹಣಕಾಸು ಇಲಾಖೆ, ಈ ಬಾರಿಯ ಬಜೆಟ್‌ನಲ್ಲಿ 66,760 ಕೋಟಿ ರೂ. ನೀಡುವುದಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.