Advertisement

ಶೀಘ್ರ ಭಾರತ-ಕಾಠ್ಮಂಡು ರೈಲ್ವೇ ಲೈನ್‌ ನಿರ್ಮಾಣ: ಪ್ರಧಾನಿ ಮೋದಿ

04:17 PM Apr 07, 2018 | Team Udayavani |

ಹೊಸದಿಲ್ಲಿ : ಭಾರತವನ್ನು ಕಾಠ್ಮಂಡು ಜತೆಗೆ ಜೋಡಿಸುವ ಹೊಸ ರೈಲ್ವೆ ಲೈನ್‌ ನಿರ್ಮಾಣಕ್ಕೆ ಭಾರತ- ನೇಪಾಲ ಒಪ್ಪಿಕೊಂಡಿದ್ದು  ಶೀಘ್ರವೇ ಈ ಯೋಜನೆ ಅನುಷ್ಠಾನವಾಗಲಿದೆ  ಪ್ರಧಾನಿ ನರೇಂದ್ರ ಮೋದಿ ಅವರಿಂದು ಶನಿವಾರ ಹೇಳಿದ್ದಾರೆ.

Advertisement

ಅಲ್ಲದೇ ಉಭಯ ದೇಶಗಳ ನಡುವಿನ ಎಲ್ಲ ಸಂಪರ್ಕ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದಕ್ಕೆ ಉಭಯ ದೇಶಗಳು ಒಪ್ಪಿಕೊಂಡಿರುವಾಗಿ ಪ್ರಧಾನಿ ಮೋದಿ ಅವರು ನೇಪಾಲ ಪ್ರದಾನಿ ಕೆ ಪಿ ಓಲಿ ಅವರೊಂದಿಗೆ ನಡೆಸಿಕೊಟ್ಟ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು. 

“ನೇಪಾಲದೊಂದಿಗೆ ನಾವು ರೈಲು ಮತ್ತು ಜಲಮಾರ್ಗಗಳನ್ನು ಸುಧಾರಿಸುವ ಉದ್ದೇಶ ಹೊಂದಿದ್ದೇವೆ. ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ನಡುವಿನ ಬಲವಾದ ಸಂಬಂಧಗಳಿವೆ. ಅಂತೆಯೇ ನಮ್ಮ ನಡುವಿನ ಮುಕ್ತ ಗಡಿಗಳ ದುರ್ಬಳಕೆಯನ್ನು ನಿಲ್ಲಿಸುವುದಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದರು. 

ನೇಪಾಲ ಪ್ರಧಾನಿ ಓಲಿ ಅವರು ಮಾತನಾಡುತ್ತಾ, ‘ಭಾರತದೊಂದಿಗೆ ಸಂಬಂಧಗಳಿಗೆ ನೇಪಾಲ ಅತ್ಯಧಿಕ ಮಹತ್ವವನ್ನು ಕೊಡುತ್ತದೆ; ನಮ್ಮ ನಡುವೆ ಐತಿಹಾಸಿಕ ಮತ್ತು ಪ್ರಾಕ್ತನ ಸಂಬಂಧಗಳಿವೆ. ಪರಸ್ಪರರು ಕೊಟ್ಟು ಪಡೆಯುವಂತಹ ಅನೇಕ ವಿಷಯಗಳು ಇವೆ. ಸಾಧ್ಯವಿರುವಷ್ಟು ಬೇಗನೆ ನೇಪಾಲಕ್ಕೆ ಬನ್ನಿ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದೇನೆ. ಅಂತೆಯೇ ಅವರ ಭೇಟಿ ಶೀಘ್ರವೇ ಸಾಧ್ಯವಾಗಲೆಂದು ಹಾರೈಸುತ್ತೇನೆ’ ಎಂದು ಹೇಳಿದರು.

ಉಭಯ ನಾಯಕರು ಅನೇಕ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸುವ ಮತ್ತು ಮೇಲ್ಮಟ್ಟಕ್ಕೆ ಒಯ್ಯುವ ನಿಟ್ಟಿನಲ್ಲಿ  ಮಾತುಕತೆ ನಡೆಸಿದರು. ಮೋದಿ ಅವರು ನಿನ್ನೆ ಶುಕ್ರವಾರ ನೇಪಾಲಿ ಪ್ರಧಾನಿ ಓಲಿ ಅವರನ್ನು ದಿಲ್ಲಿಯಲ್ಲಿನ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು. 

Advertisement

ನೇಪಾಲ ಪ್ರಧಾನಿ ಇಂದು ಶನಿವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಭೇಟಿಯಾದರು. ಓಲಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ನೀಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next