Advertisement

ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಹೊಸ ನಿಬಂಧನೆ

10:12 AM Jan 07, 2020 | mahesh |

ಹೊಸದಿಲ್ಲಿ: ವೈಯಕ್ತಿಕವಾಗಿ ಆದಾಯ ತೆರಿಗೆ ರಿಟರ್ನ್ಸ್ ನಿಯಮಗಳಲ್ಲಿ ಕೆಲವು ಬದ ಲಾವಣೆಗಳನ್ನು ಮಾಡಿರುವ ಕೇಂದ್ರ ಆದಾಯ ತೆರಿಗೆ ಇಲಾಖೆ, ವಾರ್ಷಿಕವಾಗಿ 1 ಲಕ್ಷ ರೂ. ವಿದ್ಯುತ್‌ ಶುಲ್ಕ ಪಾವತಿಸುವವರಿಗೆ, ಜಂಟಿ ಮಾಲಕತ್ವದಲ್ಲಿ ಮನೆಯನ್ನು ಹೊಂದಿರುವವರಿಗೆ ಹಾಗೂ ವಿದೇಶ ಪ್ರವಾಸಕ್ಕಾಗಿ 2 ಲಕ್ಷ ರೂ. ಗಳಿಗಿಂತಲೂ ಅಧಿಕವಾಗಿ ಖರ್ಚು ಮಾಡಿದ ವರಿಗೆ “ಐಟಿಆರ್‌-1′, “ಐಟಿಆರ್‌-4′ ಅರ್ಜಿ ನಮೂನೆಗಳು ಅನ್ವಯಿಸುವುದಿಲ್ಲ ಎಂದಿದೆ.

Advertisement

ಇದಕ್ಕಾಗಿ, 2020-21ರ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ನಿಯಮಗಳಲ್ಲಿ ತಿದ್ದುಪಡಿ ತಂದು ಜ. 3ರಂದು ಆದೇಶ ಹೊರಡಿಸಲಾಗಿದೆ. ಹೊಸ ನಿಯಮಗಳು ಜ. 1ರಿಂದ ಜಾರಿಗೆ ಬಂದಿವೆ.

ಯಾವ ಫಾರ್ಮ್ ಯಾರಿಗೆ?
ವಾರ್ಷಿಕವಾಗಿ 50 ಲಕ್ಷ ರೂ.ಗಳೊಳಗೆ ಆದಾಯ ಹೊಂದಿರುವವರು ಹಾಗೂ ಸಾಮಾನ್ಯ ನಿವಾಸಿಗಳು “ಐಟಿಆರ್‌-1 ಸಹಜ್‌’ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಇನ್ನು, “ಐಟಿಆರ್‌-1 ಸುಗಮ್‌’ ಮೂಲಕ ಹಿಂದೂ ಅವಿಭಕ್ತ ಕುಟುಂಬದ ಸದಸ್ಯರು ಹಾಗೂ 50 ಲಕ್ಷ ರೂ. ಮೀರದ ಆದಾಯ ಹೊಂದಿರುವ ವಾಣಿಜ್ಯ ಸಂಸ್ಥೆಗಳ ಪಾಲುದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಇದಲ್ಲದೆ, ವೃತ್ತಿಪರ ಉದ್ಯೋಗ ಅಥವಾ ವಾಣಿಜ್ಯ ಸಂಸ್ಥೆಯ ಮೂಲಕ ನಿಶ್ಚಿತ ಆದಾಯ ಹೊಂದಿರುವ ವ್ಯಕ್ತಿಗಳೂ “ಐಟಿಆರ್‌-1 ಸುಗಮ್‌’ ಮೂಲಕ ರಿಟರ್ನ್ಸ್ ಸಲ್ಲಿಸಬಹುದಾಗಿದೆ.

ಐಟಿಆರ್‌-1, ಐಟಿಆರ್‌-4 ಯಾರಿಗೆ ಅನ್ವಯವಾಗಲ್ಲ?
– ಮನೆ ಅಥವಾ ಮನೆ ಸಂಬಂಧಿತ ಸ್ಥಿರಾಸ್ತಿಗೆ ಜಂಟಿ ಮಾಲಕತ್ವ ಹೊಂದಿರುವ ವ್ಯಕ್ತಿಗಳಿಗೆ
– ತಮ್ಮ ಬ್ಯಾಂಕ್‌ ಖಾತೆಯಲ್ಲಿ 1 ಕೋಟಿ ರೂ.ಗಳಿಗಿಂತ ಹೆಚ್ಚಿನ ಠೇವಣಿ ಇಟ್ಟಿರುವವರು.
– ವಿದೇಶ ಪ್ರವಾಸಕ್ಕಾಗಿ 2 ಲಕ್ಷ ರೂ.ಗಳನ್ನು ಖರ್ಚು ಮಾಡಿರುವವರು.
– ವಾರ್ಷಿಕವಾಗಿ 1 ಲಕ್ಷ ರೂ.ಗಳಷ್ಟು ವಿದ್ಯುತ್‌ ಬಿಲ್‌ ಕಟ್ಟಿರುವವರು.

ಸದ್ಯದಲ್ಲೇ ಪ್ರಕಟನೆ
ಈವರೆಗೆ ಐಟಿಆರ್‌-1, ಐಟಿಆರ್‌-4 ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದವರಿಗೆ ಪರಿಷ್ಕೃತ ನಿಯಮಗಳು ಅಡ್ಡಿಯಾದಲ್ಲಿ ಅಂಥವರಿ ಗಾಗಿಯೇ ಬೇರೊಂದು ಮಾದರಿಯ ಅರ್ಜಿ ಬಿಡುಗಡೆ ಮಾಡಲಾಗುತ್ತದೆ. ಆ ಕುರಿತಾಗಿ ಶೀಘ್ರ ದಲ್ಲಿಯೇ ಪ್ರಕಟನೆ ನೀಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Advertisement

ಸಲ್ಲಿಸಲೇಬೇಕಾದ ದಾಖಲೆಗಳು
– ಆದಾಯ, ನಿಶ್ಚಿತ ಹೂಡಿಕೆಗಳು ಇನ್ನಿತರ ವ್ಯವಹಾರಗಳ ದಾಖಲೆಗಳು
– ಪಾಸ್‌ಪೋರ್ಟ್‌ ಇದ್ದಲ್ಲಿ ಅದರ ದಾಖಲೆಗಳು.
– 2 ಲಕ್ಷ ರೂ. ಮೀರಿದ ವಿದೇಶಿ ಪ್ರವಾಸ ಕೈಗೊಂಡಿದ್ದಲ್ಲಿ ಅದರ ವಿವರ
– 1 ಲಕ್ಷ ರೂ.ಗಿಂತ ಹೆಚ್ಚಿನ ವಿದ್ಯುತ್‌ ಶುಲ್ಕ ಪಾವತಿಸಿದ್ದಲ್ಲಿ ಅದರ ರಸೀದಿಗಳು
– ಬ್ಯಾಂಕ್‌ ಖಾತೆಗಳಲ್ಲಿ 1 ಕೋಟಿ ರೂ. ಠೇವಣಿ ಇಟ್ಟಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳು

– ದುಬಾರಿ ವಿದ್ಯುತ್‌ ಶುಲ್ಕ, ಮನೆ ಜಂಟಿ ಮಾಲಕತ್ವ , ದುಬಾರಿ ವಿದೇಶ ಪ್ರವಾಸ ಮಾಡಿದವರಿಗೆ ಐಟಿಆರ್‌-1, ಐಟಿಆರ್‌ 4 ಅರ್ಜಿ ಅನ್ವಯವಾಗದು
– ಐಟಿಆರ್‌-1, ಐಟಿಆರ್‌-4 ಅನ್ವಯಿಸದವರಿಗೆ ಬೇರೊಂದು ಅರ್ಜಿ ನಮೂನೆ ಸದ್ಯದಲ್ಲೇ ಪ್ರಕಟ

Advertisement

Udayavani is now on Telegram. Click here to join our channel and stay updated with the latest news.

Next