Advertisement

ಸೌದಿಯಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಗೆ ಅಪಮಾನ

09:11 AM Apr 30, 2022 | Team Udayavani |

ದುಬೈ: ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ತಂಡದೊಂದಿಗೆ ಸೌದಿ ಅರೇಬಿಯಾದ ಮೆದಿಯಾನಾದಲ್ಲಿರುವ ಮಸ್ಜಿದ್‌-ಇ-ನಬಾವಿಗೆ ತೆರಳಿದಾಗ ಅಲ್ಲಿನ ಪಾಕ್‌ ಮೂಲದ ಜನರು ಅವರಿಗೆ ಅವಮಾನ ಮಾಡಿದ್ದಾರೆ.

Advertisement

ಶೆಹಾºಜ್‌ ನಡೆದುಬರುತ್ತಿದ್ದರೆ, ಜನರು ಅವರಿಗೆ “ಕಳ್ಳ, ಕಳ್ಳ, ಪಾಕಿಸ್ತಾನಿ ವಿರೋಧಿ’ ಎಂದು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಲ್ಲಿನ ಜನರು ಶೆಹಾºಜ್‌ ಅವರನ್ನು ವಿದೇಶಿಗರ ಮಾತಿನಂತೆ ಸರ್ಕಾರ ನಡೆಸುತ್ತಿರುವ ದೇಶ ದ್ರೋಹಿ ಎಂದು ದೂರಿದ್ದಾರೆ.

ಈ ಹಿಂದಿನ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಶೆಹಾºಜ್‌ ಅವರನ್ನು ಇದೇ ರೀತಿ ದೂರಿದ್ದರು. ಈ ವಿಚಾರವಾಗಿ ಪಾಕ್‌ನ ಈಗಿನ ಮಾಹಿತಿ ಸಚಿವಾಲಯದ ಸಚಿವರಾಗಿರುವ ಮರಿಯುಮ್‌ ಔರಂಗಜೇಬ್‌ ಮಾತನಾಡಿದ್ದು, “ಹಳೆದ ಸರ್ಕಾರ ಪೂರ್ತಿ ಪಾಕಿಸ್ತಾನವನ್ನು ಹಾಳು ಮಾಡಿದೆ. ಆದರೆ ನಾವು ನಮ್ಮ ದೇಶವನ್ನು ಸರಿ ದಾರಿಗೆ ತರುತ್ತೇವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next